ಕೊಪ್ಪ : ಹಬ್ಬ-ಹರಿದಿನಗಳಲ್ಲೂ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸ್ ಸಿಬ್ಬಂದಿಯ ಮೊಗದಲ್ಲಿ ಹಬ್ಬದ ಸಂಭ್ರಮ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮವೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಗೌರಿ ಹಬ್ಬದ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಪಿಎಸ್‌ಐ ರವೀಶ್ ಅವರು ಠಾಣೆಯ ಮಹಿಳಾ ಸಿಬ್ಬಂದಿಗೆ ಸಾಂಪ್ರದಾಯಿಕವಾಗಿ ಬಾಗಿಣ ನೀಡಿ ಗೌರವಿಸಿ, ಹಬ್ಬದ ಶುಭಾಶಯ ಕೋರಿದರು.
ಕುಟುಂಬದಿಂದ ದೂರವಿದ್ದು ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೂ ಹಬ್ಬದ ಸಂಭ್ರಮ ಸಿಗಬೇಕು ಎಂಬ ಉದ್ದೇಶದಿಂದ ಪಿಎಸ್‌ಐ ರವೀಶ್ ಅವರು ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.
ಸಹೋದ್ಯೋಗಿಗಳೊಂದಿಗೆ ಕುಟುಂಬದ ರೀತಿಯ ಆತ್ಮೀಯತೆ ಬೆಳೆಸುವ ಜೊತೆಗೆ, ಕರ್ತವ್ಯದ ಒತ್ತಡದ ನಡುವೆಯೂ ಸಿಬ್ಬಂದಿಯಲ್ಲಿ ಸಂತಸ ಮೂಡಿಸುವ ಪ್ರಯತ್ನ ಇದಾಗಿದೆ.
ಪಿಎಸ್‌ಐ ಅವರ ಈ ಕಾಳಜಿ ಹಾಗೂ ಮಾನವೀಯ ನಡೆಗೆ ಪೊಲೀಸ್ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಖಾಕಿ ಸಮವಸ್ತ್ರದ ಕರ್ತವ್ಯದ ನಡುವೆಯೂ ಸಹೋದ್ಯೋಗಿಗಳ ಭಾವನೆಗಳಿಗೆ ಸ್ಪಂದಿಸಿದ ಈ ನಡೆ ಪೊಲೀಸ್ ಇಲಾಖೆಯಲ್ಲಿನ ಮಾನವೀಯ ಮುಖವನ್ನು ಎತ್ತಿ ತೋರಿಸಿದೆ.
‘Bagina’ presented to the female staff of Jayapura police station.
Leave a comment