ಚಿಕ್ಕಮಗಳೂರು: ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಕಳೆದುಹೋದ ಮೊಬೈಲ್ ಫೋನ್ ದುರುಪಯೋಗಪಡಿಸಿಕೊಂಡು, ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿರುವ ಗಂಭೀರ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ರವಿ ಎಂಬುವರು ಸೆಪ್ಟೆಂಬರ್ 8ರಂದು ಕಡೂರಿನಿಂದ ಚಿಕ್ಕಮಗಳೂರಿಗೆ ಸರ್ಕಾರಿ ಬಸ್‌ನಲ್ಲಿ ಬರುತ್ತಿದ್ದಾಗ ಆಕಸ್ಮಿಕವಾಗಿ ಅವರ ವಿವೋ ಕಂಪನಿಯ ಮೊಬೈಲ್ ಫೋನ್ ಕಳೆದುಹೋಗಿತ್ತು. ಮರುದಿನ ಹೊಸ ಮೊಬೈಲ್ ಖರೀದಿಸಲು ಅಂಗಡಿಗೆ ತೆರಳಿ ಎಟಿಎಂ ಕಾರ್ಡ್ ಮೂಲಕ ಹಣ ಪಾವತಿಸಲು ಹೋದಾಗ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ತೋರಿಸಿದೆ.
ಅನುಮಾನಗೊಂಡು ಎಟಿಎಂ ಮಷಿನ್‌ನಲ್ಲಿ ಪರಿಶೀಲಿಸಿದಾಗಲೂ ಖಾತೆಯಲ್ಲಿದ್ದ ಹಣ ಸಂಪೂರ್ಣ ಖಾಲಿಯಾಗಿರುವುದು ಕಂಡುಬಂದಿದೆ. ಕಳೆದುಹೋದ ಮೊಬೈಲ್‌ನಲ್ಲಿದ್ದ ಫೋನ್‌ಪೇ ಆ್ಯಪ್ ದುರುಪಯೋಗಪಡಿಸಿಕೊಂಡು, ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು 1,45,000 ರೂಪಾಯಿ ಹಣವನ್ನು ದೋಚಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಕ್ಷಣವೇ ಸೈಬರ್ ಹೆಲೈನ್ 1930 ಗೆ ಕರೆ ಮಾಡಿ ದೂರು ದಾಖಲಿಸಿದ ನಂತರ, ಚಿಕ್ಕಮಗಳೂರು ಸಿಇಎನ್ (ಸೈಬರ್ ಕ್ರೈಂ) ಪೊಲೀಸ್ ಠಾಣೆಗೆ ಹಾಜರಾಗಿ ಅಧಿಕೃತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಖದೀಮರ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
Mobile Phone Scam – Fraud Involving Lakhs of Rupees
Leave a comment