ಕಡೂರು : ಚಲಿಸುತ್ತಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಘಟನೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಂಚನಹಳ್ಳಿ ಗ್ರಾಮದ ನಿವಾಸಿ ನಂದೀಶ್ ಎಂಬುವರು ತಮ್ಮ ತೋಟದ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಚಲಿಸುತ್ತಿದ್ದ ಬೈಕ್‌ನಿಂದ ದಿಢೀರನೆ ದಟ್ಟ ಹೊಗೆ ಹೊರಬರುವುದನ್ನು ಗಮನಿಸಿದ ನಂದೀಶ್, ತಕ್ಷಣವೇ ವಾಹನವನ್ನು ನಿಲ್ಲಿಸಿ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂದೀಶ್ ಅವರು ಸುಮಾರು ಒಂದೂವರೆ ವರ್ಷದ ಹಿಂದೆ ಹುಳಿಯಾರಿನಿಂದ ಸೆಕೆಂಡ್‌ಹ್ಯಾಂಡ್ ಎಲೆಕ್ನಿಕ್ ಬೈಕ್ ಖರೀದಿಸಿದ್ದರು.
ರಸ್ತೆ ಮಧ್ಯದಲ್ಲೇ ಬೆಂಕಿ ಹೊತ್ತಿಕೊಂಡಿದ್ದರಿಂದ ಸುತ್ತಮುತ್ತ ಎಲ್ಲಿಯೂ ತಕ್ಷಣಕ್ಕೆ ನೀರು ಸಿಗಲಿಲ್ಲ.
ಬೆಂಕಿ ನಂದಿಸಲು ನೀರಿಗಾಗಿ ಹುಡುಕಾಟ ನಡೆಸುವಷ್ಟರಲ್ಲೇ ಬೆಂಕಿಯ ಕೆನ್ನಾಲಿಗೆಗೆ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಸವಾರನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
A sudden fire broke out on a moving electric bike.
Leave a comment