Home namma chikmagalur chikamagalur ಡಿ.18ಕ್ಕೆ ನಗರದಲ್ಲಿ ಕ್ರಿಸ್‌ಮಸ್ ಸ್ನೇಹ ಸೌಹಾರ್ದರ್‍ಯಾಲಿ
chikamagalurHomeLatest Newsnamma chikmagalur

ಡಿ.18ಕ್ಕೆ ನಗರದಲ್ಲಿ ಕ್ರಿಸ್‌ಮಸ್ ಸ್ನೇಹ ಸೌಹಾರ್ದರ್‍ಯಾಲಿ

Share
Share
ಚಿಕ್ಕಮಗಳೂರು: ಅಲ್‌ಕರ್ನಾಟಕಯುನೈಟೆಡ್ ಕ್ರಿಶ್ಚಿಯನ್ ಫೋರಂಫಾರ್ ಹ್ಯೂಮನ್‌ರೈಟ್ಸ್ ವತಿಯಿಂದಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿ. ೧೮ನೇ ಗುರುವಾರ ನಗರದಲ್ಲಿಕ್ರಿಸ್‌ಮಸ್ ಸ್ನೇಹ ಸೌಹಾರ್ದಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದುಕಾರ್ಯಾಧ್ಯಕ್ಷರಾದ ಫಾದರ್‌ರಾಯಪ್ಪ ತಿಳಿಸಿದರು.
ಅವರುಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ಕ್ರಿಸ್‌ಮಸ್. ಯೇಸುಕ್ರಿಸ್ತರು ಈ ಜಗಕ್ಕೆ ತಂದಂತಹ ಶಾಂತಿ-ಸಮಾಧಾನವನ್ನು, ಭ್ರಾತೃತ್ವ-ಸಹೋದರತ್ವವನ್ನು ಮತ್ತು ಎಲ್ಲಕ್ಕಿಂತ ಮಿಗಿಲಾಗಿ, ದೇವರ ಪ್ರೀತಿಯನ್ನು ಮಾನವರಿಗೆ ಕೊಟ್ಟ ಸಂತೋ?ವನ್ನು ಹಂಚಿಕೊಳ್ಳಲು ಈ ಕ್ರಿಸ್‌ಮಸ್ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದರು.
ಈ ಯಾತ್ರೆಯಲ್ಲಿ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಕ್ರೈಸ್ತ ಧರ್ಮಪೀಠದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಡಾ.ಅಂತೋಣಿ ಸ್ವಾಮಿ ಇವರ ದಿವ್ಯ ಸಾನಿಧ್ಯದಲ್ಲಿ, ಇನ್ನಿತರ ಧಾರ್ಮಿಕ ಗುರುಗಳ, ಕನ್ಯಾ-ಭಗಿನಿಯರ ಪಾಸ್ಟರ್ಸ್‌ಗಳ ಸಮ್ಮುಖದಲ್ಲಿ ಹಾಗೂ ಸಹಸ್ರಾರು ಕ್ರೈಸ್ತಭಾಂದವರ ಸಹಯೋಗದಲ್ಲಿ ನಡೆಯುತ್ತಿದ್ದು, ಸ್ಯಾಂಟಕ್ಲೋಸ್, ಕ್ರಿಸ್‌ಮಸ್ ಟ್ಯಾಬ್ಲೆಸ್, ಕ್ರಿಸ್‌ಮಸ್, ನೃತ್ಯಗಳು, ಕ್ರಿಸ್‌ಮಸ್ ಗೀತೆಗಳೊಂದಿಗೆ ಸಂಜೆ ೪.೩೦ ಗೆ ತಾಲ್ಲೂಕ್ ಕಛೇರಿಯಿಂದ, ಎಂಜಿ ರಸ್ತೆ ಮೂಲಕ ಮೆರವಣಿಗೆ ಹೊರಟು, ಆಜಾದ್ ಪಾರ್ಕ್ ಬಳಿ ಸರ್ವಧರ್ಮಗಳ ಸಂದೇಶಗಳನ್ನು ಹಂಚಿಕೊಳ್ಳುವುದರ ಮೂಲಕ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುವುದು ಎಂದರು.
ಯೇಸುಕ್ರಿಸ್ತರು ಮನು? ರೂಪ ತಾಳಿ ಮಾನವೀಯ ಧರ್ಮವನ್ನು ಎತ್ತಿ ಹಿಡಿದರು, ಭರವಸೆಯ ಚಿಲುಮೆಯಾಗಿ, ಶಾಂತಿದೂತನಾಗಿ, ಶಾಂತಿ ಹಾಗೂ ಕ್ಷಮಾ ಗುಣವನ್ನು ಈ ಜಗಕ್ಕೆ ಸಾರಿದರು. ದೈವಮಾನವನಾಗಿ, ಸಾಕ್ಷಾತ್ ತಂದೆ ದೇವರ ಏಕ ಪುತ್ರನಾಗಿ ಈ ಭುವಿಯಲ್ಲಿ ಜನಿಸಿದವರು ಎಂದು ತಿಳಿಸಿದರು.
ಈ ಜನ್ಮ ದಿನವನ್ನು ವಿಶ್ವದೆಲ್ಲೆಡೆ ಕ್ರಿಸ್‌ಮಸ್ ಹಬ್ಬವಾಗಿ ಆಚರಿಸುತ್ತೇವೆ. ಶಾಂತಿ-ಸೌಹಾರ್ದದಿಂದ ಎಲ್ಲರೊಡನೆ ಜೀವಿಸುವುದೇ ಕ್ರಿಸ್‌ಮಸ್ ಹಾಗೂ ಈ ನಮ್ಮ ಕ್ರಿಸ್‌ಮಸ್ ರ್ಯಾಲಿಯ ಉದ್ದೇಶವಾಗಿದೆ ಎಂದರು.
ನಮ್ಮ ದೇಶ, ನಾಡು, ನಗರ ಸೇರಿದಂತೆ ವಿಶ್ವದ ಎಲ್ಲಾ ಭೂ ನಿವಾಸಿಗಳನ್ನು ಹೇರಳವಾಗಿ ಹರಸಿ ಆಶೀರ್ವದಿಸಲೆಂದು ಹಾಗೂ ಲೋಕ ಕಲ್ಯಾಣಕ್ಕಾಗಿ, ಜನತೆಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುತ್ತಾ, ಕ್ರಿಸ್‌ಮಸ್ ಶುಭಾ?ಯಗಳನ್ನು ಕೋರಲು ಈ ಕ್ರಿಸ್‌ಮಸ್ ರ್ಯಾಲಿಯನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿಯಾದ ಪಾಸ್ಟರ್ ಕೆ.ಕೆ.ವರ್ಗಿಸ್, ಖಜಾಂಚಿ ಜೇಮ್ಸ್’ಡಿಸೋಜಾ, ಸಹಕಾರ್ಯದರ್ಶಿ ಜೆಮಿನಿ ಜಾರ್ಜ್, ಸದಸ್ಯರುಗಳಾದ ಸಂಜು, ಪಾಸ್ಟರ್ ಶ್ರೀಧರ್ ಸ್ಯಾಮುವೆಲ್, ಸ್ಟೀಫನ್ ಶಶಿಕಾಂತ್, ಜಾನ್ ಸಚಿನ್ ಮತ್ತು ಅಲೋನ್ಸ್ ಉಪಸ್ಥಿತರಿದ್ದರು.
Christmas Friendship Day in the city on December 18th
Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...