Home ಮುಂದಿನ ದಿನಗಳಲ್ಲಿ ದೇವಾಲಯದ ಜಿರ್ಣೋದ್ದಾರಕ್ಕೆ ಅನುದಾನ
HomeKadurLatest Newsnamma chikmagalur

ಮುಂದಿನ ದಿನಗಳಲ್ಲಿ ದೇವಾಲಯದ ಜಿರ್ಣೋದ್ದಾರಕ್ಕೆ ಅನುದಾನ

Share
Share

ಬೀರೂರು:ಕಾಂಗ್ರೆಸ್ ಸರಕಾರದಲ್ಲಿ ನನ್ನಂತ ಹಿಂದುಳಿದ ವರ್ಗದ ಶಾಸಕನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ರವರುಗಳಿಗೆ ಹಿಂದುಳಿದ ಸಮಾಜದ ನಿಮ್ಮೆಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಜರಾಯಿ ಮತ್ತು ಬಂದರು ಸಚಿವ ಬಸವಂತಪ್ಪ ಹೇಳಿದರು.

ಮಾಯಕೊಂಡದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಬೀರೂರಿನ ಮಾರ್ಗಮಧ್ಯೆ ಕಾಂಗ್ರೆಸ್ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಪತ್ರಿಕೆಯೊಂದಿಗೆ ಅವರು ಮಾತನಾಡಿ ರಾಜ್ಯ ಸರ್ಕಾರ ನನಗೆ ಮುಜರಾಯಿ ಮತ್ತು ಬಂದರು ಖಾತೆ ನೀಡಿದ್ದು, ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಮುಜರಾಯಿ ಇಲಾಖೆಗೆ ಒಳಪಟ್ಟ ದೇ ಗುಲಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ.

ಎಲ್ಲಿ ನಮ್ಮ ಹಿಂದುಳಿದ ದೇಗುಲಗಳು ಜಿರ್ಣೋದ್ದಾರದಲ್ಲಿ ಹಿಂದಿವೆ ಎಂದು ತಿಳಿದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಹ ದೇಗುಲಗ ಳ ಅಭಿವೃದ್ದಿಗಾಗಿ ಒತ್ತು ನೀಡುತ್ತೇನೆ. ನಿಮ್ಮ ಕಡೂರು ಕ್ಷೇತ್ರದ ದೇಗುಲ ಗಳಿಗೆ ಮುಂದಿನ ದಿನಗಳಲ್ಲಿ ಭೇಟಿ ನೀಡಿ ಅಂತಹ ದೇಗುಲ ಗಳ ಜಿರ್ಣೋದ್ದಾರಕ್ಕಾಗಿ ಸರ್ಕಾರದಿಂದ ಅನುದಾನ ಒದಗಿಲಾಗುವುದು ಎಂದು ಭರವಸೆ ನೀಡಿದರು.

ಪುರಸಭಾ ಆಶ್ರಯ ಸಮಿತಿ ಸದಸ್ಯರಾದ ಎನ್.ಮುಬಾರಕ್, ಬಿ.ಟಿ.ಚಂದ್ರಶೇಖರ್, ಬಿ.ಜಿ.ಮೈಲಾರಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡ ಆರೀಫ್, ಮಾಜಿ ಪುರಸಭಾ ಸದಸ್ಯರಾದ ಮಾನಿಕ್ ಭಾಷ, ಕಡೂರು ತಾಲ್ಲೂಕು ಮಾದಾರ ಮಹಾಸಭಾದ ಅಧ್ಯಕ್ಷ ಮಲ್ಲಿಕಾರ್ಜುನ್, ಗಂಟೆ ಕುಮಾರ್ ಸೇರಿದಂತೆ ಮತ್ತಿತರರಿದ್ದರು.

Funds for temple renovation in the near future

Share

Leave a comment

Leave a Reply

Your email address will not be published. Required fields are marked *

Don't Miss

ಪ್ರವಾಸೋದ್ಯಮ ತಾಣಗಳಿಗೆ ಮೂಲಸೌಕರ್ಯಕ್ಕೆ ಆಗ್ರಹಿಸಿ ಕರವೇ ಧರಣಿ

ಚಿಕ್ಕಮಗಳೂರು:  ಮಲೆನಾಡಿನ ಪಶ್ಚಿಮ ಘಟ್ಟ ಪ್ರವಾಸೋದ್ಯಮದ ಹಲವಾರು ಸಮಸ್ಯೆಗಳ ನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ವಿರುದ್ಧ ಸೋಮವಾರ ಜಿಲ್ಲಾ ಕರವೇ (ಶಿವರಾಮೇ ಗೌಡ ಬಣ) ಮುಖಂಡರುಗಳು ಅರೆಬೆತ್ತಲಾಗಿ, ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು,...

ಮಲ್ಲೇಗೌಡ ಆಸ್ಪತ್ರೆ ಆರೋಗ್ಯ ಸೇವೆ ಬಲಪಡಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಸೋಮವಾರ ಭೇಟಿ ನೀಡಿ ಆಸ್ಪತ್ರೆಯ ವಿವಿಧ ವಿಭಾಗಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕರಿಗೆ ಸಿಗುತ್ತಿರುವ ಆರೋಗ್ಯ ಸೇವೆಗಳನ್ನು...

Related Articles

ಜಯಪುರ ಠಾಣೆಯ ಮಹಿಳಾ ಸಿಬ್ಬಂದಿಗೆ ಬಾಗಿನ

ಕೊಪ್ಪ : ಹಬ್ಬ-ಹರಿದಿನಗಳಲ್ಲೂ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸ್ ಸಿಬ್ಬಂದಿಯ ಮೊಗದಲ್ಲಿ ಹಬ್ಬದ ಸಂಭ್ರಮ ಮೂಡಿಸುವ ಅರ್ಥಪೂರ್ಣ...

ಟ್ರಾಕ್ಟರ್ ಹರಿಸಿ ₹1.15 ಲಕ್ಷ ಮೌಲ್ಯದ ರಾಗಿ ಬೆಳೆ ನಾಶ

ತರೀಕೆರೆ : ನ್ಯಾಯಾಲಯದ ಸ್ಪಷ್ಟ ತಡೆಯಾಜ್ಞೆ ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೆ, ಜಮೀನಿಗೆ ಅಕ್ರಮವಾಗಿ ನುಗ್ಗಿ ಕಟಾವಿಗೆ...

ಸಚಿವ ಕೃಷ್ಣಬೈರೇಗೌಡ ಹೇಳಿಕೆ ಖಂಡನೀಯ

ಚಿಕ್ಕಮಗಳೂರು- ಬೆಂಗಳೂರು ನಗರ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಸಚಿವ ಕೃ?ಬೈರೇಗೌಡರು ಪೌರಕಾರ್ಮಿಕರ ಬಗ್ಗೆ ತುಚ್ಚವಾಗಿ ಮಾತನಾಡಿರುವುದನ್ನು...

ಗಂಗೆ ಪೂಜೆ ನೆರವೇರಿಸಿ ಸ್ವರ್ಣಗೌರಿ ಮನೆ ತುಂಬಿಸಿಕೊಂಡ ಮಹಿಳೆಯರು

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗ್ರಾಮದ ದೊಡ್ಡಬಾವಿ ಹಳ್ಳದಲ್ಲಿ ಸೋಮವಾರ ಮಹಿಳೆಯರು ಸಂಪ್ರದಾಯಬದ್ಧವಾಗಿ...