Home namma chikmagalur chikamagalur ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಭಾವ್ಯ ಪಟ್ಟಿ ಪ್ರಕಟ
chikamagalurHomeLatest Newsnamma chikmagalur

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಭಾವ್ಯ ಪಟ್ಟಿ ಪ್ರಕಟ

Share
Share

ಚಿಕ್ಕಮಗಳೂರು: ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯವು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ಸಂಬಂಧ ಪ್ರಮುಖ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳ ASDDO (ಗೈರುಹಾಜರಿ, ಸ್ಥಳಾಂತರ, ಮರಣ, ನಕಲಿ ಮತ್ತು ಇತರೆ) ಸಂಭಾವ್ಯ ಪಟ್ಟಿಯನ್ನು ಆಗಸ್ಟ್ 5, 2026ರಂದು ಪ್ರಕಟಿಸಲಾಗಿದೆ. ಈ ಪಟ್ಟಿಯನ್ನು chikkamagaluru.nic.in ಹಾಗೂ ceo.karnataka.gov.in ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯಗೊಳಿಸಲಾಗಿದೆ.

ಬಿಎಲ್‌ಒಗಳು ಪಟ್ಟಿಯನ್ನು ಬಿಎಲ್‌ಎಗಳಿಗೆ ತಲುಪಿಸಿದ್ದು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಜಿಲ್ಲಾ ಅಧ್ಯಕ್ಷರ ಕಚೇರಿಗಳಿಗೂ ಮಾಹಿತಿ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ವಿವರವಾದ ಮಾಹಿತಿ ಹಂಚಿಕೊಳ್ಳಲಾಗಿದೆ.

ಮತಗಟ್ಟೆಗಳ ಮರುವಿಂಗಡಣೆ (Rationalization) ಪ್ರಕ್ರಿಯೆಯಲ್ಲಿ 1,200ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಪರಿಶೀಲಿಸಿ 22 ಹೊಸ ಮತಗಟ್ಟೆಗಳು ಹಾಗೂ 2 ಕಿ.ಮೀ ಗಿಂತ ಹೆಚ್ಚು ದೂರವಿರುವ 3 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಒಟ್ಟು 25 ಹೊಸ ಮತಗಟ್ಟೆಗಳ ರಚನೆಗೆ ಮುಖ್ಯ ಚುನಾವಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇನ್ನೂ ಇಎಫ್ (Enumeration Form) ಫಾರಂಗಳನ್ನು ಸಲ್ಲಿಸದ ಮತದಾರರಿಗೆ ಆಗಸ್ಟ್ 8, 2026ರವರೆಗೆ ಸಂಬಂಧಪಟ್ಟ ಬಿಎಲ್‌ಒಗಳಿಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ವಿತರಿಸಲಾದ 9,60,231 ಇಎಫ್ ಫಾರಂಗಳಲ್ಲಿ 8,62,667 ಫಾರಂಗಳು (ಶೇ. 89.84) ಡಿಜಿಟೈಸೇಶನ್ ಆಗಿವೆ. ಒಟ್ಟು 97,207 (ಶೇ. 10.12) ASDDO ಪ್ರಕರಣಗಳು ದಾಖಲಾಗಿವೆ.

ಅದರಲ್ಲೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ 34,675 ASDDO ಪ್ರಕರಣಗಳು ದಾಖಲಾಗಿದ್ದು, ಶೃಂಗೇರಿ ಕ್ಷೇತ್ರದಲ್ಲಿ ಅತಿ ಕಡಿಮೆ 10,183 ಪ್ರಕರಣಗಳು ಕಂಡುಬಂದಿವೆ.

Special comprehensive revision of the electoral roll potential list published

Share

Leave a comment

Leave a Reply

Your email address will not be published. Required fields are marked *

Don't Miss

ದ್ವೇಷ ಭಾಷಣಗಳ ಆಧಾರಲ್ಲಿಯೇ ಸಂಘಟನೆ ಕಟ್ಟಲು ಹೊರಟಿರುವುದು ಖಂಡನೀಯ

ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮತ್ತು ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ವಿಪರೀತವಾದ ದ್ವೇಷ ಭಾಷಣಗಳ ಆಧಾರಲ್ಲಿಯೇ ಸಂಘಟನೆಯನ್ನು ಕಟ್ಟಲು ಹೊರಟಿರುವುದು ಖಂಡನೀಯ ಎಂದು ಕೆ.ಪಿ.ಸಿ.ಸಿ...

ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ಪ್ರತಿಭಟನೆ

ಚಿಕ್ಕಮಗಳೂರು:  ಕಾವೇರಿ ನೀರನ್ನು ನೆರೆರಾಜ್ಯ ತಮಿಳುನಾಡಿಗೆ ಹರಿಬಿಡದೇ ರಾಜ್ಯದ ಜನರಿಗೆ ಉಳಿಸಿಕೊಡಬೇಕು ಎಂದು ಆಗ್ರಹಿಸಿ ಶನಿವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ನಗರದ ಆ ಜಾದ್‌ಪಾರ್ಕ್ ವೃತ್ತದ ಸಮೀಪ ಪ್ರತಿಭಟನೆ ನಡೆಸಿ ಆಕ್ರೋಶ...

Related Articles

ಬಿಜೆಪಿ ಮುಖಂಡರಾದ ಸಿ. ಟಿ.ರವಿರವರ ಹೇಳಿಕೆ ಹಾಸ್ಯಸ್ಪದ

ಚಿಕ್ಕಮಗಳೂರು: ಜಿಲ್ಲೆಗೆ ಮಂತ್ರಿ ಸ್ಥಾನ ಡಿ.ಕೆ.ಶಿವಕುಮಾರ್ ರವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಿಕ್ಕಿಲ್ಲ ಎಂಬ ವಿಧಾನ ಪರಿಷತ್...

ಎಂಎಲ್‌ಸಿ ಆಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ

ಬೆಂಗಳೂರು: ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಕಾಂಗ್ರೆಸ್‌ನ ಎ.ವಿ. ಗಾಯತ್ರಿ ಶಾಂತೇಗೌಡ...

ಕೊಟ್ಟಿಗೆಹಾರದಲ್ಲಿ ಭೀಕರ ಅಪಘಾತದಲ್ಲಿ ಮೂವರು ಸಾವು 

ಮೂಡಿಗೆರೆ: ತಾಲೂಕಿನ ಕೊಟ್ಟಿಗೆಹಾರದ ಪೆಟ್ರೋಲ್ ಪಂಪ್ ಮುಂಭಾಗ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ...

ನೀರಿನ ಸಮಸ್ಯೆ ತಲೆದೋರದಂತೆ ಭದ್ರಾ ಮೇಲ್ದಂಡೆ ನಾಲೆ ಮೂಲಕ ನೀರು ಹರಿಸಲು ಕ್ರಮ

ಚಿಕ್ಕಮಗಳೂರು:  ತರೀಕೆರೆ, ಕಡೂರು, ಅಜ್ಜಂಪುರ ತಾಲ್ಲೂಕಿನಲ್ಲಿ ಮಳೆ ಅಭಾವದಿಂದಾಗಿ ಬರಗಾಲದ ಸ್ಥಿತಿ ತಲೆದೋರಿದೆ. ಕುಡಿಯುವ ನೀರಿನ...