Home namma chikmagalur chikamagalur ಸವದಳ ಸೂತ್ರದಡಿ ಎಲ್ಲರನ್ನು ಒಂದುಗೂಡಿಸಿ
chikamagalurHomeLatest Newsnamma chikmagalur

ಸವದಳ ಸೂತ್ರದಡಿ ಎಲ್ಲರನ್ನು ಒಂದುಗೂಡಿಸಿ

Share
Share

ಚಿಕ್ಕಮಗಳೂರು: ಸವದಳ ಸೂತ್ರದಡಿ ಎಲ್ಲರನ್ನು ಒಂದುಗೂಡಿಸಿ : ಡಾ.ಮಾತೆ ಗಂಗಾದೇವಿನಾಡಿನ ವೀರಶೈವ-ಲಿಂಗಾಯಿತ ಜನಾಂಗವನ್ನು ಬಸವದಳ ಸೂತ್ರದಡಿ ಒಂದುಗೂಡಿಸಿ, ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ರಾಷ್ಟ್ರೀಯ ಬಸವದಳವನ್ನು ಸಮಾಜ ದ ಮುಂಚೂಣಿಗೆ ತರಲಾಗಿದೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಶ್ರೀ ಡಾ.ಮಾತೆ ಗಂಗಾ ದೇವಿ ಮಾತಾಜೀ ತಿಳಿಸಿದರು.

ನಗರದ ವೀರಶೈವ-ಲಿಂಗಾಯತ ಸಮುದಾಯ ಭವನದಲ್ಲಿ ಭಾನುವಾರ ರಾಷ್ಟ್ರೀಯ ಬಸವದಳದ ಜಿಲ್ಲಾ ಸಮಾವೇಶ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿ ಅನೇಕ ಪಂಗಡಗಳಲ್ಲಿ ಛಿದ್ರಗೊಂಡಿರುವ ಬಸವಾದಿ ಸಮುದಾಯವನ್ನು ಒಂದಾಗಿಸುವುದೇ ಮೂಲ ಧ್ಯೇಯವಾಗಿದ್ದು, ಬಸವದಳವೆಂಬ ದಾರವನ್ನು ಬಳಸಿ, ತತ್ವನಿಷ್ಟೆಯ ಸೂಜಿ ಪೋಣಿಸಿ, ಚೇತನವೆಂಬ ಮಾ ಲೆ ತಯಾರಿಸುವ ಮುಖೇನಾ ಬಸವದಳದಡಿ ಬಂಧನಕ್ಕೊಳಪಡಿಸುವುದೇ ಆಶಯವಾಗಿದೆ ಎಂದರು.

ಮನುಷ್ಯನ ತನ್ನ ಜೀವನದ ಕತ್ತಲಿನ ಬೆಳಕನ್ನು ಪ್ರಜ್ವಲಗೊಳಿಸಲು ಮೊದಲು ಬಸವೇಶ್ವರರ ತತ್ವದಲ್ಲಿ ಸಾಗಬೇಕು. ಇಲ್ಲಿ ಅಧಿಕಾರ ಅಥವಾ ಸಂಪತ್ತಿನಿಂದ ಪ್ರೀತಿಯನ್ನು ಗಳಿಸಲು ಸಾಧ್ಯವಿಲ್ಲ. ಯಾವುದೇ ಖರ್ಚಿ ಲ್ಲದೇ ಸಹೃದಯಿ ಮನಸ್ಸು ಹೊಂದುವ ಮೂಲಕ ಎಲ್ಲರ ಹೃದಯ ಗೆಲ್ಲಬಹುದು ಎಂದು ತಿಳಿಸಿದರು.

ರಾಜ್ಯದ ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬಸವದಳ ಸಮಾವೇಶ ಯಶಸ್ವಿ ಯಾಗಿ ನಡೆದಿದೆ. ಇಂದು ಐದನೇ ಜಿಲ್ಲೆಯಾಗಿ ಚಿಕ್ಕಮಗಳೂರಿಗೆ ಆಗಮಿಸಲಾಗಿದ್ದು ಇಲ್ಲಿನ ನೂತನ ಪದಾ ಧಿಕಾರಿಗಳು ಪ್ರತಿ ಗ್ರಾಮೀಣ ಮಟ್ಟದಲ್ಲಿ ಬಸವದಳದ ಮೂಲ ಧ್ಯೇಯವನ್ನು ಪರಿಚಯಿಸುವ ಕಾಯಕ ಮಾ ಡಬೇಕು ಎಂದು ಹೇಳಿದರು.

