ಸಖಾರಾಯಪಟ್ಟಣ: ಇಲ್ಲಿಗೆ ಸಮೀಪದ ಮುಸ್ಲಪುರ್ ಹಟ್ಟಿಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಗೆ 15 ರ ನಡು ರಾತ್ರಿ ನುಗ್ಗಿರುವ ಶಶಿನಾಯಕ್ ಮತ್ತಿತರರು ಕೈಗೆ ಸಿಕ್ಕಿದ್ದನ್ನೇಲ್ಲಾ ದೋಚಿ ದೊಂಬಿ ಗಲಾಟೆ ಮಾಡಿ ಸ್ಥಳದಲ್ಲಿ ಇಲ್ಲದ ಎ.ಎಸ್.ಐ, ವೀರೇಂದ್ರ ಮೇಲೆ ದೂರು ಸಲ್ಲಿಸಿದ್ದಾರೆ.
ಇದಕ್ಕೆ ಕುಮ್ಮಕ್ಕು ಕೊಡುವಂತೆ ತಡ ರಾತ್ರಿ ಸ್ಥಳಕ್ಕೆ ಬಂದಿರುವ ಶಾಸಕ ಆನಂದ್ ಬಾಯಿಗೆ ಬಂದಂತೆ ಕಿರುಚಾಡಿ ಪೊಲೀಸ್ ಇಲಾಖೆ ಮೇಲೆ ಒತ್ತಡ ತಂದಿರುವ ಪರಿಣಾಮ ವೀರೇಂದ್ರನ ಮೇಲೆ 18 ನೇ ತಾರೀಖು ದೂರು ದಾಖಲಿಸಿ ಕ್ರಮ ಕೈಗೊಂಡಿರುವ ಕೇಸ್ ನ್ನು ನೋಡಿದರೆ ಇಲಾಖೆ ಮತ್ತು ಇದಕ್ಕೆ ಸ್ಕೆಚ್ ಹಾಕಿರುವ ಗಿರಾಕಿಗಳ ಲೆಕ್ಕಾಚಾರ ತಲೆಕೆಳಗಾಗಿದೆ.
2016ರಲ್ಲಿ ವೀರೇಂದ್ರ ಪತ್ನಿ ಶೋಭರ ಹೆಸರಿನಲ್ಲಿ ಹತ್ತು ಎಕರೆ ಜಮೀನು ಖರೀದಿ ಮಾಡಿ ನೆಮ್ಮದಿಯಾಗಿದ್ದರು ಜೊತೆಗೆ ಮಲ್ಲಿಕಾರ್ಜುನ ಬಂದು ಆರು ಎಕರೆ ಜಮೀನು ಖರೀದಿಸಿ ಬ್ರಾಂಡಿ ಶಾಪ್ ತೆರೆಯಲು ಹೊರಟಾಗ ಕಡೂರಿನ ಸಿಂಡಿಕೇಟ್ ಸದಸ್ಯರು ಕಣ್ಣು ಬಿತ್ತು ನೋಡಿ ಅಲ್ಲಿಂದ ಪ್ರಾರಂಭವಾದ ರಗಳೆ ಹೆಚ್ಚಾಗುತ್ತಾ ಹೋಯಿತು.
ಪದೇ,ಪದೇ ಗಲಾಟೆ ದೊಂಬಿ,ಸಣ್ಣ ಪುಟ್ಟ ಜಗಳ ನಡೆಯುತ್ತಲೇ ಈಗ ರೌಡಿ ಶೀಟರ್ ನವೀನ್ ನಾಯಕ್ ಜೊತೆ ಪಾರ್ಟಿ ಮಾಡಿದ್ದೀಯಾ ಎಂದು ದೂರು ದಾಖಲಿಸಿದ್ದಾರೆ.ಮೂರನೇ ಬಾರಿ ಗ್ರಾಮ ಪಂಚಾಯಿತಿ ಸದಸ್ಯನಾಗ ಬೇಕೆಂದು ಇಂತಹ ಕೃತ್ಯಗಳಿಂದ ಹೀರೋ ಆಗುವ ಕನಸು ಕಂಡು ಓಡಾಡಿ ಇಂತಹ ಕೃತ್ಯಗಳಲ್ಲಿ ತೊಡಗಿರುವ ಶಶಿನಾಯಕ್ ಗೆ ಕೆಲವರು ಬೆಂಬಲ ಬೇರೆ ಗಂಜಿ ಗಿರಾಕಿಗಳಿಗೆ ತಾತ್ಕಲಿಕ ಲಾಭ ದೊರಕಿರ ಬಹುದು ಈತನ ಮೇಲೆ ದೂರು ದಾಖಲಾಗಿಲ್ಲ ಎಂಬ ಯಕ್ಷ ಪ್ರಶ್ನೆಗೆ ಉತ್ತರ ಕೊಡುವವರು ಯಾರು?
ಪದೇ, ಪದೇ ಇಂತಹ ಕುಕೃತ್ಯಗಳನ್ನು ನಡೆಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ಇಲ್ಲದಿರುವುದು ಆಶ್ಚರ್ಯ, ಅನುಮಾನ ಉಂಟು ಮಾಡಿದೆ.ಇಂತಹ ಗಂಜಿ ಗಿರಾಕಿಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ಅನಾಹುತ ಖಚಿತ.ತಕ್ಷಣ ಪೊಲೀಸ್ ಇಲಾಖೆ ನಾಲ್ಕು ದಿನ ಅಧಿಕಾರದಲ್ಲಿ ಇದ್ದು ಹೋಗುವವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೃಗೊಳ್ಳ ಬೇಕಾಗಿದೆ.
Did Virendra fall victim to the high-handedness of petty troublemakers?
Leave a comment