Home ಲಂಚ-ಲಂಚ-ಲಂಚ ತಾಣವಾಗಿರುವ ತರೀಕೆರೆ ತಾಲ್ಲೂಕು ?
HomeLatest Newsnamma chikmagalur

ಲಂಚ-ಲಂಚ-ಲಂಚ ತಾಣವಾಗಿರುವ ತರೀಕೆರೆ ತಾಲ್ಲೂಕು ?

Share
Share

ತರೀಕೆರೆ: ತರೀಕೆರೆ ಕ್ಷೇತ್ರದಲ್ಲಿ ಲಂಚದ ಕೂಗು ಮಾರಿ ಅಬ್ಬರ ಹೇಳತೀರದಾಗಿದೆ.ಸಣ್ಣ, ಸಣ್ಣ ಕೆಲಸ ಕಾರ್ಯಗಳಿಗೂ ಲಂಚ.ಕೂನೆಗೆ ಮಾತನಾಡಿಸ ಬೇಕು ಎಂದರೆ ಲಂಚ ಕೊಡುವ ಪರಿಪಾಠ ಬೆಳೆದಿದೆ. ಯಾಥಾ,ಜನಪ್ರತಿನಿಧಿ ಯಾಥಾ ಅಧಿಕಾರಿಗಳು ಎನ್ನುವ ದುಸ್ಥಿತಿ ತಾಂಡವವಾಡುತ್ತಿದೆ.ವಿರೋಧ ಪಕ್ಷಗಳು ಕಣ್ಣು ಮುಚ್ಚಿ ನಾವು ಅವರೇ ನೀವು ಅವರೇ ತಿನ್ನಿ,ತಿನ್ನಿ ಎಂಬಂತೆ ಕೊಡಾಡುತ್ತಿದ್ದಾರೆ.

ತರೀಕೆರೆ ಕ್ಷೇತ್ರದಲ್ಲಿ ಸುಮಾರು ಹತ್ತಕ್ಕೂ ಹೆಚ್ಯ ಅಧಿಕಾರಿ, ನೌಕರರು ಲಂಚ ಪಡೆಯುವಾಗ ಲೋಕಾಯುಕ್ತಾದವರು ಬಂಧಿಸಿರುವುದೆ ಸಾಕ್ಷಿ. ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಮತ್ತು ಪಿ.ಡಿ.ಒ ಗಳು ಹಗಲು ರಾತ್ರಿ ಎನ್ನದೆ ಲಂಚ, ಲಂಚ ಎಂದು ಜೊಲ್ಲು ಸುರಿಸಿಕೊಂಡು ತಿರುಗುತ್ತಿದ್ದಾರೆ.

ಜನರಿಂದ ಸೈಟ್ ಕೊಡುತ್ತೇವೆ ಎಂದು ಲಕ್ಷಾಂತರ ಹಣ ವಸೂಲಿ ಮಾಡಿರುವ ಘಟನೆ ಲಿಂಗದಹಳ್ಳಿ ಹೋಬಳಿ ತಿಗಡ ಗ್ರಾಮ ಪಂಚಾಯತಿಯ ಮಂಚೇತವಾರ ಗ್ರಾಮದಲ್ಲಿ ನಡೆದು ದೂರು,ಪ್ರತಿದೂರು ದಾಖಲಾಗಿರುವುದು ಲಂಚದ ಹಾವಳಿಗೆ ಸಾಕ್ಷಿ ಅಲ್ಲವೇ.

ಅರಣ್ಯ ಇಲಾಖೆ ಮತ್ತು ಹುಲ್ಲು ಬನ್ನಿ ಖಾರಬು ಜಾಗ ನಿವೇಶನರಹಿತರಿಗೆ ನೀಡುವುದಾಗಿ ಹೇಳಿ ಸರ್ವೆ ನಂಬರ್ ಒಂದರ 35, ಎಕರೆ ಮತ್ತು96.10 ಎಕರೆ ಜಾಗ ತೋರಿಸಿ ಲಕ್ಷ ಲಕ್ಷ ಹಣ ಎತ್ತಿಕೊಂಡು ಜನರಿಗೆ ಕಿರುಕುಳ ನೀಡಲಾಗಿದ್ದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀದೇವಿ ಪತಿ ಕುಟ್ಟಿ ಪಿ.ಡಿ.ಒ ಶಿವಮೂರ್ತಿ ಸೇರಿ ಯಾವುದೋ ಜಾಗದಲ್ಲಿ ಬೇಲಿ ಹಾಕಿಸಿದ್ದಲ್ಲದೇ ಜೆಸಿಬಿ ಯಲ್ಲಿ ಮರ ಗಿಡಗಳನ್ನು ತೆಗಿಸಿದರು ಅರಣ್ಯ ಇಲಾಖೆ ಮೌನವಾಗಿರುವುದು ನೋಡಿದರೆ ಹಣಕ್ಕಾಗಿ ಒತ್ತಡ ಇರುವವರು ಶಿಫಾರಸ್ಸು ಕೆಲಸ ಮಾಡಿದೆ ಎಂದು ಜನ ಮಾತನಾಡುತ್ತಿದ್ದಾರೆ.

