Home namma chikmagalur chikamagalur ನಿವೇಶನಕ್ಕಾಗಿ ಒತ್ತಾಯಿಸಿ 4ನೇ ದಿನಕ್ಕೆ ಮುಂದುವರೆದ ಧರಣಿ
chikamagalurHomeLatest Newsnamma chikmagalur

ನಿವೇಶನಕ್ಕಾಗಿ ಒತ್ತಾಯಿಸಿ 4ನೇ ದಿನಕ್ಕೆ ಮುಂದುವರೆದ ಧರಣಿ

Share
Oplus_131072
Share

ಮೂಡಿಗೆರೆ: ತಾಲೂಕಿನ ಮಣ್ಣಿಕೆರೆ ಗ್ರಾಮದಲ್ಲಿ ಟಿಯುಸಿಐ ಮತ್ತು ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ನಿವೇಶನ ರಹಿತರು ನಿವೇಶನಕ್ಕಾಗಿ ಒತ್ತಾಯಿಸಿ ಶುಕ್ರವಾರ ಆರಂಭಗೊಂಡ ಧರಣಿ ಸೋಮವಾರ ೪ನೇ ದಿನ ಮುಂದುವರೆಯಿತು.

ಈ ಸಂದರ್ಭದಲ್ಲಿ ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಕಳೆದ ೧೦ ವರ್ಷದ ಹಿಂದೆ ನಿವೇಶನಕ್ಕಾಗಿ ಕಾಯ್ದಿರಿಸಿದ್ದ ತಾಲೂಕಿನ ಮಣ್ಣಿಕೆರೆ ಗ್ರಾಮದ ಸರ್ವೇ ನಂಬರ್ ೧೪೪ ರಲ್ಲಿ ೩.೨೦ ಎಕರೆ ಸರಕಾರಿ ಭೂಮಿಯಲ್ಲಿ ನಿವೇಶನ ರಹಿತರಿಗೆ ಇಂದಿಗೂ ಫಲಾನುಭವಿಗಳ ಪಟ್ಟಿ ತಯಾರಿಸಿಲ್ಲ. ಧರಣಿ ಪ್ರಾರಂಭಿಸಿ ೪ ದಿನವಾಗಿದೆ.

ತಾ.ಪಂ. ಇಒ ದಯಾವತಿ ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದು ಬಿಟ್ಟರೆ, ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಪ್ರಭಾವಿ ವ್ಯಕ್ತಿಯೋರ್ವರು ಮನೆ ಕಟ್ಟಿಕೊಳ್ಳಲು ಬಿಟ್ಟಿದ್ದಾರೆ. ಆದರೆ ನಮಗೆ ಮಾತ್ರ ತೆರವು ಮಾಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.

ಕೆಲವರು ಹೋರಾಟದ ದಿಕ್ಕು ತಪ್ಪಿಸಲು ನಿವೇಶನ ರಹಿತರಿಗೆ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಬಗ್ಗುವುದಿಲ್ಲ. ಈಗಾಗಲೇ ನಮ್ಮ ಹೋರಾಟಕ್ಕೆ ವಿವಿಧ ಪಕ್ಷ ಹಾಗೂ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದ್ದು, ಇದರಿಂದ ಹೋರಾಟಕ್ಕೆ ಇನ್ನಷ್ಟು ಬಲ ಸಿಕ್ಕಿದೆ. ನಮ್ಮ ನ್ಯಾಯಯುತ ಹೋರಾಟಕ್ಕೆ ಜಯ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲವೆಂದು ಹೇಳಿದರು.

ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಅಂಗಡಿ ಚಂದ್ರು, ಭೀಮ ಆರ್ಮಿಯ ಹಾದಿಗೆ ಜಯಕುಮಾರ್, ಖಾಲಿದ್, ಚಂದ್ರು, ನಾಗೇಶ್ ಸಾಲುಮರ, ಆದಾಮ್, ಹನೀಫ್, ಯಶೊಧ, ಜಾನಕಿ, ಸವಿತ, ಕೃಷ್ಣ ಕಮ್ಮರಗೂಡು, ರವಿ ಶುಭನಗರ, ರೋಜಿ ಮತ್ತಿತರರಿದ್ದರು.

