Home ಕೆ.ಬಿ.ಎಂಗೆ ಆತ್ಮೀಯ ಅಭಿಮಾನಾರ್ಪಣೆ
HomeKadurLatest Newsnamma chikmagalur

ಕೆ.ಬಿ.ಎಂಗೆ ಆತ್ಮೀಯ ಅಭಿಮಾನಾರ್ಪಣೆ

Share
Share

ಬೀರೂರ: ಜನಾನುರಾಗಿ ಸೇವೆ ಸಲ್ಲಿಸಿ ಅಜಾತಶತ್ರು ಪಟ್ಟಣದ ಹಿರಿಯ ಮುತ್ಸದಿ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಅವರ ರಾಜಕೀಯ ಪಯಣದ ಏಳುಬೀಳುಗಳ ‘ಸ್ಥಿತಪ್ರಜ್ಞ’ ಗುಣ ಸ್ಮರಿಸಲು ಕೆಬಿಎಂ ಬಳಗದಿಂದ ಭಾನುವಾರ ಬೀರೂರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆದ ಆತ್ಮೀಯ ಮನಸ್ಸುಗಳ ಸಮ್ಮಿಲನದಲ್ಲಿ ರಾಜಕೀಯ ಬದಿಗೊತ್ತಿ ಒಂದಾದ ಮುಖಂಡರ ವೇದಿಕೆಗೆ ಸಾಕ್ಷಿಯಾಯಿತು.

ತರಳಬಾಳು ಕಲ್ಯಾಣ ಮಂದಿರದ ಹೊರಾಂಗ ಣದಲ್ಲಿ ಬೃಹತ್ ವೇದಿಕೆಯಲ್ಲಿ ಜಿಲ್ಲೆಯ ಅನೇಕ ರಾಜಕಾರಣಿಗಳು, ಕೆ.ಬಿ.ಎಂ. ಅಭಿಮಾನಿಗಳು ಅವರ 75ನೇವರ್ಷದ ಹುಟ್ಟು ಹಬ್ಬದ ಜೊತೆಗೆ ಅವರ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು.

ಕೆಬಿಎಂ ಅಭಿಮಾನಿಗಳ ಆತ್ಮೀಯ ಮನಸ್ಸುಗಳ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಿ ಅವರ ಆಶೀರ್ವಾದ ಪಡೆದು ಒಂದೊಳ್ಳೆ ಉತ್ತಮ ಪೋಟೋ ತೆಗಿಸಿಕೊಂಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ ವೇದಿಕೆ ಮೇಲೆ ಕೆಬಿಎಂ ಜೋಡಿ ಕೂರಿಸಲು ಮಹಾರಾಜ ಚೇರ್‌ಹಾಕಿದ್ದನ್ನು ಕಂಡ ಕೆಬಿಎಂ ಸ್ವತಃ, ನನಗೆ ಇಂತಹ ಆಡಂಬರದ ಅವಶ್ಯಕತೆ ಇಲ್ಲ, ಎಲ್ಲರ ಹಾಗೇ ನಾನು ಇಲ್ಲೇ ಕೆಳಗಡೆ ಕೂರುತ್ತೇನೆ.

ಇಲ್ಲಿಯೇ ಶುಭ ಕೋರಿ ದಯಮಾಡಿ ಬಲವಂತ ಮಾಡಬೇಡಿ, ಎಂದಾಗ ಚೇರ್‌ನಲ್ಲಿದ್ದ ದಂಪತಿಗಳ ಬಳಿ ಅಭಿಮಾನಿಗಳು, ಹಾರ, ತುರಾಯಿ, ಗಿಫ್ಟ್‌ಗಳ ಸಮೇತ ಆಗಮಿಸುವುದನ್ನು ಕಂಡು ಅದನ್ನು ತೆಗೆದುಕೊಳ್ಳಲುನಿರಾಕರಿಸಿ ನನಗೆಶುಭ ಹಾರೈಸಿದರಷ್ಟೆ ಸಾಕು. ನಿಮ್ಮಭಿಮಾನ ಹೀಗೆಯೇ ನನ್ನ ಮತ್ತು ಕುಟುಂಬದ ಮೇಲಿರಲಿ ಎಂದು ಬಂದವರನ್ನೆಲ್ಲ ಸಂತೈಸುತ್ತಾ, ಪೋಟೋ ತೆಗೆಸಿಕೊಳ್ಳಲು ಮುಂದಾದರು.

