Home namma chikmagalur chikamagalur ಅಂಚೆ ನಾಗಭೂಷಣ್ ಗೆ’ಪತ್ರಿಕಾ ರತ್ನ’ ಪ್ರಶಸ್ತಿ ಪ್ರಧಾನ
chikamagalurHomeLatest Newsnamma chikmagalur

ಅಂಚೆ ನಾಗಭೂಷಣ್ ಗೆ’ಪತ್ರಿಕಾ ರತ್ನ’ ಪ್ರಶಸ್ತಿ ಪ್ರಧಾನ

Share
Share

ತರೀಕೆರೆ : ಪಟ್ಟಣದ ಹಿರಿಯ ಪತ್ರಕರ್ತರು, ಜಿಲ್ಲಾ ಕನ್ನಡ ವಾರಪತ್ರಿಕೆ ಅಂಚೆವಾರ್ತೆ ಸಂಪಾದಕರು ಆದ ಅಂಚೆ ನಾಗಭೂಷಣ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಶಾಖೆ ವತಿಯಿಂದ ಅವರ ಜೀವಮಾನದ ಸಾಧನೆ ಪರಿಗಣಿಸಿ ‘ಪತ್ರಿಕಾ ರತ್ನ’ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಜಿಲ್ಲೆಯಲ್ಲೇ ಹಿರಿಯ ಪತ್ರಕರ್ತ ಎ.ವಿ. ನಾಗಭೂ?ಣ್ ಅವರು ಚಿಕ್ಕ ಮಗಳೂರು ಜಿಲ್ಲೆಯ ಮತ್ತು ತರೀಕೆರೆ ತಾಲೂಕಿನ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಕ್ರೀಡಾಕ್ಷೇತ್ರ ಹೀಗೆ ಹಲವು ಕ್ಷೇತ್ರಗಳ ಪ್ರತಿಭೆಗಳನ್ನು ಗುರುತಿಸಿ, ಯುವ ಬರಹಗಾರರನ್ನು, ಲೇಖಕರನ್ನು ಬೆನ್ನು ತಟ್ಟೆ ಪ್ರೋತ್ಸಾಹಿಸಿ, ಸುದೀರ್ಘ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಂಚೆ ವಾರ್ತೆ ಪತ್ರಿಕೆಯ ಸಂಪಾದಕರಾಗಿ ಸಲ್ಲಿಸುತ್ತಿರುವ ಪತ್ರಿಕಾ ಸೇವೆಯನ್ನು ಗುರುತಿಸಿ ಅವರಿಗೆ ಪತ್ರಿಕಾ ರತ್ನ ಪ್ರಶಸ್ತಿ ನೀಡಲಾಗಿದೆ ಎಂದು ಪಟ್ಟಣದ ಅರಮನ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಗೌರವಿಸಲಾಯಿತು ಎಂದು ಸಂಘದ ತಾಲ್ಲೂಕು ಅಧ್ಯಕ್ಷ  ಸಿದ್ರಾಮಪ್ಪ ತಿಳಿಸಿದರು.

ಪುರಸಭೆ ಅಧ್ಯಕ್ಷ ವಸಂತಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಅನಿಲ್ ಆನಂದ್, ಸಂಘದ ಪದಾದಿಕಾರಿಗಳು, ಸದಸ್ಯರು ಭಾಗವಹಿಸಿದ್ದರು ಎಂದರು.

‘Patrika Ratna’ award to Anche Nagbhushan

 

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದಲ್ಲಿ ಅಪರಿಚಿತ ವಾಹನ ಡಿಕ್ಕಿಗೆ ವ್ಯಕ್ತಿ ಸಾವು

ಅಜ್ಜಂಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಾಲಕ ವಾಹನ ಸಮೇತ ಪರಾರಿಯಾಗಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಬುಕ್ಕಾಂಬೂದಿ ಗ್ರಾಮದ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲೆಯ ಭೀಕರ ಬರಗಾರದ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಚಿಕ್ಕಮಗಳೂರು ತಾಲ್ಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ...

Related Articles

ಎರಡು ತಿಂಗಳ ಸುದೀರ್ಘ ವಿರಾಮದ ಬಳಿಕ ಜಿಲ್ಲೆಯಾದ್ಯಂತ ಭರ್ಜರಿ ಮಳೆ

ಚಿಕ್ಕಮಗಳೂರು: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಜನರಿಗೆ...

ನೀಲಕುರಿಂಜಿ ಅಲ್ಲ, ಚಂದ್ರದ್ರೋಣದಲ್ಲಿ ಅರಳಿದ್ದು ಗುರಿಂಜೆ

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ–ಬಾಬಾಬುಡನ್‌ಗಿರಿ ಪ್ರದೇಶದಲ್ಲಿ ನೇರಳೆ ಬಣ್ಣದ ಹೂವುಗಳು ಅರಳಿ...

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ

ಚಿಕ್ಕಮಗಳೂರು: ವಿದ್ಯುತ್ ಪೂರೈಕೆಯಲ್ಲಿ ಇತ್ತೀಚೆಗೆ ಉಂಟಾದ ತಾತ್ಕಾಲಿಕ ವ್ಯತ್ಯಯವನ್ನು ದೊಡ್ಡ ಸಮಸ್ಯೆಯಾಗಿ ಬಿಂಬಿಸುವ ಅಗತ್ಯವಿಲ್ಲ. ಮುಂದಿನ...

ಕೊಳವೆಬಾವಿ ಕೊರೆಯಲು ಬೇಕಾಬಿಟ್ಟಿ ದರ ನಿಗದಿ ಮಾಡಲು ಅವಕಾಶ ನೀಡಬಾರದು

ಚಿಕ್ಕಮಗಳೂರು: ಬರಗಾಲದ ಸಂದರ್ಭದಲ್ಲಿ ಕೊಳವೆಬಾವಿ ಕೊರೆಯಲು ಬೇಕಾಬಿಟ್ಟಿ ದರ ನಿಗದಿ ಮಾಡಲು ಅವಕಾಶ ನೀಡಬಾರದು. ನಿಯಮಾವಳಿ...