ಅರಣ್ಯ ಇಲಾಖೆಯ ಗಮನಕ್ಕೆ ಬಾರದಿರುವುದು ನೋಡಿ ಜನ ತಾ ಮುಂದು,ನಾ,ಮುಂದು ಎಂದು ಹಣ ಕೊಟ್ಟು ಈಗ ಪೊಲೀಸ್ ಠಾಣೆಗೆ ಹೋಗುವಂತೆ ಆಗಿದೆ. ಪಿ.ಡಿ.ಒ.ಶಿವಮೂರ್ತಿ ಕೈವಾಡ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಜನ ಹೇಳುತ್ತಿದ್ದಾರೆ.ಲಂಚದ ಮೇಲಿನವರಿಗೆ ತಲುಪಿರಿವುದರಿಂದ ಎಲ್ಲವೂ ಮೌನ,ಮೌನ ಎನ್ನುತ್ತಿದ್ದಾರೆ.ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ನಿರೀಕ್ಷೆ ಮಾಡಬಹುದು ಇಲ್ಲದಿದ್ದರೆ ಕಳಕೊಂಡವ ಕೊಡಂಗಿ,ಇಸಕೊಂಡವನು ವೀರಭದ್ರ ಎನ್ನಬೇಕಾಗುತ್ತದೆ.

Is Tarikere taluk a place of bribery  bribery bribery ?

Share

Leave a comment

Leave a Reply

Your email address will not be published. Required fields are marked *

Don't Miss

ವ್ಯಸನಮುಕ್ತ ಸಮಾಜ ನಿರ್ಮಾಣದಿಂದ ಮಾತ್ರ ಸುಂದರ ಭವಿಷ್ಯ ಸಾಧ್ಯ

ಚಿಕ್ಕಮಗಳೂರು: ಸಮಾಜದಲ್ಲಿ ಶಾಂತಿ, ಸ್ವಾಸ್ಥ್ಯ ಮತ್ತು ಉತ್ತಮ ವಾತಾವರಣ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರೂ ವ್ಯಸನಗಳಿಂದ ದೂರವಿರಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣದಿಂದ ಮಾತ್ರ ಸುಂದರ ಭವಿಷ್ಯ ಸಾಧ್ಯ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ...

ಬಿಜೆಪಿ ಶಾಸಕ ಯಶಪಾಲ್ ಸುವರ್ಣ ವಿರುದ್ಧ ಕ್ರಮಕ್ಕೆ ಒತ್ತಾಯ

ಚಿಕ್ಕಮಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ...

Related Articles

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು....

ಗಾಂಜಾ ಮಾರಾಟಕ್ಕೆ ಸಂಚು-ಮೂರು ಆರೋಪಿಗಳ ಬಂಧನ

ಎನ್.ಆ‌ರ್.ಪುರ: ಕೆ.ಕಣಬೂರು ಬಸ್ ತಂಗುದಾಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಂಚು ರೂಪಿಸಿ, ಅದನ್ನು ಹಂಚಿಕೊಳ್ಳುತ್ತಿದ್ದ...

ದೇವಸ್ಥಾನ ಪ್ರವೇಶದ ವಿಚಾರಕ್ಕೆ ಬಾಲಕನ ಮೇಲೆ ಕತ್ತಿಯಿಂದ ಹಲ್ಲೆಗೆ ಯತ್ನ

ಚಿಕ್ಕಮಗಳೂರು: ದೇವಸ್ಥಾನ ಪ್ರವೇಶದ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗೆ ಸೇರಿದ 16 ವರ್ಷದ ಬಾಲಕನಿಗೆ ಅವಾಚ್ಯವಾಗಿ...

ಸ್ಕೂಟರ್ ಮರದ ಬಿಳಲಿಗೆ ಡಿಕ್ಕಿಗೆ ಮಹಿಳೆ ಸ್ಥಳದಲ್ಲೇ ಸಾವು

ಕಡೂರು: ಸ್ಕೂಟರ್ ನಿಯಂತ್ರಣ ತಪ್ಪಿ ಆಲದ ಮರದ ಬಿಳಲಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ...