Home namma chikmagalur chikamagalur ಹೈಕಮಾಂಡ್ ಗೆ ನೋಟು ! ಕಾಂಗ್ರೆಸ್ ನಲ್ಲಿ ಘಾಟು ? ಫಿಕ್ಸಿಂಗ್, ಫಿಕ್ಸಿಂಗ್.
chikamagalurHomeLatest Newsnamma chikmagalur

ಹೈಕಮಾಂಡ್ ಗೆ ನೋಟು ! ಕಾಂಗ್ರೆಸ್ ನಲ್ಲಿ ಘಾಟು ? ಫಿಕ್ಸಿಂಗ್, ಫಿಕ್ಸಿಂಗ್.

Share
Share

ಚಿಕ್ಕಮಗಳೂರು: ಹೈಕಮಾಂಡ್ ದೆಹಲಿಯಿಂದ ಕಳುಹಿಸಿದ ಪಟ್ಟಿಯಲ್ಲಿ ಗಾಯಿತ್ರಿ ಶಾಂತೇಗೌಡರು ಮಂತ್ರಿಯಾಗುತ್ತಾರೆ ಎಂದು ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕುಣ್ಣಿದು ಕುಪ್ಪಳಿಸಿ ಕಣ್ ಗೆ ತುಂಬಿಕೊಳ್ಳುವ ತವಕಕ್ಕೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಳ್ಳು, ನೀರು ಬಿಟ್ಟರು. ಗಾಯಿತ್ರಿ ಶಾಂತೇಗೌಡ ದುಃಖ ಉಮ್ಮಳಿಸಿಕೊಂಡು ಬಂದವರು ಮತ್ತೆ ಮಂತ್ರಿ ಯಾಗಲು ಶತ ಪ್ರಯತ್ನ ಪಡುತ್ತಿದ್ದಾರೆ. ಜಿಲ್ಲೆಯ ಹಲವರು ಖುಷಿಯಾದರೆ ಮತ್ತೆ ಕೆಲವರು ಮೋಟಮ್ಮನವರ ರೀತಿ ಅಪಸ್ವರ ತೆಗೆದಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಲು ಕೋರ್ಟ್ ನಲ್ಲಿ ನಾಲ್ಕೂವರೆ ವರ್ಷಗಳ ಕಾಲ ಬಡಿದಾಡಿ ಪ್ರಮಾಣ ಸ್ಪೀಕರಿಸುವ ಮುನ್ನವೇ ಮಂತ್ರಿ ಸ್ಥಾನಕ್ಕೆ ಹೆಸರು ಪ್ರಕಟವಾಗಿದ್ದು ಜಿಲ್ಲೆಯ ವರು ಮಂತ್ರಿ ಆಗುತ್ತಾರೆ ಎನ್ನುವಾಗ ಸಿದ್ದರಾಮಯ್ಯ ಹಾಕಿದ ಬ್ರೇಕ್ ಗೆ ಕಾಂಗ್ರೆಸ್ ನಡುಗುವಂತೆ ಮಾಡಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಮನಕ್ಕೂ ಬಾರದೆ ಗಾಯಿತ್ರಿ ಶಾಂತೇಗೌಡ ಹೆಸರು ಪ್ರಕಟವಾಗಿದ್ದು ಆಶ್ಚರ್ಯ ಮತ್ತು ಅನುಮಾನದ ಜೊತೆಗೆ ನೋಟು ಘಾಟಿನ ವಿಚಾರದಲ್ಲಿ ಫಿಕ್ಸಿಂಗ್, ಫಿಕ್ಸಿಂಗ್ ಎಂಬ ಮಾತುಗಳು ಕಾಂಗ್ರೆಸ್ ಪಡಶಾಲೆಯಲ್ಲಿ ಕೇಳಿಬರುತ್ತಿವೆ.

