Home namma chikmagalur chikamagalur ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ವಾರ್ಷಿಕ ವಹಿವಾಟು ಮೂರು ಸಾವಿರ ಕೋಟಿ
chikamagalurHomeLatest Newsnamma chikmagalur

ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ವಾರ್ಷಿಕ ವಹಿವಾಟು ಮೂರು ಸಾವಿರ ಕೋಟಿ

Share
Oplus_16908288
Share

ಚಿಕ್ಕಮಗಳೂರು: ೧೯೫೫ರಲ್ಲಿ ೧,೪೦೦ ರೂ. ಬಂಡವಾಳದೊಂದಿಗೆ ಆರಂಭಗೊಂಡ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇಂದು ಸುಮಾರು ಮೂರು ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ. ೧,೫೦೦ ಕೋಟಿ ರೂ.ಗೂ ಅಧಿಕ ಠೇವಣಿ ಸಂಗ್ರಹಿಸಿ, ೮೫೦ ಕೋಟಿ ರೂ.ಗೂ ಹೆಚ್ಚು ಕೃಷಿ ಸಾಲ ವಿತರಿಸುತ್ತಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನಪರಿ?ತ್ ಸದಸ್ಯ ಸಿ.ಟಿ. ರವಿ ಹೇಳಿದರು.

ನಗರದ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆದ ೭೨ನೇ ಸರ್ವಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿ ಕಳೆದ ೧೨ ವ?ಗಳಿಂದ ನಿರಂತರವಾಗಿ ಲಾಭ ಗಳಿಸುತ್ತಿರುವ ಬ್ಯಾಂಕ್, ನಬಾರ್ಡ್‌ನ ಪರಿವೀಕ್ಷಣೆಯಲ್ಲಿ ಸತತವಾಗಿ ?ಎ? ಗ್ರೇಡ್ ಪಡೆಯುತ್ತಿದೆ. ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬ್ಯಾಂಕಿಂಗ್ ಸೇವೆಗಳನ್ನು ಮತ್ತ? ವಿಸ್ತರಿಸುವ ಉದ್ದೇಶದಿಂದ ಹೆಚ್ಚಿನ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್‌ನೊಂದಿಗೆ ನಿರಂತರ ವ್ಯವಹಾರ ನಡೆಸುತ್ತಿರುವಂತೆಯೇ ಇತರ ಸಂಘಗಳು ಕೂಡ ಬ್ಯಾಂಕ್‌ನಲ್ಲಿ ಠೇವಣಿ ಇಡುವ ಮೂಲಕ ವ್ಯವಹಾರ ವೃದ್ಧಿಗೆ ಸಹಕರಿಸಬೇಕು. ಇದರಿಂದ ಅಗತ್ಯವಿರುವ ಸಂದರ್ಭದಲ್ಲಿ ಸಂಘಗಳು ಹಾಗೂ ಸದಸ್ಯರ ನೆರವಿಗೆ ಇನ್ನ? ಪರಿಣಾಮಕಾರಿಯಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬ್ಯಾಂಕ್ ಅನ್ನು ವೈಯಕ್ತಿಕ ಹಿತಾಸಕ್ತಿಗೆ ದುರುಪಯೋಗಪಡಿಸಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸದಸ್ಯರು ನೀಡುವ ಸಲಹೆಗಳನ್ನು ಬ್ಯಾಂಕಿನ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಪರಿಶೀಲಿಸಿ ಸಾಧ್ಯವಾದ? ಅನು?ನಗೊಳಿಸಲಾಗುವುದು ಎಂದರು.

ಸಹಕಾರ ಕ್ಷೇತ್ರದ ಸಮಸ್ಯೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರುವುದರ ಜೊತೆಗೆ, ವಿಧಾನಮಂಡಲದಲ್ಲೂ ಸಹಕಾರಿಗಳ ಧ್ವನಿಯಾಗಿ ಕೆಲಸ ಮಾಡುವುದಾಗಿ ಸಿ.ಟಿ. ರವಿ ಭರವಸೆ ನೀಡಿದರು.

