Home namma chikmagalur chikamagalur ಸಹಕಾರಿ ರಂಗದಲ್ಲಿ ನಿಷ್ಟೆ, ಪ್ರಾಮಾಣಿಕತೆ ಮಹತ್ವ ನೀಡಿ
chikamagalurHomeLatest Newsnamma chikmagalur

ಸಹಕಾರಿ ರಂಗದಲ್ಲಿ ನಿಷ್ಟೆ, ಪ್ರಾಮಾಣಿಕತೆ ಮಹತ್ವ ನೀಡಿ

Share
Share

ಚಿಕ್ಕಮಗಳೂರು:  ಸಹಕಾರಿ ರಂಗದಲ್ಲಿ ನಿಷ್ಟೆ, ಪ್ರಾಮಾಣಿಕತೆಗೆ ಹೆಚ್ಚಿನ ಮಹತ್ವ ನೀಡಬೇಕು. ಒಳ ವ್ಯವಹಾರದಲ್ಲಿ ತೊಡಗಿಸಿಕೊಂಡರೆ ಎಂದಿಗೂ ಸಂಘ ವೃದ್ದಿಯಾಗದು. ಈ ದಿಸೆಯಲ್ಲಿ ಮೂಗ್ತಿಹಳ್ಳಿ ಸೊಸೈಟಿ ನ್ಯಾಯಬದ್ಧ ವಹಿವಾಟಿನೊಂದಿಗೆ ಉತ್ತಮ ಕಟ್ಟಡ ನಿರ್ಮಿಸಿ ಸಾಧನೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದರು.

ತಾಲ್ಲೂಕಿನ ಮೂಗ್ತಿಹಳ್ಳೀ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿ ಸಹಕಾರಿ ಸಂಸ್ಥೆಗಳಲ್ಲಿ ಹಣಕಾಸಿನ ವಿಚಾರದಲ್ಲಿ ದಕ್ಷತೆ, ಪ್ರಾಮಾಣಿಕತೆ ಜೊತೆಗೆ ಮೇಲ್ವಿಚಾರಣೆ ಖಂ ಡಿತ ಇರಬೇಕು. ಎಂದಿಗೂ ಮ್ಯೂಸಿಕಲ್ ಚೇರ್‌ನಂತೆ ಆಗಬಾರದು. ಆಡಳಿತ ಮಂಡಳಿ ಸೊಸೈಟಿ ಬೆಳವಣಿ ಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಸಹಕಾರಿ ರಂಗ ಅದೋಗತಿಗೆ ಸಾಗುವ ಸಾಧ್ಯತೆಯಿದ್ದು ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿಸ್ತಿನಿಂದ ನಡೆದುಕೊಳ್ಳಬೇಕು ಎಂದರು.

ಇತ್ತೀಚೆಗೆ ತೀವ್ರ ಬರಗಾಲದ ಸಮಸ್ಯೆ ರೈತರು ಮತ್ತು ಬೆಳೆಗಾರರನ್ನು ಕಾಡುತ್ತಿದೆ. ಪ್ರತಿ ವರ್ಷ ಶೇ.೪೦ ರಷ್ಟು ವಾಡಿಕೆ ಮಳೆ ಕ್ಷೀಣಿಸುವ ಮೂಲಕ ಎಲ್ಲೆಡೆ ಬರದ ಛಾಯೆ ಆವರಿಸಿಕೊಂಡಿದೆ. ಇದು ಬೆಳೆನಷ್ಟ, ಸಾಲ ಮರುಪಾವತಿಗೂ ಸಮಸ್ಯೆವೊಡ್ಡುತ್ತಿದೆ. ಮಳೆ ಕ್ಷೀಣಿಸಿದರೆ ಸಹಕಾರಿ ಕ್ಷೇತ್ರ ಹಾಗೂ ಬ್ಯಾಂಕ್‌ಗಳಿಗೂ ಬಹಳ ಷ್ಟು ತೊಂದರೆಯಾಗುತ್ತದೆ ಎಂದರು.

ಹವಮಾನ ವೈಪರೀತ್ಯದ ಪರಿಣಾಮ ಮಳೆಯ ಅಭಾವ ಸೃಷ್ಟಿಯಾಗಿದೆ. ಈ ಸಮಯದಲ್ಲಿ ಪ್ರತಿಯೊ ಬ್ಬರು ಮಾನಸಿಕವಾಗಿ ಗಟ್ಟಿಯಾಗಬೇಕು. ಜಾನುವಾರುಗಳಿಗೆ ಮೇವು ಹಾಗೂ ಜನರಿಗೆ ಕಡಿಮೆ ನೀರಿನ ವೆಚ್ಚ ದಲ್ಲಿ ಉತ್ಪಾದಿಸುವ ಬೆಳೆಗಳಿಗೆ ಆಸರೆಯಾಗಿ ನಿಲ್ಲಬೇಕು. ಭವಿಷ್ಯದಲ್ಲಿ ಮುಂದೊಂದು ದಿನ ಒಳ್ಳೆಯ ಕಾಲ ಬರಲಿದೆ ಎಂದು ವಿಶ್ವಾಸ ಮೂಡಿಸಿದರು.

