Home namma chikmagalur chikamagalur ಲಾರಿ ಡಿಕ್ಕಿಗೆ ಪಶುವೈದ್ಯಕೀಯ ಇಲಾಖೆ ಸಿಬ್ಬಂದಿ ಸಾವು
chikamagalurHomeLatest Newsnamma chikmagalur

ಲಾರಿ ಡಿಕ್ಕಿಗೆ ಪಶುವೈದ್ಯಕೀಯ ಇಲಾಖೆ ಸಿಬ್ಬಂದಿ ಸಾವು

Share
Share

ಅಜ್ಜಂಪುರ: ಕರ್ತವ್ಯಕ್ಕೆ ತೆರಳುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಶುವೈದ್ಯಕೀಯ ಇಲಾಖೆಯ ಅಟೆಂಡರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿಯಾಪುರದ ಜ್ಞಾನ ದೀಪ ಶಾಲೆ ಮುಂಭಾಗದ ಟಾರು ರಸ್ತೆಯಲ್ಲಿ ಆ.20ರಂದು ನಡೆದಿದೆ.

ಮೃತರನ್ನು ಕಡೂರು ತಾಲೂಕು ಕಾಮನಕೆರೆ ಗ್ರಾಮದ ಶಿವೇಗೌಡ ಆರ್.ಎಸ್. (59) ಎಂದು ಗುರುತಿಸಲಾಗಿದೆ. ಅವರು ಚಿಕ್ಕಬಳ್ಳೇಕೆರೆಯ ಪಶುವೈದ್ಯಕೀಯ ಇಲಾಖೆಯಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಶಿವೇಗೌಡ ಅವರು ಎಂದಿನಂತೆ ಆ.20ರಂದು ಬೆಳಗ್ಗೆ ತಮ್ಮ ಸ್ಕೂಟಿ (ಕೆಎ-66-ಎಲ್-5615)ಯಲ್ಲಿ ಕರ್ತವ್ಯಕ್ಕೆ ತೆರಳಿದ್ದರು. ಸಂಜೆ ಇಲಾಖೆಗೆ ಸಂಬಂಧಿಸಿದ ಉಪಕರಣಗಳನ್ನು ಕಡೂರಿನಿಂದ ತರಲು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ, ಗಿರಿಯಾಪುರದ ಜ್ಞಾನ ದೀಪ ಶಾಲೆ ಮುಂಭಾಗದಲ್ಲಿ ಹಿಂದಿನಿಂದ ಬಂದ ಕೆಎ-65-5050 ಸಂಖ್ಯೆಯ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ಬಳಿಕ ಲಾರಿ ಚಾಲಕ ವಾಹನವನ್ನು ನಿಯಂತ್ರಿಸಲಾಗದೆ ಅದರ ಎಡಭಾಗದ ಮುಂದಿನ ಹಾಗೂ ಹಿಂದಿನ ಚಕ್ರಗಳು ಶಿವೇಗೌಡ ಅವರ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಪಘಾತಕ್ಕೆ ಕಾರಣವಾದ ಲಾರಿಯ ಚಾಲಕನನ್ನು ಸೀತಾರಾಮ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಮೃತದೇಹವನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Veterinary Department staff dies in lorry collision

Share

Leave a comment

Leave a Reply

Your email address will not be published. Required fields are marked *

Don't Miss

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ, ದೇಶದ ಸಾಧನೆಗಳನ್ನು ಸ್ಮರಿಸುವ, ಸ್ವಾತಂತ್ರ್ಯದ ಮೌಲ್ಯಗಳನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು...

ಕಸ್ತೂರಿ ರಂಗನ್ ವರದಿ ಮರುಪರಿಶೀಲಿಸಲು ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ತಕ್ಷಣವೇ ಬರಗಾಲವೆಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮಲೆನಾಡಿನ 137 ಗ್ರಾಮಗಳಿಗೆ ಕಂಟಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಪುನಃ ಪರಿಶೀಲಿಸಿ ಜನವಸತಿ...

Related Articles

ಅಧಿಕಾರ ಎಂಬ ಮಾಯಾ ಜಿಂಕೆ ಮರೆಯಾಗಿದ್ದು ಏಕೆ ?

ಚಿಕ್ಕಮಗಳೂರು: ಕಳೆದ ನಾಲ್ಕು ವರೆ ವರ್ಷಗಳ ಹಿಂದೆಯೇ ವಿಧಾನ ಪರಿಷತ್ ಸದಸ್ಯರಾಗ ಬೇಕಿದ್ದ ಗಾಯಿತ್ರಿ ಶಾಂತೇಗೌಡ...

ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ-ಲೂಟಿಗಾಗಿ ಪೈಪೋಟಿ

ಚಿಕ್ಕಮಗಳೂರು: ಬಿಜೆಪಿ ಸರ್ಕಾರದಲ್ಲಿ ಶಾಸಕರ ನಡುವೆ ಕ್ಷೇತ್ರದ ಅಭಿವೃದ್ಧಿಗೆ ಪೈಪೋಟಿ ನಡೆದರೆ, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ,ಲೂಟಿಗಾಗಿ...

ಸ್ವಾವಲಂಬನೆ-ಸಮಾಜ ಅವಕಾಶವೇ ಸಹಕಾರಿ ಚಳುವಳಿ ಉದ್ದೇಶ

ಚಿಕ್ಕಮಗಳೂರು: ಸಹಕಾರಿ ಚಳುವಳಿಯ ಮೂಲತತ್ವವೇ ಸ್ವಾವಲಂಬನೆ, ಪರಸ್ಪರ ಸಹ ಕಾರ, ಸಮಾನ ಅವಕಾಶ ಹಾಗೂ ಸಾಮಾಜಿಕ...

ಅಕ್ರಮ ಮರಳು ಸಾಗಾಟ: 407 ಲಾರಿ ವಶ, ಚಾಲಕ ಪೊಲೀಸ್ ವಶಕ್ಕೆ

ಶೃಂಗೇರಿ: ಪರವಾನಗಿ ಇಲ್ಲದೆ 407 ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇಲೆ ಶೃಂಗೇರಿ ಪೊಲೀಸರು...