ಚಿಕ್ಕಮಗಳೂರು- ಬೆಂಗಳೂರು ನಗರ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಸಚಿವ ಕೃ?ಬೈರೇಗೌಡರು ಪೌರಕಾರ್ಮಿಕರ ಬಗ್ಗೆ ತುಚ್ಚವಾಗಿ ಮಾತನಾಡಿರುವುದನ್ನು ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಕೆ.ಬಿ ಸುಧಾ ಖಂಡಿಸಿದ್ದಾರೆ.
ತಲತಲಾಂತರಗಳಿಂದ ಒಂದು ಜಾತಿಗೆ ಸೀಮಿತ ಗೊಂಡಿರುವ ಪೌರಕಾರ್ಮಿಕರ ವೃತ್ತಿಯನ್ನು ಸೇವಾ ಮನೋಭಾವದಿಂದ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಸುಮಾರು ಶೇ.೩೦ ರ? ಕಾರ್ಮಿಕರು ಸೇವೆಯನ್ನು ನಿರ್ವಹಿಸುತ್ತಿಲ್ಲ ಎಂದು ಹೇಳುತ್ತಾ ಪುಕ್ಕಟೆಯಾಗಿ ಪಗಾರ ಪಡೆಯುತ್ತಿದ್ದಾರೆ ಎಂದು ವೃತ್ತಿಗೆ ಅವಮಾನಿಸಿದ್ದಾರೆ.
ಈ ರೀತಿ ಮಾತನಾಡುವ ನೀವು ನಿಮ್ಮ ವರ್ಗದವರು ಎ? ಪೌರಕಾರ್ಮಿಕ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಪೌರಕಾರ್ಮಿಕರನ್ನು ಹೊರತುಪಡಿಸಿ ಬಹುತೇಕ ಇಲಾಖೆಗಳು ಲಂಚಾವತಾರ ಇರುವುದು ನೀವು ಮೊದಲಿನಿಂದ ಕಂಡುಕೊಂಡಿದ್ದೀರಿ ಎಂದು ಭಾವಿಸಿದ್ದೇನೆ.
ಕೇವಲ ಸೇವೆಗೆ ಮಾತ್ರ ಸೀಮಿತ ಗೊಂಡಿರುವವರು ಪೌರಕಾರ್ಮಿಕರು ಎಂಬುದನ್ನು ಅರಿಯಬೇಕು. ಪ್ರತಿ ಮನೆಯಿಂದ ಅಸಹ್ಯಕರವಾದ ಕಸ ಹೊರಬೀಳುತ್ತಿದ್ದು, ಇದನ್ನು ಎರಡು ಕೈಗಳಿಂದ ಎತ್ತಿ ಇಡೀ ಊರನ್ನು ಶುಚಿ ಮಾಡುತ್ತಿದ್ದಾರೆ ಇವರನ್ನು ಗೌರವಿಸದೆ ಮಾತನಾಡುವ ಬರದಲ್ಲಿ ತುಚ್ಚವಾಗಿ ನಿಂದಿಸಿರುವುದು ಇನ್ನು ಮುಂದೆ ಮಾಡಬೇಡಿ ಎಂದು ಒತ್ತಾಯಿಸಿದರು.
ಇದರ ಬದಲಾಗಿ ಬಹು ಸಂಖ್ಯೆಗನುಗುಣವಾಗಿ ಕಸ ವಿಲೇವಾರಿ ಮಾಡುವ ಅನುಪಾತದಲ್ಲಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಿ, ಈಗಾಗಲೇ ದಿನಗೂಲಿಯಲ್ಲಿ ಕೆಲಸ ಮಾಡುತ್ತಿರುವ ನೂರಾರು ಪೌರಕಾರ್ಮಿಕರ ಹುದ್ದೆಯನ್ನು ಖಾಯಂಗೊಳಿಸಿ ಎಂದು ಒತ್ತಾಯ ಮಾಡಿದ್ದಾರೆ.
The stance taken by Minister Krishna Byre Gowda regarding civic workers is condemnable.
Leave a comment