Home namma chikmagalur chikamagalur ಹುಬ್ಬಳ್ಳಿ-ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ ಪ್ರೆಸ್ ರೈಲು
chikamagalurHomeLatest Newsnamma chikmagalur

ಹುಬ್ಬಳ್ಳಿ-ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ ಪ್ರೆಸ್ ರೈಲು

Share
Share

ಚಿಕ್ಕಮಗಳೂರು : ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಸುಲಭವಾಗಿ ನಿರ್ವಹಿಸಲು ರೈಲ್ವೆ ಇಲಾಖೆಯೂ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ ಪ್ರೆಸ್ ರೈಲುಗಳ ಸಂಚಾರಕ್ಕೆ ಹಸಿರು ನಿಶಾನ ತೋರಿದ.

ಸೆಪ್ಟೆಂಬರ್ 5ರಿಂದ ಅಕ್ಟೋಬರ್ 31ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರದಂದು ರೈಲು ಸಂಖ್ಯೆ 07341/07342 ಎಕ್ಸ್‌ಪ್ರೆಸ್ ರೈಲುಗಳು ಎರಡೂ ನಗರಗಳ ನಡುವೆ ಕಾರ್ಯಾಚರಣೆ ನಡೆಸಲಿವೆ.

ಹುಬ್ಬಳ್ಳಿಯಿಂದ ಬೆಳಗ್ಗೆ 05:00 ಗಂಟೆಗೆ ಹೊರಡುವ ರೈಲು ಸಂಖ್ಯೆ 07341, ಕುಂದಗೋಳ, ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಅಜ್ಜಂಪುರ, ಬೀರೂರು ಹಾಗೂ ಕಡೂರು ಸೇರಿದಂತೆ ಪ್ರಮುಖ ನಿಲ್ದಾಣಗಳ ಮೂಲಕ ಸಾಗಿ ಬೆಳಗ್ಗೆ 11:15ಕ್ಕೆ ಚಿಕ್ಕಮಗಳೂರು ತಲುಪಲಿದೆ.

ಮರಳಿ ಪ್ರಯಾಣಿಸುವ ರೈಲು ಸಂಖ್ಯೆ 07342 ಚಿಕ್ಕಮಗಳೂರಿನಿಂದ ಸಂಜೆ 17:30ಕ್ಕೆ ಹೊರಟು, ಅದೇ ಮಾರ್ಗದ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ರಾತ್ರಿ 23:20ಕ್ಕೆ ಹುಬ್ಬಳ್ಳಿ ತಲುಪಲಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ರೈಲಿನಲ್ಲಿ ಒಂದು ಸ್ವೀಪರ್ ಕ್ಲಾಸ್, ಏಳು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ ಎರಡು ಲಗೇಜ್-ಕಮ್-ದಿವ್ಯಾಂಗ ಬೋಗಿಗಳನ್ನು ಅಳವಡಿಸಲಾಗಿದ್ದು, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಈ ಸೇವೆ ಹೆಚ್ಚು ಅನುಕೂಲವಾಗಲಿದೆ.

Special express train between Hubballi-Chikkamagaluru

Share

Leave a comment

Leave a Reply

Your email address will not be published. Required fields are marked *

Don't Miss

ರೈಲ್ವೆ ಕಾಮಗಾರಿಗೆ ಜಮೀನು ಬಳಕೆ: ಪರಿಹಾರ ನೀಡುವಂತೆ ರೈತ ಸಂಘ ಒತ್ತಾಯ

ಚಿಕ್ಕಮಗಳೂರು: ರೈಲ್ವೆ ಕಾಮಗಾರಿಗಾಗಿ ರೈತರ ಜಮೀನು ಹಾಗೂ ವಾಸದ ಮನೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ನೀಡುವವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ...

ಬಿಎಫ್‌ಐಎಲ್‌ ಸಂಸ್ಥೆಯಲ್ಲಿ ₹5.50 ಲಕ್ಷ ದುರುಪಯೋಗ: ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ

ನರಸಿಂಹರಾಜಪುರ: ಭಾರತ್ ಫೈನಾನ್ಸಿಯಲ್ ಇನ್‌ಕ್ಲೂಶನ್ ಲಿಮಿಟೆಡ್‌ (ಬಿಎಫ್‌ಐಎಲ್‌) ಸಂಸ್ಥೆಯ ಸೇಫ್‌ ಲಾಕರ್‌ನಲ್ಲಿದ್ದ ಚೆಕ್‌ಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ಬಾರದಂತೆ ತೆಗೆದುಕೊಂಡು ₹5.50 ಲಕ್ಷ ಹಣವನ್ನು ಬಿಡಿಸಿಕೊಂಡು ದುರುಪಯೋಗಪಡಿಸಿಕೊಂಡ ಆರೋಪದಡಿ ಇಬ್ಬರು ಸಿಬ್ಬಂದಿ ವಿರುದ್ಧ...

Related Articles

ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯಿಂದ ಪ್ರತಿಭಟನೆ

ಚಿಕ್ಕಮಗಳೂರು: ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕಡೂರು ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳನ್ನು...

ಆನ್‌ಲೈನ್ ಟ್ರೇಡಿಂಗ್ ಹೂಡಿಕೆ ಹೆಸರಿನಲ್ಲಿ ವಿದ್ಯಾರ್ಥಿನಿಗೆ ₹4.77 ಲಕ್ಷ ವಂಚನೆ

ಚಿಕ್ಕಮಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಭಾರಿ ಲಾಭ ನೀಡುವುದಾಗಿ ನಂಬಿಸಿ...

ಯುವತಿ ಮೇಲೆ ಅತ್ಯಾಚಾರ-ಕೊಲೆ ಬೆದರಿಕೆ ಆರೋಪ

ಚಿಕ್ಕಮಗಳೂರು: ಯುವತಿಗೆ ಅತ್ಯಾಚಾರ ಎಸಗಿದ ಆರೋಪ ಹಾಗೂ ಬಳಿಕ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಪಂಚನಹಳ್ಳಿ...

ಮನೆಯ ಹಿಂಭಾಗದಲ್ಲಿ ಬೆಳೆದಿದ್ದ 12.250 ಕೆ.ಜಿ. ಹಸಿ ಗಾಂಜಾ ವಶ

ತರೀಕೆರೆ: ತಾಲ್ಲೂಕಿನ ಬೆಟ್ಟತಾವರೆಕೆರೆ ಗ್ರಾಮದ ನಿವಾಸಿ ದಿನೇಶ್ ಎಂಬುವವರು ತಮ್ಮ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ಸುಮಾರು...