ರಾಜ್ಯ, ಜಿಲ್ಲೆ ಮತ್ತಿತರ ಕಡೆಯಿಂದ ಬಂದ ಸಹಪಾಠಿಗಳು, ಮಿತ್ರರು ವಿವಿಧ ಶಾಸಕರು, ಅಭಿ ಮಾನಿಗಳು ಶುಭಹಾರೈಸಲು ಮುಗಿಬಿದ್ದಾಗ ಬೀರೂರು ಪಟ್ಟಣದ ತರಳಬಾಳು ಕಲ್ಯಾಣ ಮಂದಿರದಲ್ಲಿ ಕೆಬಿಎಂ ಬಳಗ ಆಯೋಜಿಸಿದ್ದ ಆತ್ಮೀಯ ಮನಸ್ಸುಗಳ ಸಮ್ಮಿಲನದಲ್ಲಿ ಕೆ.ಬಿ.ಮಲ್ಲಿಕಾರ್ಜುನ್ ದಂಪತಿಯ 50ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಶಾಸಕ ಕೆ.ಎಸ್. ಆನಂದ್ ಮತ್ತು ಅಭಿಮಾನಿಗಳು ಶುಭಕೋರಿದರು.

ಒಂದೆಡೆ ಫೋಟೋಗ್ರಾರ್ಪಸ್್ರ ಗಳಿಗೆ ಗೊಂದಲ ಕ್ರೀಡದಾಗ ಕೆಬಿಎಂ ಅವರು ನಾನು ನನ್ನ ಪತ್ನಿ ಎಲ್ಲು ಹೋಗುವುದು ಇಲ್ಲ ದಯಮಾಡಿ ಸಹಕರಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಶಾಸಕ ಬೆಳ್ಳಿಪ್ರಕಾಶ್, ಜನ ಸಂಕಷ್ಟಕ್ಕೆ ಸಿಲುಕಿದಾಗ ಅವರ ಕಷ್ಟವೇ ತಮ್ಮ ಕಷ್ಟ ಎಂದು ಭಾವಿಸಿ ಅದರ ಪರಿಹಾರಕ್ಕೆ ನಿರಂತರ ಪ್ರಯತ್ನ ನಡೆಸಿದ ವ್ಯಕ್ತಿತ್ವ ಕೆ.ಬಿ. ಮಲ್ಲಿಕಾರ್ಜುನ್ ಅವರದ್ದು. ಇದಕ್ಕೆ ಉದಾಹರಣೆ ಎಂದರೆ ಅವರು ಶಾಸಕರಾಗಿದ್ದ 1999-2004ರಲ್ಲಿ ಪ್ರಯತ್ನ-ಹೋರಾಟ ಬೀರೂರು ಕ್ಷೇತ್ರದ ನೀರಿನ ಸಮಸ್ಯೆ ಬಗೆಹರಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಕೇಂದ್ರೀಕರಣ ವಾಗಿತ್ತು. ತಮ್ಮ ಅಧಿಕಾರವನ್ನು ಸಂಪೂರ್ಣವಾಗಿ ಜನಸೇವೆಗೆ ಬಳಸಿ ವಿಧಾನಸಭೆ ಅಧಿವೇಶನದಲ್ಲಿ ಕಡೂರು ತಾಲೂಕಿನ ಕೆರೆಗಳಿಗೆ ನೀರುತುಂಬಿಸುವಿಕೆ ಮತ್ತು ಕ್ಷೇತ್ರದ ಜನರಿಗೆ ಕುಡಿಯುವ ನೀರು
ಪೂರೈಸುವ ಬಗ್ಗೆ 42 ಪ್ರಶ್ನೆಗಳನ್ನು ಎತ್ತಿ ಸದನದ ಒಳಗೆ ಮತ್ತು ಹೊರಗೆಜನರ ಪರವಾಗಿ ಧ್ವನಿ ಎತ್ತಿದ್ದರೆ ಫಲವಾಗಿ ಬೀರೂರು ಕ್ಷೇತ್ರದ 12 ಕೆರೆಗಳಿಗೆ ಯಗಚಿ ಹಿನ್ನೀರಿನ ಏತ ನೀರಾವರಿ ಯೋಜನೆ ಮಂಜೂರಾಗಿ ಆ ಮೂಲಕ ಜನರಿಗೆ ನೀರಿನ ಸೌಲಭ್ಯ ದೊರಕಿ ರೈತರಿಗೆ ನೀರಾವರಿ ವ್ಯವಸ್ಥೆ ಸಿಗಲು ಸಾಧ್ಯವಾಗಿದೆ ಎಂದರು.

