ಚಿಕ್ಕಮಗಳೂರು: ಕಳೆದ ನಾಲ್ಕು ವರೆ ವರ್ಷಗಳ ಹಿಂದೆಯೇ ವಿಧಾನ ಪರಿಷತ್ ಸದಸ್ಯರಾಗ ಬೇಕಿದ್ದ ಗಾಯಿತ್ರಿ ಶಾಂತೇಗೌಡ ಅಧಿಕಾರ ಪಡೆಯಲು ಹೈಕೋರ್ಟ್, ಸುಪ್ರೀಂ ಕೋರ್ಟ್ ನಲ್ಲಿ ಕೋಟ್ಯಾಂತರ ಹಣ ಖರ್ಚು ಮಾಡಿ ನ್ಯಾಯಲಯದ ಮೂಲಕ ವಿಧಾನ ಪರಿಷತ್ ಸದಸ್ಯರಾದರು.
ಇಂದು, ನಾಳೆ ಎಂದು ಫಲಿತಾಂಶಕ್ಕೆ ಕಾದವರು ಮೂರು ನಾಲ್ಕು ಬಾರಿ ಪಟಾಕಿ ಸಿಡಿಸಿ,ಹೂವು ಹಾರ,ತುರಾಯಿಯೊಂದಿಗೆ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದ ಅಮರ ನೆನಪುಗಳು ಕಮರಿ ಹೋಗುವ ಸಮಯದಲ್ಲಿ ಇನ್ನುಳಿದ ಒಂದು ವರೆ ವರ್ಷಗಳ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ಸ್ವೀಕರಿಸಲು ರಾಜಧಾನಿ ಗೆ ಹೋಗುವ ಮೊದಲು ಉಪ ಸಭಾಪತಿ ಗ್ಯಾರಂಟಿ ಎನ್ನುವಾಗ ದೆಹಲಿ ಹೈಕಮಾಂಡ್ ಲಿಸ್ಟ್ ನಲ್ಲಿ ಮಂತ್ರಿ ಸ್ಥಾನಕ್ಕೆ ಗಾಯಿತ್ರಿ ಶಾಂತೇಗೌಡರ ಹೆಸರು ಬಂದಿದ್ದು ನೋಡಿ ” ಅಧಿಕಾರದ ಮಾಯಾ ಜಿಂಕೆ “ಅಂಗೇ ಬಂದು ಈಂಗೇ ಹೋಯಿತು. ಎನ್ನುವ ಪರಿಸ್ಥಿತಿ ಬಂದಿತು.ಕಾಂಗ್ರೆಸ್ ನ ಪ್ರಭಾವಿ ಮುಖಂಡ ಸಿದ್ದರಾಮಯ್ಯ ಇದಕ್ಕೆ ತಡೆ ಹಾಕಿದರು ಎಂಬುದು ಬಹಿರಂಗ ಸತ್ಯ.
ಮಂತ್ರಿ ಆಗಿದ್ದು ಹೇಗೆ?
ಬಹಳ ವರ್ಷಗಳ ಹಿಂದಿನಿಂದಲೂ ಗಾಯಿತ್ರಿ ಶಾಂತೇಗೌಡ ರಿಗೆ ರಾಜಕೀಯವಾಗಿ ಅನ್ಯಾಯವಾಗಿದೆ ಎಂದು ಅರಿತಿದ್ದ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಾಯಿತ್ರಿ ಶಾಂತೇಗೌಡ. ಮೇಲ್ಮನೆಯ ವಿಧಾನ ಪರಿಷತ್ ಉಪಸಭಾಪತಿ ಸ್ಥಾನ ಕೊಡಬೇಕು ಎಂಬ ನಿರ್ಣಯ ತೆಗೆದುಕೊಂಡಿದ್ದರು ಎನ್ನುವ ಸಮಯದಲ್ಲಿ ಗಾಯಿತ್ರಿ ಶಾಂತೇಗೌಡರ ಹೆಸರು ಮಂತ್ರಿ ಪಟ್ಟಿಯಲ್ಲಿ ಬಂದಿದ್ದು ನೋಡಿ ಸಿದ್ದರಾಮಯ್ಯ ಕೆರಳಿ ಕೆಂಡವಾಗಿದ್ದರು ಜೊತೆಗೆ ಅಧಿಕಾರ ಸ್ವೀಕರ ಕಾರ್ಯಕ್ರಮಕ್ಕೆ ಗೈರು ಹಾಜರಾಗಿ ಹೈಕಮಾಂಡ್ ಗೆ ಶೆಡ್ಡು ಹೊಡೆದರು. ಇದರ ಫಲವಾಗಿ ಗಾಯಿತ್ರಿಗೆ ದೊರೆತ ಮಂತ್ರಿ ಸ್ಥಾನಕ್ಕೆ ಕೊಕ್ಕೆ ಹಾಕಲಾಯಿತು. ಇತ್ತಾ ಮಂತ್ರಿ ಸ್ಥಾನ ಪೆಡಿಂಗ್ ಆಗಿದೆ.
ದೂರಿಗೆ ಸಂಬಂಧಿಸಿದಂತೆ ದೆಹಲಿ ಮಟ್ಟದಲ್ಲಿ ಪ್ರಭಾವ ಬೆಳೆಸಿಕೊಂಡಿದ್ದರ ಫಲದ ಜೊತೆಗೆ ವ್ಯವಹಾರ ನಡೆದಿದೆ ಎಂಬ ಸುದ್ದಿ ಮಾತ್ರ ಹರಿದಾಡುತ್ತಿದೆ. ಎಷ್ಟು? ಏನು? ಎಂಬುದು ನಿಗೂಢವಾಗಿ ಉಳಿದಿಲ್ಲ ಕೊಟ್ಟವರಿಗೆ ಮತ್ತು ತೆಗೆದುಕೊಂಡವರಿಗೆ ನಿಖರ ಮಾಹಿತಿ ಇರಬಹುದು.
ವಿಧಾನ ಪರಿಷತ್ ಉಪಸಭಾಪತಿ ಸ್ಥಾನವು ಇಲ್ಲ. ಬೆಳಗ್ಗೆ ಮಂತ್ರಿ ಸ್ಥಾನಕ್ಕೆ ಹೆಸರು ಫೈನಲ್,ಸಂಜೆ ವೇಳೆಗೆ ಪೆಡಿಂಗ್ ಇದಕ್ಕೆ ಹೇಳುವುದು ” ರಾಜಕೀಯ “ಎಂದು ಒಟ್ಟಾರೆ ಜಿಲ್ಲೆಯ ರಾಜಕಾರಣದಲ್ಲಿ ಮಾಯಾ ಜಿಂಕೆ ಓಡಾಡಿದ್ದು ಮಾತ್ರ ಗ್ಯಾರಂಟಿ.
Why has the magical deer of power disappeared?
Leave a comment