Home namma chikmagalur chikamagalur ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಬಂದ್‌ ಯಶಸ್ವಿ
chikamagalurHomeLatest Newsnamma chikmagalur

ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಬಂದ್‌ ಯಶಸ್ವಿ

Share
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;
Share

ಶೃಂಗೇರಿ: ಕಸ್ತೂರಿರಂಗನ್ ವರದಿ ವಿರೋಧಿ ಸಮಿತಿ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ಶೃಂಗೇರಿ ಪಟ್ಟಣ ಬಂದ್ ಯಶಸ್ವಿಯಾಯಿತು.

ಬಂದ್ ಅಂಗವಾಗಿ ನಡೆದ ಪಟ್ಟಣದ ಸ್ವಾಗತ ಮಂಟಪದಿಂದ ಕುವೆಂಪು ಬಸ್ ನಿಲ್ದಾಣದವರೆಗೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ವಿವಿಧ ಪಕ್ಷಗಳ ಮುಖಂಡರು, ಸಂಘಟನೆಗಳ ಪ್ರತಿನಿಧಿಗಳು, ರೈತರು, ಕಾರ್ಮಿಕರು ಪಾಲ್ಗೊಂಡರು.

ಚಿಕ್ಕಮಗಳೂರಿನಿಂದ ಶೃಂಗೇರಿಗೆ ಬರುವ ಜಯಪುರ ರಸ್ತೆ, ಶಿವಮೊಗ್ಗ-ಶೃಂಗೇರಿ ಸಂರ್ಪಕಿಸುವ ರಸ್ತೆಯ ಅಡ್ಡಗದ್ದೆ ಬಳಿ, ಮಂಗಳೂರಿನಿಂದ ಶೃಂಗೇರಿಗೆ ಬರುವ ನೆಮ್ಮಾರ್‌ನಲ್ಲಿ, ಉಡುಪಿಯಿಂದ ಶೃಂಗೇರಿಗೆ ಬರುವ ಬೇಗಾರ್ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು.

ಪ್ರತಿಭಟನೆ ಉದ್ದಕ್ಕೂ ಗೋವಾ ಫೌಂಡೇಶನ್, ಕಸ್ತೂರಿರಂಗನ್ ವರದಿ ವಿರುದ್ಧ ಘೋಷಣೆ ಕೂಗಿದರು. ಬಂದ್ ಹಿನ್ನೆಲೆ ಪಟ್ಟಣದ ಎಲ್ಲಾ ಅಂಗಡಿ ವರ್ತಕರು ಸ್ವಯಂ ಪ್ರೇರಿತರಾಗಿ ಮುಚ್ಚಿ ದ್ದರು. ಬ್ಯಾಂಕ್ ಸಿಬ್ಬಂದಿ ಕೂಡ ಬಾಗಿಲು ಹಾಕಿಕೊಂಡು ಕೆಲಸ ಮಾಡಿದರು. ಪೆಟ್ರೋಲ್ ಬಂಕ್, ಮೆಡಿಕಲ್, ಕ್ಲಿನಿಕ್, ಆಸ್ಪತ್ರೆಗಳು ತೆರೆದಿದ್ದವು. ಬಸ್, ಟ್ಯಾಕ್ಸಿ ಮತ್ತು ಆಟೊರಿಕ್ಷಾಗಳ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಸ್ಥಳಕ್ಕೆ ಬಾರದ ಅರಣ್ಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಎಸಿಎಫ್ ಮೋಹನ್ ಕುಮಾರ್ ಮತ್ತು ತಹಶೀಲ್ದಾರ್ ಅನೂಪ್ ಸಂಜೋಗ್ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಆದಿಚುಂಚನಗಿರಿ ಮಠದ ಗುಣನಾಥ ಸ್ವಾಮೀಜಿ, ‘ಈ ವರದಿ ರೈತರಿಗೆ ಮಾತ್ರ ಮರಣ ಶಾಸನ ಬರೆಯದೆ, ಎಲ್ಲಾ ವರ್ಗದವರಿಗೂ ಮತ್ತು ಪರಿಸರಕ್ಕೂ ಅಪಾಯವಿದೆ. ನಮ್ಮ ಪೂರ್ವಿಕರು ಬದುಕಿ ಬಾಳಿದ ಈ ಊರಿನಲ್ಲಿ ಯಾವುದೇ ವರದಿ ಜಾರಿಯಾಗದಂತೆ ರಾಷ್ಟ್ರೀಯ ಮಟ್ಟದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆದಾಗ ವಿಶ್ವ ಸಂಸ್ಥೆಯವರೆಗೆ ಮುಟ್ಟುತ್ತದೆ.

ಕೆಲ ಜನರು ಸೇರಿ ತಯಾರಿಸಿದ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನ ಜೀವ ಸಂಕುಲ ಬದುಕುವುದು ಕಷ್ಟವಾಗುತ್ತದೆ. ಹೋರಾಟಗಾರರಿಗೆ ಆತ್ಮಬಲ ತುಂಬುವ ದೃಷ್ಟಿಯಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ. ಮಲೆನಾಡಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸದೆ ಇರುವುದು ಇಂದಿನ ಹೋರಾಟಕ್ಕೆ ಕಾರಣ’ ಎಂದರು.