ಸಭೆಯಲ್ಲಿ ನಿಕಟಪೂರ್ವ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್. ಸುರೇಶ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ನಿರ್ದೇಶಕರಾದ ಕೆ.ಆರ್.ಆನಂದಪ್ಪ, ಎಚ್.ಪಿ.ಶಿವಣ್ಣ, ಟಿ.ಎಲ್. ರಮೇಶ್, ದಿನೇಶ್ ಹೆಗಡೆ, ಎಸ್.ವಿ.ಬಸವರಾಜಪ್ಪ, ಕೆ.ಸಿ. ಜಯಪಾಲ್, ಬಿ.ಎಸ್. ಸತೀಶ್, ಎಸ್.ಟಿ. ಸೋನಲ್ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ನಾಯಕ್ ಸೇರಿದಂತೆ ಸಹಕಾರ ಸಂಘಗಳ ಪ್ರತಿನಿಧಿಗಳು, ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಬ್ಯಾಂಕ್ ಉಪಾಧ್ಯಕ್ಷ ಕೆ. ದಿನೇಶ್ ಸ್ವಾಗತಿಸಿದರು.

Chikkamagaluru DCC Bank’s annual turnover is ₹3000 crore.

Share

Leave a comment

Leave a Reply

Your email address will not be published. Required fields are marked *

Don't Miss

ಸೆ.14ರಂದು ಮುಳ್ಳಯ್ಯನಗಿರಿ ಸೇರಿದಂತೆ ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧ

ಚಿಕ್ಕಮಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಚಂದ್ರದ್ರೋಣ ಪರ್ವತ ಸಾಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಸೆಪ್ಟೆಂಬರ್ 14ರಂದು ಒಂದು ದಿನದ ಮಟ್ಟಿಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶಿಸಿದೆ. ಮುಳ್ಳಯ್ಯನಗಿರಿ,...

ಸುಳ್ಳು ವಂಶವೃಕ್ಷ ಸೃಷ್ಟಿಸಿ ಆಸ್ತಿ ಲಪಟಾಯಿಸಲು ಯತ್ನ: ಐವರ ವಿರುದ್ಧ ಪ್ರಕರಣ

ಕಡೂರು: ಸುಳ್ಳು ವಂಶವೃಕ್ಷ ಸೃಷ್ಟಿಸಿ, ಅದರ ಆಧಾರದ ಮೇಲೆ ಪಿತ್ರಾರ್ಜಿತ ಆಸ್ತಿಯ ಖಾತೆ ಬದಲಾವಣೆ ಮಾಡಿಕೊಂಡು ಆಸ್ತಿಯನ್ನು ಲಪಟಾಯಿಸಲು ಒಳಸಂಚು ರೂಪಿಸಿ ವಂಚನೆ ನಡೆಸಿರುವ ಆರೋಪದಡಿ ಸಕ್ಕರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಐವರ...

Related Articles

ಸೋಮಯ್ಯಾ ಗಣಾಚಾರಿಗೆ ಎಂಎಲ್‌ಸಿ ಸ್ಥಾನ ನೀಡುವಂತೆ ಒತ್ತಾಯ

ಚಿಕ್ಕಮಗಳೂರು: ವಿಜಯಪುರ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ವೀರಶೈವ-ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಸೋಮಯ್ಯಾ...

ಹಾಲಿನ ಖರೀದಿ ದರ ಹೆಚ್ಚಳ – ಶೀಘ್ರವೇ ಸಭೆ ನಡೆಸಿ ತೀರ್ಮಾನ

ಚಿಕ್ಕಮಗಳೂರು: ಹಾಲಿನ ಖರೀದಿ ದರ ಹೆಚ್ಚಳ ಮಾಡಬೇಕು ಎಂದು ರೈತರಿಂದ ಬೇಡಿಕೆ ಹೆಚ್ಚಾಗಿದ್ದು, ಈ ಸಂಬಂಧ...

ಮಲೆನಾಡು-ಕರಾವಳಿಗೆ ವಿಶೇಷ ಪ್ಯಾಕೇಜ್

ಬಾಳೆಹೊನ್ನೂರು: ಮಲೆನಾಡು ಮತ್ತು ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ರೂಪಿಸಲಾಗಿದ್ದು, ಈ ಭಾಗದಿಂದ...

ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಆತಂಕಪಡುವ ಅಗತ್ಯವಿಲ್ಲ

ಬಾಳೆಹೊನ್ನೂರು: ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಮಲೆನಾಡಿನ ಜನರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ಮಲೆನಾಡಿನ ರೈತರಿಗೆ...