Protest demanding land in Mannikere village continues for 4th day

Share

Leave a comment

Leave a Reply

Your email address will not be published. Required fields are marked *

Don't Miss

ತರೀಕೆರೆ-ಕಡೂರು-ಚಿಕ್ಕಮಗಳೂರು: ಅದಲು-ಬದಲು ಕಾಂಗ್ರೆಸ್, ಬಿಜೆಪಿ ಕಿತ್ತಾಟ !

ಚಿಕ್ಕಮಗಳೂರು: ರಸ್ತೆ ಕಾಮಗಾರಿಗಳು, ಭದ್ರ ಉಪಕಣಿವೆ ಯೋಜನೆಗಳಿಗೆ ಕಾಂಗ್ರೆಸ್ ಶಾಸಕರುಗಳಲ್ಲಿ “ಸಿಟ್ಟು” ಮಡಿಗಟ್ಟಿದೆ. ಇದಕ್ಕೆ ಪ್ರತಿಯಾಗಿ ವಿಧಾನ ಪರಿಷತ್ ಸದಸ್ಯಮತ್ತು ಬಿಜೆಪಿ ಮುಖಂಡ ಸಿ.ಟಿ.ರವಿ ಹಾದಿ ರಂಪ,ಬೀದಿ ರಂಪ ಮಾಡಿಕೊಂಡು ದೂರುಪ್ರತಿದೂರು...

ಸ್ಥಳೀಯ ಶಾಸಕರ ಪ್ರಚೋದನಾಕಾರಿ ಹೇಳಿಕೆಯಿಂದ ಶಾಸಕ ಸಿ.ಟಿ ರವಿ ಹಲ್ಲೆಗೆ ಯತ್ನ

ಚಿಕ್ಕಮಗಳೂರು: ರಾಂಪುರ ರಸ್ತೆ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಪ್ರಚೋದನಾಕಾರಿ ಹೇಳಿಕೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ವಿಧಾನಪರಿಷತ್ ಶಾಸಕ ಸಿ.ಟಿ ರವಿ ರವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು...

Related Articles

ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಜನಪ್ರತಿನಿಧಿಗಳಿಂದ ಸ್ವಾಗತ

ಚಿಕ್ಕಮಗಳೂರು:  ಬೇಸಿಗೆ ರಜೆ ಮುಗಿದು ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದ್ದು, ಅತ್ಯಂತ ಹುರುಪಿನಿಂದ ಶಾಲೆಗಳಿಗೆ ಆಗಮಿಸಿದ ಮಕ್ಕಳಿಗೆ...

ಮತದಾರರ ಪಟ್ಟಿ ಶುದ್ಧೀಕರಣಕ್ಕೆ ಆದ್ಯತೆ ನೀಡಿ

ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಸುಸೂತ್ರ ಹಾಗೂ ಪಾರದರ್ಶಕವಾಗಿ ನಡೆಯಬೇಕಾದರೆ ದೋಷಮುಕ್ತ ಮತದಾರರ ಪಟ್ಟಿ ಅತ್ಯಗತ್ಯ....

 ಮಕ್ಕಳ ಶಾಲಾ ಹಾಜರಾತಿ ಬಗ್ಗೆ ಪೋಷಕರು ನಿಗಾ ವಹಿಸಬೇಕು

ಚಿಕ್ಕಮಗಳೂರು: ಮಕ್ಕಳು ಪ್ರತಿದಿನ ತಪ್ಪದೆ ಶಾಲೆಗೆ ಹಾಜರಾಗಬೇಕು. ಶಿಕ್ಷಣದಲ್ಲಿ ನಿರಂತರತೆ ಅತ್ಯಂತ ಮುಖ್ಯವಾಗಿದ್ದು, ಪೋಷಕರು ಈ...

ಮೂಡಿಗೆರೆ ಪ.ಪಂ. ಎದುರು ಕಸ ಹಾಕಿ ಪ್ರತಿಭಟನೆ

ಮೂಡಿಗೆರೆ: ಪ.ಪಂ. ಅಧಿಕಾರಿಗಳು ಪಟ್ಟಣದ ಘನತ್ಯಾಜ್ಯ ಸಂಗ್ರಹ, ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲಾಗಿದ್ದಾರೆಂದು ಪಟ್ಟಣದ ನಿವಾಸಿಗಳು...