ಹೋರಾಟಗಾರ ದಿಗಂತ್ ಬಿಂಬೈಲ್, ಪತ್ರಕರ್ತ ರಾಮಸ್ವಾಮಿ ಹುಲುಕೋಡು ಮಾತನಾಡಿದರು. ಸ್ಥಳದಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅಭಿಷೇಕ್ ಬಂದೊಬಸ್ತ್ ಕಲ್ಪಿಸಿದ್ದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಿ.ಎನ್.ಜೀವರಾಜ್, ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ, ಸಮಿತಿಯ ಕಾನುವಳ್ಳಿ ಚಂದ್ರಶೇಖರ್, ಕೊಡತಲು ಕೆ.ಎಂ.ರಮೇಶ್ ಭಟ್, ಅಂಬ್ಲೂರು ರಾಮಕೃಷ್ಣ, ಸುಬ್ರಹ್ಮಣ್ಯ ಎಸ್.ಹಂಡಿಗೆ, ಗುಂಡಪ್ಪ ಕೆಲವಳ್ಳಿ, ಅನಿಲ್ ಹೊಸಕೊಪ್ಪ, ಗೇರ್‌ಬೈಲ್ ಡಿ.ಸಿ ಶಂಕರಪ್ಪ, ಚೆನ್ನಕೇಶವ, ಶ್ರೀಧರ್ ರಾವ್ ಬಂಡ್ಲಾಪುರ, ಕಟ್ಟೋಡಿ ಕೆ.ಎಸ್.ರಮೇಶ್, ಭರತ್ ಗಿಣಿಕಲ್, ಉಮೇಶ್ ತಲಗಾರು, ಗೋಪಾಲ್ ಆನೆಗುಂದ, ರಂಜಿತ್ ಜಿ.ಎಸ್, ಸಂತೋಷ್ ಕಾಳ್ಯ, ಪೂರ್ಣೇಶ್, ಹೆಚ್ಚೆ ನರೇಂದ್ರ ಹೆಗ್ಡೆ, ಪ್ರಸನ್ನ ಬೇಗಾನೆ, ತ್ರಿಮೂರ್ತಿ, ಅಂಗುರ್ಡಿ ದಿನೇಶ್, ಅಭಿಲಾಷ್ ಹೆಗ್ಡೆ, ನಾಗರಾಜ್ ಬೆಳಂದೂರು ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರು, ರೈತರು ಭಾಗವಹಿಸಿದ್ದರು.

Sringeri bandh opposing the Kasturirangan report successful.

Share

Leave a comment

Leave a Reply

Your email address will not be published. Required fields are marked *

Don't Miss

ಜಯಪುರ ಠಾಣೆಯ ಮಹಿಳಾ ಸಿಬ್ಬಂದಿಗೆ ಬಾಗಿನ

ಕೊಪ್ಪ : ಹಬ್ಬ-ಹರಿದಿನಗಳಲ್ಲೂ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸ್ ಸಿಬ್ಬಂದಿಯ ಮೊಗದಲ್ಲಿ ಹಬ್ಬದ ಸಂಭ್ರಮ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮವೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಗೌರಿ ಹಬ್ಬದ...

ಟ್ರಾಕ್ಟರ್ ಹರಿಸಿ ₹1.15 ಲಕ್ಷ ಮೌಲ್ಯದ ರಾಗಿ ಬೆಳೆ ನಾಶ

ತರೀಕೆರೆ : ನ್ಯಾಯಾಲಯದ ಸ್ಪಷ್ಟ ತಡೆಯಾಜ್ಞೆ ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೆ, ಜಮೀನಿಗೆ ಅಕ್ರಮವಾಗಿ ನುಗ್ಗಿ ಕಟಾವಿಗೆ ಬಂದಿದ್ದ ರಾಗಿ ಬೆಳೆಯ ಮೇಲೆ ಟ್ರಾಕ್ಟರ್ ಹರಿಸಿ ನಾಶಪಡಿಸಿರುವ ಆಘಾತಕಾರಿ ಘಟನೆಯೊಂದು ತರೀಕೆರೆ ತಾಲೂಕಿನ...

Related Articles

ಮೂಡಿಗೆರೆಯಲ್ಲಿ ಮುಸುಕುಧಾರಿ ಖದೀಮರಿಂದ ಸರಗಳ್ಳತನ

ಮೂಡಿಗೆರೆ: ಮುಂಜಾನೆಯ ತಂಪಾದ ವಾತಾವರಣದಲ್ಲಿ ರಸ್ತೆ ಬದಿಯಲ್ಲಿ ನಿರಾತಂಕವಾಗಿ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರನ್ನು...

ಅರಸನ ನಾಲೆ ಪುನಶ್ಚೇತನ‌ಕ್ಕೆ ಆಗ್ರಹಿಸಿ ಇಂದು ರೈತರ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವುದು ಹಾಗೂ...

ಸವದಳ ಸೂತ್ರದಡಿ ಎಲ್ಲರನ್ನು ಒಂದುಗೂಡಿಸಿ

ಚಿಕ್ಕಮಗಳೂರು: ಸವದಳ ಸೂತ್ರದಡಿ ಎಲ್ಲರನ್ನು ಒಂದುಗೂಡಿಸಿ : ಡಾ.ಮಾತೆ ಗಂಗಾದೇವಿನಾಡಿನ ವೀರಶೈವ-ಲಿಂಗಾಯಿತ ಜನಾಂಗವನ್ನು ಬಸವದಳ ಸೂತ್ರದಡಿ...

ಪ್ರತಾಪ ಸಿಂಹ ವಿರುದ್ಧ ಭೀಮ್ ಆರ್ಮಿ ಪ್ರತಿಭಟನೆ

ಚಿಕ್ಕಮಗಳೂರು: ದಲಿತ ಸಂಘಟನೆಗಳ ಬಗ್ಗೆ ಮಾಜಿ ಸಂಸದ ಪ್ರತಾಪ ಸಿಂಹ ಲಘುವಾಗಿ ಮಾತನಾಡಿದ್ದು, ಕೂಡಲೇ ಕ್ಷಮೆ...