ಜಿಲ್ಲೆಯಲ್ಲಿ ಬಹುತೇಕ ಸೊಸೈಟಿಗಳಿಗೆ ಹೋಲಿಸಿದರೆ ಮೂಗ್ತಿಹಳ್ಳಿ ಸೊಸೈಟಿಗೆ ಹೆಚ್ಚು ಅವಿಭಾವ ಸಂಬ ಂಧವಿದೆ. ಹೀಗಾಗಿ ಮೂಗ್ತಿಹಳ್ಳಿ ಸಹಕಾರಿ ಸಂಘಕ್ಕೆ ಸಿಡಿಸಿಸಿ ಕಡೆಯಿಂದ ಭೀಮನ ಬಲವನ್ನು ತುಂ ಬುವ ಪ್ರಯತ್ನ ಮಾಡುತ್ತೇನೆ. ಈ ದಿಸೆಯಲ್ಲಿ ಸಹಕಾರಿ ಕ್ಷೇತ್ರಕ್ಕೆ ಕನಿಷ್ಟ ೩ ಲಕ್ಷದವರೆಗೂ ಶೂನ್ಯಬಡ್ಡಿದರಲ್ಲಿ ಸಾಲ ಸೌಲಭ್ಯ, ಮಧ್ಯಮ ವರ್ಗಕ್ಕೆ ಶೇ.೩ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಸೇವೆ ಮತ್ತು ಲಾ ಭವನ್ನು ಸಮತೋಲನವಾಗಿ ತೆಗೆದುಕೊಳ್ಳಬೇಕು. ಸೊಸೈಟಿಗಳ ಅಭಿವೃದ್ದಿಗೂ ಅಪೆಕ್ಸ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದು ಈ ಮೂಲಕ ಮುಖ್ಯಮಂತ್ರಿ ಹಾಗೂ ಕೇಂದ್ರ ಗೃಹಮಂತ್ರಿಗಳೊಂದಿಗೂ ಚರ್ಚಿಸಿ ಆರ್ಥಿಕ ನೆರವು ಕಲ್ಪಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಆನಂದ್ ಮಾತನಾಡಿ ಈ ಸಾಲಿನಲ್ಲಿ ಮೂಗ್ತಿ ಹಳ್ಳಿ ಸೊಸೈಟಿ ಹನ್ನೇರಡು ವರ್ಷಗಳು ಪೂರೈಸಿದೆ. ಹಿಂದೆ ಕೂದುವಳ್ಳಿ ಸೊಸೈಟಿಯಿಂದ ಹೊರಬಂದು ಮೂಗ್ತಿಹಳ್ಳಿ ಸುತ್ತಮುತ್ತಲಿನ ರೈತರನ್ನು ಒಟ್ಟುಗೂಡಿಸಿ ಸ್ವತಂತ್ರ್ಯವಾಗಿ ನಿರ್ಮಿಸಿದ ಸಂಸ್ಥೆ ಎಂದು ಹೇಳಿದರು.

ಮುಖ್ಯವಾಗಿ ಸಹಕಾರಿ ಸಂಘ ನಿರ್ಮಾಣಕ್ಕೆ ಮೂಲಕತೃವೇ ಎಂಎಲ್ಸಿ ರವಿಯವರು. ೨೦೧೩ ರಿಂದಲೂ ಪ್ರತಿವರ್ಷ ಲಾಭಾಂಶ ಗಳಿಸಿದ್ದು ಪ್ರಸಕ್ತ ಸಾಲಿನಲ್ಲೂ ೧೫.೨೮ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಅಲ್ಲದೇ ನೂತನ ಕಟ್ಟಡವನ್ನು ನಿರ್ಮಿಸುವ ಮೂಲಕ ಸದಸ್ಯರು ಹಾಗೂ ಸಂಘದ ಅಭಿವೃಧ್ದಿಗೆ ಶ್ರಮಿಸುತ್ತಿದ್ದೇವೆ ಎಂ ದು ತಿಳಿಸಿದರು.

