Home Crime News ಮಚ್ಚು ತಂದವರು ಯಾರು – ಗಣೇಶನ ಗಲಾಟೆ ಕೊಲೆಯಲ್ಲಿ ಅಂತ್ಯ
Crime NewsHomeKadurLatest Newsnamma chikmagalur

ಮಚ್ಚು ತಂದವರು ಯಾರು – ಗಣೇಶನ ಗಲಾಟೆ ಕೊಲೆಯಲ್ಲಿ ಅಂತ್ಯ

Share
Share

ಚಿಕ್ಕಮಗಳೂರು: ಸಖರಾಯಪಟ್ಟಣದ ಕಾಂಗ್ರೆಸ್ ಮುಖಂಡ ಗಣೇಶ (35)  ಕ್ಷುಲ್ಲಕ ಕಾರಣಕ್ಕೆ ಕೊಲೆಯಾಗಿದ್ದಾನೆ,   ಜೆ.ಡಿ.ಎಸ್ ನಲ್ಲಿ ಗುರ್ತಿಸಿ ಕೊಂಡಿದ್ದು ಅಲ್ಲಿ ರಗಳೆ ಮಾಡಿಕೊಂಡು ಕಾಂಗ್ರೆಸ್ ಸೇರಿಕೊಂಡು ರಾಜಕೀಯವಾಗಿ ಬೆಳೆಯಲು ಪ್ರಾರಂಭ ಮಾಡಿದ್ದ ,ಗ್ರಾಮ ಪಂಚಾಯತಿ ಸದಸ್ಯನಾಗಿ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕನಾಗಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಗಣೇಶ ಮುಂಬರುವ ಜಿಲ್ಲಾ ಪಂಚಾಯತಿಗೆ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದ ಎನ್ನಲಾಗಿದೆ.

ದತ್ತ ಜಯಂತಿ ಹಿನ್ನೆಲೆಯಲ್ಲಿ ಭಜರಂಗದಳದವರು ಬ್ಯಾನರ್ ಕಟ್ಟಿದ್ದನ್ನು ಪೊಲೀಸ್ ರು ತೆರುವು ಗೊಳಿಸಲು ಸೂಚನೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ಸಂಜು ಎಂಬಾತ ಟ್ರಾಕ್ಟರ್ ನಲ್ಲಿ ಬಂದು ಬ್ಯಾನರ್ ಬಿಚ್ಚಿಸಿ ಕೊಂಡು ಬರುವಾಗ ಇನ್ನೊಬ್ಬ ಭಜರಂಗದಳದ ನಿತನ್ ಎಂಬಾತ ಬರುವಾಗ ಟ್ರಾಕ್ಟರ್ ಅವನ ಮೇಲೆ ಚಲಾಯಿಸುವಂತೆ ಬಂದಿದ್ದಾನೆ. ಅಲ್ಲಿದ್ದ ಗಣೇಶ ನಿಮ್ಮದು ಅತಿಯಾಯಿತು ಎಂದು ಗದರಿದ್ದಾನೆ ಎನ್ನಲಾಗಿದೆ. ಮಾತಿಗೆ ಮಾತು ಬೆಳೆದಾಗ ಸಂಜುಗೆ ಗಣೇಶ ಹೊಡೆದ ಎನ್ನಲಾಗುತ್ತಿದೆ. ಇದರಿಂದಾಗಿ ಸಂಜು ಮತ್ತಿತರರು ಗಣೇಶನ ಶರ್ಟ್ ಹರಿದು ಹಾಕಿದ್ದಾರೆ. ಅಲ್ಲಿದ್ದ ಜನ ಗಲಾಟೆ ಬಿಡಿಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಮಚ್ಚು ತಂದಿದ್ದವರು ಯಾರು ?
ನನಗೆ ಅವಮಾನವಾಯಿತು ಎಂದು ಗಣೇಶ ಅಪ್ಪುಗೌಡ, ಚಂದು, ಕತ್ತೆ ಸಂದೀಪ್ ಮತ್ತಿತರರನ್ನು ಕರೆದುಕೊಂಡು ಸಂಜು ಮತ್ತಿತರರನ್ನು ಹುಡುಕಿಕೊಂಡು ಹೋದಾಗ ಕೆಳಗಡೆ ಬಸ್ ನಿಲ್ದಾಣದ ಬಳಿ ನಾಗಭೂಷಣ್ ಸಿಕ್ಕಿದ್ದಾನೆ ಅವನಿಗೆ ಮಚ್ಚಿನಿಂದ ಹೊಡೆದಿದ್ದು ಅಲ್ಲಿಂದ ತಪ್ಪಿಸಿಕೊಂಡು ಕೊಂಡು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಈ ವಿಷಯ ತಿಳಿದ ಸಂಜು ಇತರರು ಸೈನ್ಸ್ ಸೀನ ತೋಟದ ಬಳಿ ಸೇರಿದ್ದಾರೆ .ಈ ವಿಷಯ ತಿಳಿದು ಗಣೇಶನ ತಂಡ ಅಲ್ಲಿಗೆ ಬಂದಿದೆ ಕೈಗೆ ಸಿಕ್ಕ ಸಂಜುಗೆ ಮಚ್ಚಿನಿಂದ ಹೊಡೆದಿದ್ದಾರೆ ಹೆಚ್ಚು ಕಡಿಮೆ ಆದರೆ ಎಂದು ಗಣೇಶನ ಜೊತೆಗೆ ಬಂದ ಕೆಲವರು ಅಲ್ಲಿಂದ ಕಳಚಿಕೊಂಡಿದ್ದಾರೆ ಎನ್ನಲಾಗಿದೆ.

ಗಣೇಶ ಸೇರಿದಂತೆ ಮೂರು ಜನ ಹಿಂದುರಿಗೆ ಬರುವಾಗ ಗಣೇಶ ನ ಕೈನಲ್ಲಿದ್ದ ಮಚ್ಚನ್ನು ಕಿತ್ತುಕೊಂಡು ತಲೆಗೆ ಬಲವಾಗಿ ಹೊಡೆದಿದ್ದಾರೆ ಬಲವಾದ ಪೆಟ್ಟು ಬಿದ್ದಾಗ ಗಣೇಶ ಸ್ಥಳದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.ಮಚ್ಚಿನಿಂದ ಹೊಡೆದವರು ಯಾರು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರ ಬೇಕಾಗಿದೆ. ಕ್ಷುಲ್ಲಕ ಕಾರಣದಿಂದ ಪ್ರಾಣ ಹೋಯಿತು ಈಗ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ v/s ಬಿಜೆಪಿ ಎಂಬ ಸಮರ ಶುರುವಾಗಿದೆ. ಗಣೇಶನ ಮೃತ ದೇಹವನ್ನು ಸಖರಾಯಪಟ್ಟಣದಲ್ಲಿ ಮೆರವಣಿಗೆ ನಡೆಸಿದರು, ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಭಾಪತಿ ಬಿ.ಎಲ್‌ ಶಂಕರ್‌ ಸೇರಿದಂತೆ ಕಾಂಗ್ರಸ್‌ ಪಕ್ಷದ ಮುಖಂಡರು ಇದ್ದರು. ತನಿಖೆ ನಡಸುತ್ತಿರುವ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Ganesh’s riot ends in murder

Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...