ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪಲ್ಸ್‌ಪೊಲೀಯೋ ದಿನವಾದ ಇಂದು ಒಟ್ಟು ೮೧,೪೦೫ ಮಕ್ಕಳಲ್ಲಿ ೭೬೦೩೪ ಮಕ್ಕಳಿಗೆ ಪೊಲೀಯೋ ಹನಿ ನೀಡುವ ಮೂಲಕ ಶೇ. ೯೩.೪೦ ರಷ್ಟು ಪ್ರಗತಿಯಾಗಿದೆ.
ಚಿಕ್ಕಮಗಳೂರು ತಾಲೂಕಿನಲ್ಲಿ ೨೨,೨೪೩ ಮಕ್ಕಳಿಗೆ ಪೊಲೀಯೋ ಹನಿನೀಡುವ ಗುರಿಹೊಂದಿದ್ದು, ೨೦,೯೮೧೯ ಮಕ್ಕಳಿಗೆ ಪೊಲೀಯೋ ಹನಿಹಾಕುವ ಮೂಲಕ ಶೇ.೯೩.೬೦ ರಷ್ಟು ಪ್ರಗತಿಸಾಧಿಸಿದ್ದರೆ, ಕಡೂರು ತಾಲೂಕಿನಲ್ಲಿ ೧೯,೪೮೦ ಮಕ್ಕಳ ಬದಲಾಗಿದೆ ೧೯,೩೭೫ ಮಕ್ಕಳಿಗೆ ಪೊಲೀಯೋ ಹನಿನೀಡುವ ಮೂಲಕ ಶೇ.೯೭೮.೬೬ರಷ್ಟು ಪ್ರಗತಿಯಾಗಿದ್ದರೆ,
ತರೀಕೆರೆ ತಾಲೂಕಿಒನಲ್ಲಿ ೧೧,೧೯೨ ಮಕ್ಕಳ ಬದಲಾಗಿ ೧೦೫೦೧ ಮಕ್ಕಳಿಗೆಪೊಲೀಯೋ ನೀಡುವ ಮೂಲಕ ಶೇ. ೯೩.೮೯೩ ರಷ್ಟು ಪ್ರಗತಿಯಾಗಿದೆ. ಅಜ್ಜಂಪುರ ತಾಲೂಕಿನಲ್ಲಿ ೫೫೭೧ ಮಕ್ಕಳಿಗೆ ಪೊಲೀಯೋ ಹನಿನೀಡಲು ತಾಲೂಕು ಆರೋಗ್ಯ ಇಲಾಖೆ ಗುರಿ ಇಟ್ಟುಕೊಂಡಿತ್ತು. ಈ ದಿನ ೪೯೨೧ ಮಕ್ಕಳಿಗೆ ಪೊಲೀಯೋ ಹನಿಹಾಕಿದ್ದು, ಶೇ.೮೮.೩೩ ರಷ್ಟು ಪ್ರಗತಿಯನ್ನು ಸಾಧಿಸಿದೆ.
ಮಲೆನಾಡು ತಾಲೂಕುಗಳಾದ ಮೂಡಿಗೆರೆ ತಾಲೂಕಿನಲ್ಲಿ ೮೪೭೨ ಮಕ್ಕಳಿಗೆ ಗುರಿಹೊಂದಿದ್ದು, ೭೩೪೩ ಮಕ್ಕಳಿಗೆ ಪೊಲೀಯೋ ಹನಿಹಾಕುವ ಮೂಲಕ ಶೇ.೮೬.೬೭ ರಷ್ಟುಪ್ರಗತಿ ಸಾಧಿಸಿದ್ದರೆ, ಕಳಸ ತಾಲೂಕಿನಲ್ಲಿ ೨೧೮೫ ಮಕ್ಕಳ ಬದಲಾಗಿ ೧೮೬೬ ಮಕ್ಕಳಿಗೆ ಹನಿಹಾಕುವುದರೊಂದಿಗೆ ಶೇ.೮೯೫.೪೦ ಪ್ರಗತಿಯಾಗಿದ್ದರೆ,
ಕೊಪ್ಪದಲ್ಲಿ ೫೨೦೦ಕ್ಕೆ ಬದಲಾಗಿದೆ ೪೮೯೮ ಮಕ್ಕಳಿಗೆ ಪೊಲೀಯೋ ಹನಿಹಾಕಿದ್ದು, ಶೇ.೯೪.೧೯ ರಷ್ಟು ಪ್ರಗತಿಯಾಗಿದೆ. ನರಸಿಂಹರಾಜಪುರ ತಾಲೂಕಿನಲ್ಲಿ ೪೮೦೨ ಮಕ್ಕಳಿಗೆ ಪೊಲೀಯೋ ಹನಿಹಾಕುವ ಗುರಿಹೊಂದಿದ್ದು, ೪೫೩೭ ಮಕ್ಕಳಿಗೆ ಪೊಲೀಯೋ ನೀಡುವ ಮೂಲಕ ಶೇ.೯೪.೪೮ರಷ್ಟು ಗುರಿಮುಟ್ಟಿದೆ. ಶೃಂಗೇರಿ ತಾಲೂಕಿನಲ್ಲಿ ೧೯೦೦ ಮಕ್ಕಳಿಗೆ ಬದಲಾಗಿದೆ.೧೭೭೪ ಮಕ್ಕಳಿಗೆ ಪೊಲೀಯೋ ಹನಿಯನ್ನು ತಾಲೂಕು ಆರೋಗ್ಯ ಇಲಾಖೆ ಶೇ.೯೩.೩೭ ರಷ್ಟು ಪ್ರಗತಿಸಾಧಿಸಿದೆ.
ಐದುವರ್ಷದೊಳಗಿನ ಮಕ್ಕಳಿಗೆ ಪೊಲೀಯೋ ಹನಿಹಾಕುತ್ತಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಪೊಲೀಯೋ ಹನಿಹಾಕಲಾಯಿತು. ಬಸ್‌ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಪೊಲೀಯೋ ಹನಿಹಾಕಲಾಯಿತು. ಒಟ್ಟು ನಾಲ್ಕು ದಿನಗಳ ಪಲ್ಸ್‌ಪೊಲೀಯೋ ಕಾರ್ಯಕ್ರಮವಿದ್ದು, ಉಳಿದ ಮೂರು ದಿನಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾಕಾರ್ಯಕರ್ತೆಯರು ಮನೆಮನೆಗೆ ಭೇಟಿನೀಡಿ ಬಿಟ್ಟುಹೋಗಿರುವ ಮಕ್ಕಳಿಗೆ ಪೊಲೀಯೋ ಹನಿಹಾಕುವರು.
Pulse polio coverage in the district has increased by 93.40%.
Leave a comment