Home namma chikmagalur chikamagalur ಬೈಕ್‌ಗೆ ನಿಂದ ಬಿದ್ದು ಮಹಿಳೆ ಸಾವು
chikamagalurCrime NewsHomeLatest Newsnamma chikmagalur

ಬೈಕ್‌ಗೆ ನಿಂದ ಬಿದ್ದು ಮಹಿಳೆ ಸಾವು

Share
Share

ಚಿಕ್ಕಮಗಳೂರು: ಬೈಕ್‌ಗೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕ ಏಕಾಏಕಿ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ತಿರುಗುಣ ಗ್ರಾಮದ ಶಾರದಾ ಮೃತಪಟ್ಟವರು. ಅವರ ಸಂಬಂಧಿ ರಘು ಟಿ.ಡಿ. ಅವರು ಚಲಾಯಿಸುತ್ತಿದ್ದ ಕೆಎ-09-ಎಚ್‌ಎಂ-8473 ನೋಂದಣಿಯ ಬೈಕ್‌ನಲ್ಲಿ ಶಾರದಾ ಅವರು ಆ.20ರಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ದಿನಸಿ ಸಾಮಗ್ರಿ ಖರೀದಿಸಲು ಚಿಕ್ಕಮಗಳೂರಿಗೆ ಬಂದಿದ್ದರು.

ದಿನಸಿ ಖರೀದಿಸಿ ಸಂಜೆ ಸುಮಾರು 4.20ಕ್ಕೆ ತಿರುಗುಣಕ್ಕೆ ವಾಪಸ್ ತೆರಳುತ್ತಿದ್ದ ವೇಳೆ ಚಿಕ್ಕಮಗಳೂರು ನಗರದ ಕೆಎಂ ರಸ್ತೆಯ ಗಂದರ್ವ ನರ್ಸರಿ ಮುಂಭಾಗ ಬೈಕ್‌ಗೆ ಏಕಾಏಕಿ ನಾಯಿ ಅಡ್ಡ ಬಂದಿದೆ. ಈ ವೇಳೆ ರಘು ಅವರು ಬೈಕ್ ನಿಯಂತ್ರಿಸಲಾಗದೆ ತಕ್ಷಣ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಶಾರದಾ ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ.

ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಶಾರದಾ ಅವರ ತಲೆ, ಕಿವಿ ಹಾಗೂ ಬಾಯಿಯಿಂದ ರಕ್ತಸ್ರಾವವಾಗಿತ್ತು. ಸ್ಥಳೀಯರ ಸಹಾಯದಿಂದ ಅವರನ್ನು ಆಟೋದಲ್ಲಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಹಾಸನದ ಜನಪ್ರಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅಲ್ಲಿಯೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಶಾರದಾ ಅವರನ್ನು ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆ.21ರಂದು ಬೆಳಗಿನ ಜಾವ 2.25ರ ಸುಮಾರಿಗೆ ಬೆಂಗಳೂರಿನ ಎಂಟನೇ ಮೈಲಿ ಸಮೀಪ ತಲುಪುವಷ್ಟರಲ್ಲಿ ಶಾರದಾ ಮೃತಪಟ್ಟಿದ್ದಾರೆ.

ಬಳಿಕ ಮೃತದೇಹವನ್ನು ಚಿಕ್ಕಮಗಳೂರಿಗೆ ತಂದು ವೈದ್ಯರ ಸಲಹೆಯಂತೆ ಶವಾಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಶಾರದಾ ಅವರ ಸಂಬಂಧಿ ಸಾಗರ್ ಟಿ.ಎಲ್. ಅವರು ನೀಡಿದ ದೂರಿನ ಮೇರೆಗೆ ಸಂಚಾರ ಪೊಲೀಸ್ ಠಾಣೆಯಲ್ಲಿ ಮೊ.ನಂ.88/2026, ಬಿಎನ್‌ಎಸ್ ಕಲಂ 281 ಹಾಗೂ 106(1)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Woman dies after falling off bike

Share

Leave a comment

Leave a Reply

Your email address will not be published. Required fields are marked *

Don't Miss

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ, ದೇಶದ ಸಾಧನೆಗಳನ್ನು ಸ್ಮರಿಸುವ, ಸ್ವಾತಂತ್ರ್ಯದ ಮೌಲ್ಯಗಳನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು...

ಕಸ್ತೂರಿ ರಂಗನ್ ವರದಿ ಮರುಪರಿಶೀಲಿಸಲು ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ತಕ್ಷಣವೇ ಬರಗಾಲವೆಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮಲೆನಾಡಿನ 137 ಗ್ರಾಮಗಳಿಗೆ ಕಂಟಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಪುನಃ ಪರಿಶೀಲಿಸಿ ಜನವಸತಿ...

Related Articles

ಅಧಿಕಾರ ಎಂಬ ಮಾಯಾ ಜಿಂಕೆ ಮರೆಯಾಗಿದ್ದು ಏಕೆ ?

ಚಿಕ್ಕಮಗಳೂರು: ಕಳೆದ ನಾಲ್ಕು ವರೆ ವರ್ಷಗಳ ಹಿಂದೆಯೇ ವಿಧಾನ ಪರಿಷತ್ ಸದಸ್ಯರಾಗ ಬೇಕಿದ್ದ ಗಾಯಿತ್ರಿ ಶಾಂತೇಗೌಡ...

ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ-ಲೂಟಿಗಾಗಿ ಪೈಪೋಟಿ

ಚಿಕ್ಕಮಗಳೂರು: ಬಿಜೆಪಿ ಸರ್ಕಾರದಲ್ಲಿ ಶಾಸಕರ ನಡುವೆ ಕ್ಷೇತ್ರದ ಅಭಿವೃದ್ಧಿಗೆ ಪೈಪೋಟಿ ನಡೆದರೆ, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ,ಲೂಟಿಗಾಗಿ...

ಸ್ವಾವಲಂಬನೆ-ಸಮಾಜ ಅವಕಾಶವೇ ಸಹಕಾರಿ ಚಳುವಳಿ ಉದ್ದೇಶ

ಚಿಕ್ಕಮಗಳೂರು: ಸಹಕಾರಿ ಚಳುವಳಿಯ ಮೂಲತತ್ವವೇ ಸ್ವಾವಲಂಬನೆ, ಪರಸ್ಪರ ಸಹ ಕಾರ, ಸಮಾನ ಅವಕಾಶ ಹಾಗೂ ಸಾಮಾಜಿಕ...

ಅಕ್ರಮ ಮರಳು ಸಾಗಾಟ: 407 ಲಾರಿ ವಶ, ಚಾಲಕ ಪೊಲೀಸ್ ವಶಕ್ಕೆ

ಶೃಂಗೇರಿ: ಪರವಾನಗಿ ಇಲ್ಲದೆ 407 ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇಲೆ ಶೃಂಗೇರಿ ಪೊಲೀಸರು...