Home Crime News ಹಣಕ್ಕಾಗಿ ಅಜ್ಜಿ ತಾತನನ್ನು ಕೊಂದ ಮೊಮ್ಮಗ
Crime News

ಹಣಕ್ಕಾಗಿ ಅಜ್ಜಿ ತಾತನನ್ನು ಕೊಂದ ಮೊಮ್ಮಗ

Share
Share

ಚಿಕ್ಕಮಗಳೂರು : ಹಣಕಾಸಿನ ವಿಚಾರಕ್ಕೆ ವೃದ್ಧ ದಂಪತಿಯನ್ನು ಮೊಮ್ಮಗನೇ ಕೊಲೆ ಮಾಡಿರುವ ಘಟನೆ ಮಲ್ಲಂದೂರು ಸಮೀಪದ ಕೊಳಗಾಮೆ ಗ್ರಾಮದಲ್ಲಿ ನಡೆದಿದೆ.

ಮೊಗಣ್ಣಗೌಡ ಎಂಬುವವರ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಬಸಪ್ಪ (65) ಹಾಗೂ ಲಲಿತಮ್ಮ (58) ಮೂಲತಃ ಗುಬ್ಬಿ ತಾಲೂಕಿನವರಾಗಿದ್ದು ಕಳೆದ 25 ವರ್ಷಗಳಿಂದ ಕೊಳಗಾಮೆಯಲ್ಲಿ ವಾಸವಿದ್ದರು.

ಕಳೆದ ರಾತ್ರಿ ಬಸಪ್ಪನ ಅಣ್ಣನ ಮಗಳ ಮಗ ನಿಶಾಂತ್ ಇಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬೆಂಗಳೂರಿನವನಾದ ನಿಶಾಂತ್ ವೃದ್ಧ ದಂಪತಿಯ ಮನೆಗೆ ಆಗಾಗ್ಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದ್ದು ನಿನ್ನೆ ರಾತ್ರಿ ಲಲಿತಮ್ಮ ಹಾಗೂ ಬಸಪ್ಪ ಇಬ್ಬರಿಗೂ ದೊಣ್ಣೆ ಯಿಂದ ಹೊಡೆದು ಹತ್ಯೆ ಮಾಡಿದ್ದಾನೆ

ಮಲ್ಲಂದೂರು ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ರವಾನೆ ಮಾಡಿದ್ದಾರೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಮ್ ಅಮಟೆ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಕೊಳಗಾಮೆಯಲ್ಲಿ ಮೃತ ದಂಪತಿಗೆ ಯಾರೂ ಸಂಬಂಧಿಗಳಿಲ್ಲದ ಕಾರಣ ಬಸಣ್ಣನ ಮನೆಯವರಿಗೆ ವಿಷಯ ತಲುಪಿಸಿದ್ದು ಗುಬ್ಬಿಯಿಂದ ಅವರು ಬಂದ ನಂತರ ಮೃತದೇಹಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ, ದೇಶದ ಸಾಧನೆಗಳನ್ನು ಸ್ಮರಿಸುವ, ಸ್ವಾತಂತ್ರ್ಯದ ಮೌಲ್ಯಗಳನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು...

ಕಸ್ತೂರಿ ರಂಗನ್ ವರದಿ ಮರುಪರಿಶೀಲಿಸಲು ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ತಕ್ಷಣವೇ ಬರಗಾಲವೆಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮಲೆನಾಡಿನ 137 ಗ್ರಾಮಗಳಿಗೆ ಕಂಟಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಪುನಃ ಪರಿಶೀಲಿಸಿ ಜನವಸತಿ...

Related Articles

ಅಕ್ರಮ ಮರಳು ಸಾಗಾಟ: 407 ಲಾರಿ ವಶ, ಚಾಲಕ ಪೊಲೀಸ್ ವಶಕ್ಕೆ

ಶೃಂಗೇರಿ: ಪರವಾನಗಿ ಇಲ್ಲದೆ 407 ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇಲೆ ಶೃಂಗೇರಿ ಪೊಲೀಸರು...

ಬೈಕ್‌ಗೆ ನಿಂದ ಬಿದ್ದು ಮಹಿಳೆ ಸಾವು

ಚಿಕ್ಕಮಗಳೂರು: ಬೈಕ್‌ಗೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕ ಏಕಾಏಕಿ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿ ಕುಳಿತಿದ್ದ...

ವಿದ್ಯುತ್ ಸ್ಪರ್ಶ: ಬೇಲಿ ಕಟಾವು ಮಾಡುತ್ತಿದ್ದ ವಾಚ್‌ಮನ್ ಸಾವು

ತರೀಕೆರೆ: ತೋಟದ ಬೇಲಿ ಕಟಾವು ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಾಚ್‌ಮನ್ ಮೃತಪಟ್ಟಿರುವ ಘಟನೆ...

ಕಡಿಮೆ ಬೆಲೆಗೆ ಬಟ್ಟೆ ಕೊಡಿಸುವುದಾಗಿ ನಂಬಿಸಿ ₹20.19 ಲಕ್ಷ ವಂಚನೆ ಆರೋಪ

ಕಡೂರು: ವ್ಯಾಪಾರಕ್ಕಾಗಿ ಕಡಿಮೆ ಬೆಲೆಯಲ್ಲಿ ಬಟ್ಟೆಗಳನ್ನು ಖರೀದಿಸಿ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹17.58 ಲಕ್ಷ ಪಡೆದು,...