ಮಠದ ಹಿರಿಯರಾದ ಡಾ. ಮಾತೆ ಮಹಾದೇವಿ ಮಾತಾಜೀಯವರ ಸಾರಥ್ಯದಲ್ಲಿ ನಾಡಿನ ಉದ್ದಗಲ ಕ್ಕೂ ಧರ್ಮಾಪ್ರಚಾರ ಕಾರ್ಯ ಹಮ್ಮಿಕೊಳ್ಳುವ ಮೂಲಕ ಚೆಲ್ಲಪಿಲ್ಲಿಯಾಗಿರುವ ಸಮುದಾಯದ ಪಂಗಡ ವನ್ನು ಬಲಿಷ್ಟಗೊಳ್ಳಲು ನಿರ್ಧರಿಸಲಾಗಿದೆ. ಅದರಂತೆ ನಾಡಿನಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಬಸವ ದಳ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಬಸವತತ್ವಪೀಠದ ಶ್ರೀ ಡಾ. ಬಸವ ಮರಳಸಿದ್ಧ ಮಹಾಸ್ವಾಮೀಜಿ ಮಾತನಾಡಿ ಹನ್ನೆರಡನೇ ಶತಮಾ ನದಲ್ಲಿ ಬಸವಾದಿ ಶರಣರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ. ಅವರ ವಚನ, ಅನುಭವ ಮಂಟಪ ಚಿಂತನೆ, ಸಮಸಮಾಜದ ಪರಿಕಲ್ಪನೆ ಹಾಗೂ ಜಾತ್ಯಾತೀತ ನಿಲುವು ಇಂದಿನ ಸಮಾಜಕ್ಕೆ ಅವಶ್ಯ ವಾಗಿದೆ ಎಂದು ತಿಳಿಸಿದರು.

ಬೈಲೂರು ನಿಷ್ಠಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಮಾತನಾಡಿ ಭಾರತವು ಜಗತ್ತಿನ ಅ ನೇಕ ದೇಶಕ್ಕಿಂತ ವಿಭಿನ್ನವಾಗಿದೆ. ಪ್ರತಿ ಗ್ರಾಮೀಣ ಮಟ್ಟದಲ್ಲೂ ಧಾರ್ಮಿಕ ಪುರುಷ, ಮಹಾತ್ಮರನ್ನು ಕಾಣು ಸುವ ಪುಣ್ಯಭೂಮಿ ಇದಾಗಿದೆ ಎಂದ ಅವರು ದೇಶದ ಹಿತಕ್ಕಾಗಿ ಬಸವದಳವು ತನು, ಮನ ಸೇವಾ ಕಾ ರ್ಯದಲ್ಲಿ ತೊಡಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಅಂಗೈನಲ್ಲಿ ಶಿವ ಆರಾಧನೆ ಹಾಗೂ ಜನಿವಾರ ಧರಿಸಲು ಮೂಲವೇ ಬಸವೇಶ್ವರರು. ಜಾತಿ, ಪಂಥ ಮತ್ತು ವರ್ಗಭೇದವನ್ನು ಮರೆತು ಸರ್ವತೋಮುಖ ಅಭಿವೃದ್ದಿ ಗೆ ಸೇವೆ ಸಲ್ಲಿಸಿದ ಬಸವಣ್ಣನವರ ತತ್ವಾದರ್ಶಗಳು ಇಂದಿಗು ಜನಸಾಮಾನದಲ್ಲಿ ಉಳಿದುಕೊಂಡಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಮಾತನಾಡಿ ಜಗತ್ತಿನಲ್ಲಿ ಎಷ್ಟೋ ಶೈಷ್ಟ ವಿಚಾರಗಳಿವೆ. ಆದ ರೆ ಆ ಶ್ರೇಷ್ಟ ವಿಚಾರಗಳನ್ನು ಬದುಕಿನಲ್ಲಿ ಆಚಾರದ ಮೂಲಕ ಅಳವಡಿಸಿಕೊಂಡಾಗ ಮಾತ್ರ ಬದುಕಿಗೆ ಸಾ ರ್ಥಕತೆ ಹಾಗೂ ಶ್ರೇಷ್ಟತೆ ಲಭಿಸಲಿದ್ದು ಸಾಮರಸ್ಯ ಮೂಡಿಸಲು ಬಸವಾದಿ ಶರಣರ ವಿಚಾರಧಾರೆ ನಿತ್ಯ ಜೀ ವನದಲ್ಲಿ ಪಾಲಿಸಬೇಕು ಎಂದರು.

ಇದೇ ವೇಳೆ ಉದ್ಯಮಿ ಬಿ.ಎನ್.ಚಿದಾನಂದ್ ಹಾಗೂ ಡಾ.ವಿನಾಯಕ ಸಿಂದಿಗೆರೆ ಅವರಿಂದ ಧರ್ಮ ಗುರುಗಳಿಗೆ ಪೂಜೆ ನಡೆಯಿತು. ಬಳಿಕ ಬಸವಯೋಗ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಬಸವದಳ ಜಿಲ್ಲಾಧ್ಯಕ್ಷ ಶಿವಾನಂದ ಗದ್ದೆಮನೆ ವಹಿಸಿದ್ದರು.