ಪ್ರಸ್ತುತ ಮೂಗ್ತಿಹಳ್ಳೀ ಸೊಸೈಟಿಗೆ ಸಿ.ಟಿ.ರವಿಯವರು ೩೩ ಲಕ್ಷ, ಎಸ್.ಎಲ್.ಧರ್ಮೇಗೌಡರು ೫ ಲಕ್ಷ, ಬೆಳ್ಳಿಪ್ರಕಾಶ್ ೫ ಲಕ್ಷ ಅನುದಾನ ನೀಡಿದ್ದು ಈ ಹೊರತಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ನಿರ್ದೇಶಕರುಗಳು ಹಾಗೂ ಸದಸ್ಯ ಬಂಧುಗಳು ಕನಿಷ್ಟ ಮೊತ್ತದಲ್ಲೂ ಸೊಸೈಟಿ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ ಮಾತನಾಡಿ ಮೂಗ್ತಿಹಳ್ಳಿ ಸೊಸೈಟಿಯ ನೂತನ ಕಟ್ಟಡದಲ್ಲಿ ರೈತರಿಗೆ ಅನುಕೂಲವಾಗಲು ಪಹಣಿ, ಜನಾಔಷಧಿ ಕೇಂದ್ರ ಹಾಗೂ ಕಾ ಮನ್ ಸರ್ವೀಸ್ ಪಾಯಿಂಟ್ ತೆರೆದಿರುವುದು ಉತ್ತಮ ಬೆಳವಣಿಗೆ. ಹೀಗಾಗಿ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಇನ್ನಷ್ಟು ಸಹಕರಿಸುವ ಮೂಲಕ ಸೊಸೈಟಿಗೆ ಅಭಿವೃದ್ದಿ ಒತ್ತು ನೀಡಬೇಕು ಎಂದು ಹೇಳಿದರು.

ಮೂಗ್ತಿಹಳ್ಳಿ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಎಂ.ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಇ.ಮಂಜುನಾಥ್, ಸಿಡಿಸಿಸಿ ಬ್ಯಾಂಕ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರವೀನ್ ಬಿ.ನಾಯಕ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಎಸ್.ದಯಾ ನಂದ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ.ದಿವಾಕರ್, ಮೂಗ್ತಿಹಳ್ಳಿ ಸೊಸೈಟಿ ಉಪಾಧ್ಯಕ್ಷ ಎಸ್. ಟಿ.ಚಂದ್ರೇಗೌಡ, ನಿರ್ದೇಶಕರುಗಳಾದ ಕುಮಾರೇಗೌಡ, ದಿನೇಶ್‌ರಾಜ್ ಅರಸ್, ಗುರುಮೂರ್ತಿ, ಮನುಕು ಮಾರ್, ಪ್ರಮೀಳಾ, ಸೀತಾ, ದೇವರಾಜ್, ಪದ್ಮ, ಪವನ್‌ಕುಮಾರ್, ಹರೀಶ್‌ರಾ ಜ್ ಮುಂತಾದವರು ಉಪಸ್ಥಿತರಿದ್ದರು.

Prioritize dedication and honesty in the cooperative sector.

Share

Leave a comment

Leave a Reply

Your email address will not be published. Required fields are marked *

Don't Miss

ಗ್ರೌಂಡ್ ಸರ್ವೇ ಅಗತ್ಯ-’ಕಾರ್ಬನ್ ಕ್ರೆಡಿಟ್ ನಿಗಮ’ ಸ್ಥಾಪನೆಗೆ ಪ್ರಸ್ತಾಪ

ಚಿಕ್ಕಮಗಳೂರು:  ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಕ್ಕೆ  ಸಂಬಂಧಿಸಿದಂತೆ ಉಪಗ್ರಹ ಆಧಾರಿತ ಚಿತ್ರಣವನ್ನು ಮಾತ್ರ ನೆಚ್ಚಿಕೊಂಡು ಅಧಿಸೂಚನೆ ಹೊರಡಿಸುತ್ತಿರುವುದು ಮಲೆನಾಡಿನ ರೈತರು ಹಾಗೂ ಸ್ಥಳೀಯ ಜನರಲ್ಲಿ ತೀವ್ರ ಆತಂಕ...

ಮಾಂಸ ಮಾರಾಟ- ಮೂವರ ಬಂಧನ

ಎನ್.ಆ‌ರ್. ಪುರ: ಕಾಡಿನಲ್ಲಿ ಮೇಯುತ್ತಿದ್ದ ಜಾನುವಾರನ್ನು ಹಿಡಿದು ತಂದು ಎಸ್ಟೇಟ್‌ ನ ಕೂಲಿಲೈನ್ ಬಳಿ ಬರ್ಬರವಾಗಿ ಕಡಿದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು...

Related Articles

ಬರಗಾಲ ಪರಿಹಾರಕ್ಕೆ ಆಗ್ರಹಿಸಿ ಸೆ.28ರಂದು ರೈತ ಸಂಘದ ಪ್ರತಿಭಟನಾ ಮೆರವಣಿಗೆ

ಚಿಕ್ಕಮಗಳೂರು: ಭೀಕರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ...

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ,...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ...

ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳ ಕಳ್ಳತನ

ಚಿಕ್ಕಮಗಳೂರು: ಮನೆಗೆ ಬೀಗ ಹಾಕಿ ಮಾಲೀಕರು ದೂರದ ಊರಿಗೆ ತೆರಳಿದ್ದನ್ನೇ ಹೊಂಚು ಹಾಕಿದ ಖದೀಮರು, ಹಿಂಬಾಗಿಲು...