ಸಿದ್ದರಾಮಯ್ಯ ಉತ್ತರ ಕರ್ನಾಟಕದ ಕುರುಬ ಜನಾಂಗದ ಹಿರಿಯ ಶಾಸಕರಾದ ಬಸವರಾಜ್ ಶಿವಣ್ಣರನ್ನು ಮಂತ್ರಿ ಮಾಡಬೇಕು ಎಂದು ಹಟ ಹಿಡಿದು ಕುಳಿತರೆ ಹೈಕಮಾಂಡ್ ನಾವೋ?ನೀವೂ ಎಂದು ಹಗ್ಗಜಗ್ಗಟಾದಲ್ಲಿ ನಿರತವಾಗಿದೆ.ಸುರ್ಜಿವಾಲ ಕ್ಯಾಶ್ ಅಂಡ್ ಕ್ಯಾರಿಯರ್ ಮನುಷ್ಯ ಹೀಗಾಗಿ ಒಂದು ಮಂತ್ರಿ ಸ್ಥಾನ ಕಾಂಗ್ರೆಸ್ ನ ವ್ಯವಹಾರದ ಬಗ್ಗೆ ಹಾದಿ,ಬೀದಿಯ ಮಾತಾಗಿದೆ.ಅಂತೂ ಸಿದ್ದರಾಮಯ್ಯನವರ ಹಟ ಗೆಲ್ಲುತ್ತದೋ? ಹೈಕಮಾಂಡ್ ಕ್ಯಾಶ್ ಗೆಲ್ಲುತ್ತದೋ ಎಂಬುದು ಇನ್ನು ಒಂದು ವಾರದಲ್ಲಿ ತಿಳಿಯಲಿದೆ.

ಲಾಸ್ಟ್ ಸಿಫ್: ಜಿಲ್ಲೆಗಳಿಗೆ ಉಸ್ತುವಾರಿ ನೇಮಕ ಪ್ರಕ್ರಿಯೆ ಮುಗಿದಿದ್ದು ಮತ್ತೊಮ್ಮೆ ಕಿವಿ,ಕಣ್ಣು, ಕಿವಿ ಕೇಳದ ಜಾರ್ಜ್ ಉಸ್ತುವಾರಿ ನಿರ್ವಹಣೆ ಮಾಡಲಿದ್ದು ಅವರ ಕಾಫಿ ತೋಟ ಮತ್ತು ರಿಯಲ್ ಎಸ್ಟೇಟ್ ದಂಧೆಗೆ ಅನುಕೂಲ ಮಾಡಿಕೊಟ್ಟಿದ್ದು ರೇಟ್ ಫಿಕ್ಸಿಂಗ್ ಖಚಿತವಾಗಿ ಕೊಟ್ಟು ಬಂದಿದ್ದಾರೆ ಎಂದು ಕಾಂಗ್ರೆಸ್ ನವರು ಮಾತನಾಡಿದರೆ ಜನ ಮಾತ್ರ ಇವನ್ಯಾರೋ ಟ್ರಂಪ್ ತಮ್ಮ ಇರಬೇಕು ಎನ್ನುತ್ತಿದ್ದಾರೆ.ಇನ್ನೊಂದು ವರ್ಷ ತಳ್ಳಿಕೊಂಡು ನೂಕಿ ಕೊಂಡು ಅಥವಾ ತೆವಳಿ ಕೊಂಡು ಹೋಗುವ ಸರ್ಕಾರ ಮತ್ತು ಮಂತ್ರಿ ಸಿಕ್ಕಿದ್ದಾರೆ ಎಂದು ಗೊಣಗಿ ಕೊಂಡು ಕಾರ್ಯಕರ್ತರು ಮತ್ತು ಜನ ಓಡಾಡುತ್ತಿದ್ದಾರೆ.

Note to the high command! A rift in the Congress

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ SIR ಪರಿಷ್ಕರಣೆಯಲ್ಲಿ 8,54,852 ನಮೂನೆಗಳ ಡಿಜಿಟಲೀಕರಣ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಕಾರ್ಯಾಲಯದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮತಗಟ್ಟೆ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ...

ಮರು ಮತ ಎಣಿಕೆಯಲ್ಲಿ ಗಾಯತ್ರಿ ಶಾಂತೇಗೌಡಗೆ 9 ಮತಗಳ ಗೆಲವು

ಚಿಕ್ಕಮಗಳೂರು:  ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದ ಮಹತ್ವದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ. ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಏಕಸದಸ್ಯ...

Related Articles

ಪೆಟ್ರೋಲ್ ಬಂಕ್ ಅಳತೆಯಲ್ಲಿ ಮೋಸ ಮಾಡುತ್ತಿರುವ ಆರೋಪ

ಚಿಕ್ಕಮಗಳೂರು: ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರಿಗೆ ಅಳತೆಯಲ್ಲಿ ಮೋಸ ಮಾಡುತ್ತಿರುವ ಆರೋಪ ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ (KSRTC) ಬಸ್...

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಭಾವ್ಯ ಪಟ್ಟಿ ಪ್ರಕಟ

ಚಿಕ್ಕಮಗಳೂರು: ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯವು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ...

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ...