ಚಿಕ್ಕಮಗಳೂರು: ಮಲೆನಾಡಿನ ಪಶ್ಚಿಮ ಘಟ್ಟ ಪ್ರವಾಸೋದ್ಯಮದ ಹಲವಾರು ಸಮಸ್ಯೆಗಳ ನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ವಿರುದ್ಧ ಸೋಮವಾರ ಜಿಲ್ಲಾ ಕರವೇ (ಶಿವರಾಮೇ ಗೌಡ ಬಣ) ಮುಖಂಡರುಗಳು ಅರೆಬೆತ್ತಲಾಗಿ, ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು, ಜಿಲ್ಲಾಡಳಿತ ಕಾಣಿಕೆ ಹು ಂಡಿ ತಯಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್ ಮುಳ್ಳಯ್ಯನಗಿರಿ, ಸೀತಾಳಯ್ಯಗಿರಿ, ಗಾಳಿಕೆರೆ ಹಾಗೂ ದತ್ತಪೀಠ ಪ್ರವಾಸಿ ತಾಣಗಳಿಗೆ ದೇಶ-ವಿದೇಶಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿ ಗರು ಬೇಟಿ ನೀಡುತ್ತಿದ್ದು, ಆದರೆ ಜಿಲ್ಲಾಡಳಿತ ಮೂಲಸೌಕರ್ಯ ಒದಗಿಸುತ್ತಿಲ್ಲ ಎಂದು ಆರೋಪಿಸಿದರು.
ಗಿರಿರಸ್ತೆ ಭಾಗದಲ್ಲಿ ತಡೆಗೋಡೆ ನಿರ್ಮಿಸಿಲ್ಲ, ಸುಲಭ ಶೌಚಾಲಯವಿಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಅಲ್ಲದೇ ಫಾಲ್ಸ್ಗಳಲ್ಲಿ ಹೆಣ್ಣು ಮಕ್ಕಳು ವಸ್ತ್ರ ಬದಲಿಸಲು ಸೂಕ್ತ ಕೊಠಡಿಗಳ ವ್ಯವಸ್ಥೆಯು ಇಲ್ಲ ದಂತಾಗಿದೆ. ಈ ಬಗ್ಗೆ ಕಳೆದ ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಲಾಗಿತ್ತು. ಆದರೆ ನಿರ್ಲಕ್ಷಿಸಿದ ಕಾರಣ ಇಂ ದು ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಗಿರಿಭಾಗದಲ್ಲಿ ಪ್ರವಾಸಿಗರು ಸೇರಿದಂತೆ ಸ್ಥಳೀಯರಿಗೆ ಹಲವು ಸಮಸ್ಯೆ ಉಂಟಾಗುತ್ತಿದೆ. ಈ ಸಂಬಂಧ ಅನೇಕ ಬಾರಿ ಸಂಘಟನೆ ಮತ್ತು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ ಯಾವು ದೇ ಪ್ರಯೋಜನವಾಗಿಲ್ಲ. ಪರಿಹಾರವು ಸಿಕ್ಕಿರುವುದಿಲ್ಲ ಎಂದು ದೂರಿದರು.
ಪ್ರವಾಸಿ ತಾಣಕ್ಕೆ ತೆರಳಲು ಮೊದಲೇ ಬುಕ್ಕಿಂಗ್ ಮಾಡಿ ಇಂತಿಷ್ಟು ಹಣ ನಿಗಧಿಪಡಿಸಿದೆ. ಆದರೆ ಅಲ್ಲಿ ನ ಚೆಕ್ಪೋಸ್ಟ್ ಸಿಬ್ಬಂದಿಗಳು ನಿಗಧಿತ ಮೊತ್ತಕ್ಕಿಂತ ಹೆಚ್ಚು ವಸೂಲಿ ಮಾಡಿ ವಾಹನಗಳನ್ನು ಬಿಡಲಾಗು ತ್ತಿದೆ. ಅಲ್ಲದೇ ಪ್ರವಾಸಿಗರನ್ನು ಪಿಕಪ್ ಮತ್ತು ಇತರೆ ವಾಹನಗಳು ಗಿರಿಭಾಗಕ್ಕೆ ಯಾವುದೇ ಸುರಕ್ಷತೆಯಿಲ್ಲದೇ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು.
ಕಿರಿದಾದ ರಸ್ತೆಗಳಲ್ಲಿ ಪ್ರವಾಸಿಗರನ್ನು ಕರೆತರುವ ವಾಹನಗಳಿಂದ ವಿಪರೀತ ವಾಹನ ದಟ್ಟಣೆ ಉಂಟಾ ಗುತ್ತಿದೆ. ಈ ಪ್ರದೇಶದಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳಿವೆ. ಇವುಗಳಿಗೆ ಸ್ಥಳೀಯರು ಕೂಡಾ ಹಲವಾರು ವ ರ್ಷಗಳಿಂದ ಭಾಗವಹಿಸುತ್ತಿದ್ದು ಸ್ಥಳೀಯರಿಗೂ ಚೆಕ್ಪೋಸ್ಟ್ಗಳಲ್ಲಿ ಶುಲ್ಕ ವಿಧಿಸದೇ ಪ್ರವೇಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕೂಡಲೇ ಜಿಲ್ಲಾಡಳಿತ ಪ್ರಮುಖ ಬೇಡಿಕೆ ಈಡೇರಿಸುವಲ್ಲಿ ವಿಫಲರಾದರೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಟೋಲ್ ಸೇರಿದಂತೆ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭ ದಲ್ಲಿ ಕರವೇ ಜಿಲ್ಲಾ ಖಜಾಂಚಿ ನವೀನ್, ಕರವೇ ತಾ.ಅಧ್ಯಕ್ಷ ತೇಜಸ್ನಾಯ್ಕ್, ಮುಖಂಡರಾದ ಭಾರ್ಗವ್, ಅಭಿ, ವಿವೇಕ್ಶೆಟ್ಟಿ, ಲಿಖಿನ್, ವರುಣ್, ಜೋಶ್ವಾ, ಮಣಿ, ಶಕ್ತಿ, ನಿತಿನ್ ಮುಂತಾದವರು ಉಪಸ್ಥಿತರಿದ್ದರು.
Karave Dharani demanding infrastructure for tourism destinations
Leave a comment