ಜಿಲ್ಲಾ ಪದಾಧಿಕಾರಿಗಳ ಆಯ್ಕೆ : ಶಿವಾನಂದ ಗದ್ದೆಮನೆ (ಅಧ್ಯಕ್ಷ), ಹಳೇಬೀಡು ಬಸವರಾಜು (ಕಾರ್‍ಯಾ ಧ್ಯಕ್ಷ), ಶಿವಮೂರ್ತಿ ಎಸ್ ಕೊಪ್ಪಲು (ಉಪಾಧ್ಯಕ್ಷ), ಎನ್.ಆರ್.ಶಿವಕುಮಾರ್ (ಪ್ರ.ಕಾರ್ಯದರ್ಶಿ), ಯೋ ಗೀಶಪ್ಪ (ಪ್ರ.ಸಂಚಾಲಕ), ಟಿ.ಆರ್.ಪ್ರಕಾಶ್ (ಖಜಾಂಚಿ), ವಿನಯ್ (ಸಹ ಕಾರ್ಯದರ್ಶಿ), ಎಂ.ಸಿ.ಚನ್ನೇ ಗೌಡ (ಸಂಘಟನಾ ಕಾರ್ಯದರ್ಶಿ).
ಕಾರ್ಯಕ್ರಮದಲ್ಲಿ ಯಳನಾಡು ಸಂಸ್ಥಾನದ ಶ್ರೀ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಬಸವಯೋ ಗಿ ಸ್ವಾಮೀಜಿ, ರಾಷ್ಟ್ರೀಯ ಬಸವದಳ ಕೇಂದ್ರ ಸಮಿತಿ ಪ್ರ.ಕಾರ್ಯದರ್ಶಿ ಚಂದ್ರಮೌಳಿ ಎನ್. ಮುಂತಾದ ವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಯಚನ್ನೇಗೌಡ ನಿರೂಪಿಸಿದರು. ಹಳೇಬೀಡು ಬಸವರಾಜು ಸ್ವಾಗತಿಸಿದರು. ಡಾ. ವೈ.ಎನ್‌ನಾಗೇಶ್ ವಂದಿಸಿದರು.

Bringing everyone together under the ‘Savadala’ principle.

Share

Leave a comment

Leave a Reply

Your email address will not be published. Required fields are marked *

Don't Miss

ಜಯಪುರ ಠಾಣೆಯ ಮಹಿಳಾ ಸಿಬ್ಬಂದಿಗೆ ಬಾಗಿನ

ಕೊಪ್ಪ : ಹಬ್ಬ-ಹರಿದಿನಗಳಲ್ಲೂ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸ್ ಸಿಬ್ಬಂದಿಯ ಮೊಗದಲ್ಲಿ ಹಬ್ಬದ ಸಂಭ್ರಮ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮವೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಗೌರಿ ಹಬ್ಬದ...

ಟ್ರಾಕ್ಟರ್ ಹರಿಸಿ ₹1.15 ಲಕ್ಷ ಮೌಲ್ಯದ ರಾಗಿ ಬೆಳೆ ನಾಶ

ತರೀಕೆರೆ : ನ್ಯಾಯಾಲಯದ ಸ್ಪಷ್ಟ ತಡೆಯಾಜ್ಞೆ ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೆ, ಜಮೀನಿಗೆ ಅಕ್ರಮವಾಗಿ ನುಗ್ಗಿ ಕಟಾವಿಗೆ ಬಂದಿದ್ದ ರಾಗಿ ಬೆಳೆಯ ಮೇಲೆ ಟ್ರಾಕ್ಟರ್ ಹರಿಸಿ ನಾಶಪಡಿಸಿರುವ ಆಘಾತಕಾರಿ ಘಟನೆಯೊಂದು ತರೀಕೆರೆ ತಾಲೂಕಿನ...

Related Articles

ಮೂಡಿಗೆರೆಯಲ್ಲಿ ಮುಸುಕುಧಾರಿ ಖದೀಮರಿಂದ ಸರಗಳ್ಳತನ

ಮೂಡಿಗೆರೆ: ಮುಂಜಾನೆಯ ತಂಪಾದ ವಾತಾವರಣದಲ್ಲಿ ರಸ್ತೆ ಬದಿಯಲ್ಲಿ ನಿರಾತಂಕವಾಗಿ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರನ್ನು...

ಅರಸನ ನಾಲೆ ಪುನಶ್ಚೇತನ‌ಕ್ಕೆ ಆಗ್ರಹಿಸಿ ಇಂದು ರೈತರ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವುದು ಹಾಗೂ...

ಪ್ರತಾಪ ಸಿಂಹ ವಿರುದ್ಧ ಭೀಮ್ ಆರ್ಮಿ ಪ್ರತಿಭಟನೆ

ಚಿಕ್ಕಮಗಳೂರು: ದಲಿತ ಸಂಘಟನೆಗಳ ಬಗ್ಗೆ ಮಾಜಿ ಸಂಸದ ಪ್ರತಾಪ ಸಿಂಹ ಲಘುವಾಗಿ ಮಾತನಾಡಿದ್ದು, ಕೂಡಲೇ ಕ್ಷಮೆ...

ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಬಂದ್‌ ಯಶಸ್ವಿ

ಶೃಂಗೇರಿ: ಕಸ್ತೂರಿರಂಗನ್ ವರದಿ ವಿರೋಧಿ ಸಮಿತಿ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ಶೃಂಗೇರಿ ಪಟ್ಟಣ ಬಂದ್...