Home namma chikmagalur chikamagalur ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ-ನಗದು ಕಳವು
chikamagalurCrime NewsHomeLatest Newsnamma chikmagalur

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ-ನಗದು ಕಳವು

Share
Share

ಕೊಪ್ಪ: ಮನೆ ಮಾಲೀಕರು ಇಲ್ಲದ ಸಮಯ ನೋಡಿ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಕೊರಡಿಹಿತ್ಯುವಿನಲ್ಲಿ ಬೆಳಕಿಗೆ ಬಂದಿದೆ.

ಕುದುರೆಗುಂಡಿ ನಿವಾಸಿ ಅವಿನಾಶ್ ಪಿಂಟೋ ಎಂಬುವರು ಕೊರಡಿಹಿತ್ಯುವಿನಲ್ಲಿ ರಬ್ಬರ್ ತೋಟ ಮತ್ತು ಮನೆ ಖರೀದಿಸಿದ್ದು, ಅವರ ತಂದೆ-ತಾಯಿ ದಿನನಿತ್ಯ ತೋಟದ ಕೆಲಸಕ್ಕೆ ಬಂದು ಹೋಗುತ್ತಿದ್ದರು, ಎಂದಿನಂತೆ ದಿನಾಂಕ 28ರ ಸಂಜೆ ತೋಟದ ಕೆಲಸ ಮುಗಿಸಿ ಮನೆ ಹಾಗೂ ಮುಂಭಾಗದ ಗೇಟಿಗೆ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಮರದ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ.

ಒಳಗೆ ತೆರಳಿ ಪರಿಶೀಲಿಸಿದಾಗ, ಹಾಲ್ ಪಕ್ಕದ ಕೋಣೆಯಲ್ಲಿದ್ದ ಬೀರುವಿನ ಲಾಕ್ ಮುರಿದು ಅದರಲ್ಲಿದ್ದ ಸುಮಾರು 90 ಸಾವಿರ ರೂಪಾಯಿ ಮೌಲ್ಯದ 10 ಗ್ರಾಂ ಚಿನ್ನಾಭರಣಗಳು (ಬ್ರಾಸ್‌ಲೇಟ್ ಹಾಗೂ ಉಂಗುರ) ಮತ್ತು 50 ಸಾವಿರ ರೂಪಾಯಿ ನಗದು ಹಣ ಸೇರಿ ಒಟ್ಟು 1.40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಸಂಬಂಧ ಅವಿನಾಶ್ ಪಿಂಟೋ ನೀಡಿದ ದೂರಿನ ಮೇರೆಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

Gold and cash worth lakhs of rupees stolen

Share

Leave a comment

Leave a Reply

Your email address will not be published. Required fields are marked *

Don't Miss

ಸಾರಿಗೆ ಸಂಸ್ಥೆಯ ಬಸ್ – ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ

ಮೂಡಿಗೆರೆ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಮನಕಲಕುವ ಘಟನೆ ನಡೆದಿದೆ. ಮೂಡಿಗೆರೆ ಕಡೆಗೆ ತೆರಳುತ್ತಿದ್ದ...

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಚಿನ್ನದ ಸರ ಕನ್ನತನ

ಚಿಕ್ಕಮಗಳೂರು: ಸಂಭ್ರಮದಿಂದ ಬಂಧುಗಳ ಮದುವೆ ಮುಗಿಸಿಕೊಂಡು ನೆಮ್ಮದಿಯಾಗಿ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ ಮಹಿಳೆಯೊಬ್ಬರಿಗೆ ಮಾರ್ಗಮಧ್ಯದಲ್ಲೇ ಕಳ್ಳರು ಬಿಗ್ ಶಾಕ್ ನೀಡಿದ್ದಾರೆ. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ...

Related Articles

ಗಾಣದಾಳು ವಿದ್ಯುತ್ ಉಪಕೇಂದ್ರ ಕಾಮಗಾರಿ ಪೂರ್ಣ

ಚಿಕ್ಕಮಗಳೂರು: ತಾಲೂಕಿನ ಗಾಣದಾಳು ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ನಿರ್ಮಿಸಲಾಗಿರುವ ವಿದ್ಯುತ್ ಉಪಕೇಂದ್ರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,...

ಚುನಾವಣಾ ಆಯೋಗದ ವಿರುದ್ಧ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಜವಾಬ್ದಾರಿಯುತ ನಡೆ ಅಗತ್ಯ

ಚಿಕ್ಕಮಗಳೂರು: ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳು ಮತ್ತು ಟೀಕೆಗಳು...

ಮತದಾರರ ಮತಪಟ್ಟಿಯಿಂದ ಹೊರಗಿಡುವವರ ವಿರುದ್ಧ ಕ್ರಮ ಕೈಗೊಳ್ಳಿ

ಚಿಕ್ಕಮಗಳೂರು: ಮತದಾರರ ಪಟ್ಟಿಯಿಂದ ಮತದಾರರನ್ನು ಕೈ ಬಿಡುವ ಚಟುವಟಿಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ನಡೆಯುತ್ತಿದ್ದು, ಇಂಥ ದು?ತ್ಯ...

ಮೊಬೈಲ್ ಫೋನ್ ಹೈಕ್‌ – ಲಕ್ಷಾಂತರ ರೂಪಾಯಿ ಹಣ ವಂಚನೆ

ಚಿಕ್ಕಮಗಳೂರು: ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಕಳೆದುಹೋದ ಮೊಬೈಲ್ ಫೋನ್ ದುರುಪಯೋಗಪಡಿಸಿಕೊಂಡು, ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ...