Home namma chikmagalur chikamagalur ಚುನಾವಣೆ ಎಂಬ ಹೈಡ್ರಾಮಾ ! – ಜಡ್ಡು ಹಿಡಿದು ಗೂಟ ಬಡಿದುಕೊಂಡವರು ?
chikamagalurHomeLatest Newsnamma chikmagalur

ಚುನಾವಣೆ ಎಂಬ ಹೈಡ್ರಾಮಾ ! – ಜಡ್ಡು ಹಿಡಿದು ಗೂಟ ಬಡಿದುಕೊಂಡವರು ?

Share
Share

ಚಿಕ್ಕಮಗಳೂರು: ಶ್ರೀ ವೀರಶೈವ ಲಿಂಗಾಯತ ಸಮಾಜದ ಚುನಾವಣೆ ನಡೆಯುತ್ತಿದೆ.ನಾಮಕಾವಸ್ತೆಗೆ ಚುನಾವಣೆ ಎಂಬ ಹೈಡ್ರಾಮಾ ನಡೆಸಿದ್ದಾರೆ.ಇದನ್ನು ಗುತ್ತಿಗೆ ಹಿಡಿದುಕೊಂಡು ಮತ್ತೆ, ಮತ್ತೆ ನಾವೇ ಇರಬೇಕು ಎಂಬ ಜನರು ತುಂಬಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ.

ದಿವಂಗತ ತಾಯಿ ಗೌರಮ್ಮನವರ ದೂರದೃಷ್ಟಿಯ ಫಲ ಹೌಸಿಂಗ್ ಬೋರ್ಡ್ ಸಮೀಪ ಎಂಟು ಎಕರೆ ಜಾಗ ಮಂಜೂರು ಆಗಿತ್ತು ಅಲ್ಲಿ ಬೃಹತ್ ಕಲ್ಯಾಣ ಮಂಟಪದ ಕೆಲಸ ನಡೆಯುತ್ತಿದೆ ಇದಕ್ಕಾಗಿ ಕಷ್ಟ ಪಡುತ್ತಾ ಹಣಕಾಸು ಸಂಗ್ರಹ ಮಾಡುತ್ತಿದ್ದಾರೆ ಅಧ್ಯಕ್ಷ ಶಿವಶಂಕರ್ ಮತ್ತಿತರರು ಒಳ್ಳೆಯ ಕೆಲಸದ ನೆಪದಲ್ಲಿ ಮತ್ತೆ, ಮತ್ತೆ ನಾವೇ ಗೂಟ ಹೊಡೆದುಕೊಂಡು ಇರಬೇಕು ಎಂಬ ಧೋರಣೆ ಒಳ್ಳೆಯದಲ್ಲ.

ಹಿರಿಯ ಜೀವಕ್ಕೆ ಕಿರಿ,ಕಿರಿ ಮಾಡಿ ಕಮ್ಯೂನಿಸ್ಟ್ ರೇಣುಕಾರಾಧ್ಯ ತಂಡ ಒಳ ಸೇರಿಕೊಂಡಿತು ನೋಡಿ ಜಾತಿ ಒಳಗೆ ಒಳ ಜಾತಿ ತುಂಬಿ ಗಂಡ,ಹೆಂಡತಿ,ಅಣ್ಣಾ ಅಧಿಕಾರ ಹಿಡಿಯುವ ಕಲೆಗಾರಿಕೆ ಅರೆದು ಕುಡಿದಿದ್ದಾರೆ ಎನ್ನಿಸುತ್ತದೆ.ಹೀಗಾಗಿ ಕಳೆದ ಹತ್ತು ವರ್ಷಗಳಿಂದ ಗೂಟ ಹೊಡೆದುಕೊಂಡವರು ಮತ್ತೊಮ್ಮೆ ಗೂಟ ಹೊಡೆದು ಕೊಳ್ಳಲು ಮುಖವಾಡಗಳನ್ನು ಧರಿಸಿ ಬರುತ್ತಿದ್ದಾರೆ.

ಸಂಘದ ಸದಸ್ಯತ್ವ ಒಂದು ಸಾವಿರವಿತ್ತು ಇವರು ಎರಡು,ಮೂರು ಈಗ ಐದು ಸಾವಿರ ಮಾಡಿದ್ದಾರೆ.ಇದನ್ನು ಪ್ರಶ್ನೆ ಮಾಡುವವರನ್ನು ಶತ್ರುಗಳ ತರಹ ನೋಡಿ ಮಾತನಾಡುತ್ತಾರೆ. ಸಂಘ ಎಂದರೆ ನಮ್ಮ ಹಿಡಿತದಲ್ಲಿ ಇರಬೇಕು ಬೇರೆ ಯವರು ಸದಸ್ಯರಾಗಬಾರದು ಎಂದು ಫ್ರೀ ಪ್ಲಾನ್ ಮಾಡಿಕೊಂಡು ಸರ್ವ ಸದಸ್ಯರ ಸಭೆ ನಡೆಸುತ್ತಾರೆ ಎಂಬ ವ್ಯಾಪಕ ದೂರುಗಳಿವೆ.

ಅಧ್ಯಕ್ಷ ಶಿವಶಂಕರ್ ಹುಂಬುತನದಿಂದ ಉತ್ತರಿಸಿದರೆ ಪ್ರದಾನ ಕಾರ್ಯದರ್ಶಿ ಶಿವಾನಂದ ಸ್ವಾಮಿ ನಾವು ಕಷ್ಟ ಪಟ್ಟು ಕಟ್ಟಿ ಬೇರೆಯವರು ಬರಲು ಬಿಡಬೇಕಾ ಎಂದರೆ ನಂಜೇಗೌಡರು ಬ್ಯಾಂಕ್ ನಲ್ಲಿ ಷೇರು ದರ ಏರಿಸುವಂತೆ ಇಲ್ಲಿಯೂ ಸದಸ್ಯತ್ವ ಶುಲ್ಕ ಹೆಚ್ಚಿಸಬೇಕು ಎಂದರೆ ಅರಾಧ್ಯರು ಮಾತ್ರ ನನಗೆ ಏನು ಗೊತ್ತಿಲ್ಲ ಎಂಬಂತೆ ಕುಳಿತುಕೊಂಡು ಮಜಾ ತೆಗೆದುಕೊಳ್ಳುತ್ತಾರೆ.ಇವರೇ ವಿಷಯ ಮಂಡಿಸಿ ಇವರುಗಳೇ ಜೈ,ಜೈ ಎಂದು ಕೊಳ್ಳುವುದು ಸರ್ವಾಧಿಕಾರ ವರ್ತನೆ ಎನ್ನಲಾಗಿದೆ.

ಜಾತಿ ಸಂಘ ಕಟ್ಟುವವರು ಕನಿಷ್ಠ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ನಿಜ ಸಾಮಾನ್ಯರು ಬರಬಾರದು ಶ್ರೀಮಂತರು ಮಾತ್ರ ಬರಬೇಕು ಎಂದು ಬಯಸುವುದಾದರೆ ಶ್ರೀ ಮಂತರ ವೀರಶೈವ ಲಿಂಗಾಯತ ಸಂಘ ಎಂದು ಕಟ್ಟಿ ಕೊಳ್ಳುವದು ಒಳ್ಳೆಯದು ಎಂದು ಹಲವರು ಹೇಳುತ್ತಿದ್ದಾರೆ.

ಚುನಾವಣೆ ಎಂಬ ಹೈಡ್ರಾಮಾ ಏಕೆ ಬೇಕು “ಕಟ್ಟಡ,ಕಟ್ಟಡ” ಎಂದು ಮುಂದೆ ಮಾಡಿ ನಾವೇ ಪದಾಧಿಕಾರಿಗಳು ಎಂದು ಘೋಷಣೆ ಮಾಡಿಕೊಂಡರೆ ಯಾರು ಪ್ರಶ್ನೆ ಮಾಡುವುದಿಲ್ಲ. ಟೆವಲ್ ಹಾಕಿಕೊಂಡು ಕುಳಿತವರನ್ನು ಏಳಿಸಲು ಸಾಧ್ಯವಿಲ್ಲ. ಕಷ್ಟಪಟ್ಟು ಕಟ್ಟಡ ಕಟ್ಟುತ್ತಿರುವುದರಿಂದ “ದಪ್ಪ, ದಪ್ಪ” ಅಕ್ಷರಗಳಲ್ಲಿ ಹೆಸರು ಹಾಕಿಸಿಕೊಳ್ಳಲು ಯಾರ ತಕರಾರು ಇಲ್ಲ ಆದರೆ ಎಲ್ಲರೂ ಒಳಗೊಂಡರೆ ಒಳ್ಳೆಯದು ಎಂಬ ವಿಶಾಲ ಮನೋಭಾವ ಹೊಂದುವುದು ಮುಖ್ಯ ಎಂಬ ಸಾಮಾನ್ಯ ತಿಳುವಳಿಕೆಯ ಕೊರತೆ ಅರಾಧ್ಯರಿಗೆ ಇಲ್ಲದಿರುವುದು ನೋಡಿದರೆ ಅಯ್ಯೋ ಎನ್ನಿಸುತ್ತದೆ.

ಸರ್ವ ಸದಸ್ಯರ ಸಭೆಯಲ್ಲಿ ಕಟ್ಟಡ ಕಟ್ಟಿಸಲು ಕಷ್ಟ ಪಟ್ಟಿರುವುದರಿಂದ ಬದುಕಿರುವವರೆಗೆ ನಾವೇ ಪದಾಧಿಕಾರಿಗಳು ಎಂದು ನಿರ್ಣಯ ತೆಗೆದುಕೊಂಡರೆ ಈ ಚುನಾವಣೆ ಎಂಬ ಹೈಡ್ರಾಮಾ ನೋಡಬೇಕಿಲ್ಲ ಸಮಯ ಮತ್ತು ಹಣ ಉಳಿಯುತ್ತದೆ ಜೈ,ಜೈ ಎನ್ನುವ ವ್ಯರ್ಥ ಧ್ವನಿಗಳ ಕಂಠ ಶೋಷಣೆ ನಿಲ್ಲುತ್ತದೆ.

Sri Veerashaiva Lingayat Samaj Election

Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...