ಶಾಸಕ ಕೆ.ಎಸ್. ಆನಂದ್ ಮಾತನಾಡಿ, ಕಡೂರು ತಾಲೂಕಿನ ಬೀರೂರು ಗ್ರಾಮದ ಕೃಷಿಕ ಕುಟುಂಬ ದಲ್ಲಿ ಹುಟ್ಟಿ ಬೆಳೆದ ಕೆ.ಬಿ. ಮಲ್ಲಿಕಾರ್ಜುನ್ ಅವರು ಬೀರೂರು ಕ್ಷೇತ್ರದಿಂದ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ನಂತರ ವಿಧಾನಪರಿಷತ್ ಮುಖ್ಯ ಸಚೇತಕರಾಗಿ ಸದ್ದು-ಗದ್ದಲವಿಲ್ಲದೆ ಮಂತ್ರಿ ಗಿರಿಗೆ ಆಸೆಪಡದೇ ಜನರ ಅಭಿಲಾಷೆಯಂತೆ ಅವರ ಕಷ್ಟ-ಕಾರ್ಪಣ್ಯಗಳಿಗೆ ತಮಗಿದ್ದ ಅಧಿಕಾರ ಬಳಸಿ ಸರ್ಕಾರದ ಗಮನ ಸೆಳೆದು ಜನರಿಗಾಗಿ ಜನ ಸೇವೆ ಮಾಡಿದತೃಪ್ತಿ ಅವರದ್ದು ತಮಗೆ ರಾಜ್ಯ ಮಟ್ಟದಲ್ಲಿ ಮಾಜಿ ಮಂತ್ರಿ ಬಿ.ಎಲ್. ಶಂಕರ್ ಅವರಜೊತೆ ನಿಕಟ ಒಡನಾಟವಿದ್ದರೂ ರಾಷ್ಟ್ರಮಟ್ಟದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ಹಾಗೂ ಚಂದ್ರ ಶೇಖರ್‌ಮುಂತಾದವರ ಸಂಪರ್ಕ, ಸೇವಾ ಹಿರಿತನವಿದ್ದರೂ ಎಲ್ಲೂ ಸಹ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಲಾಭಿ ಮಾಡದೇ ಸಂತೃಪ್ತಿಯಿಂದ ಜನ ಸೇವೆಗಾಗಿ ಹೆಚ್ಚಿನ ಸಮಯ ಮೀಸಲಾಗಿ ಟ್ಟಿದ್ದರು.

ರಾಜಕಾರಣದಲ್ಲಿ ನನಗೆ ಗುರುವಿನ ಸಮಾನರಾದ ಅವರಿಗೆ ಪ್ರಧಾನಿ ಮೋದಿಜಿಗೆ ನೀಡುವಷ್ಟೆ ಗೌರವ ಕೆ.ಬಿ.ಮಲ್ಲಿಕಾರ್ಜುನ್ ಅವರಿಗೆ ನೀಡುವೆ. ದೇವರು ಅವರಿಗೆ ಇನ್ನಷ್ಟು ಆರೋಗ್ಯ ನೀಡಿದರೆ ಬೀರೂರು ಅಭಿವೃದ್ಧಿಯಾಗಲಿದೆ ಎಂದು ಕೆಂದ್ರ ಸಚಿವ ವಿ ಸೋಮಣ್ಣ ಹೇಳಿದರು. ಪಟ್ಟಣದ ಸಂತೆ ಮೈದಾನದ ಮೇಲ್ಬಾಗದಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಲು ಆಗಮಿಸಿದ್ದ ವಿ.ಸೋಮಣ್ಣ, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಅವರ ನಡುವಿನ ಅವಿನಾಭಾವ ಸಂಬಂದ ಸುಮಾರು 45 ವರ್ಷಗಳ ಹಿಂದಿನದು. ಅವರು ಅನಾರೋಗ್ಯದ ಸಂದರ್ಭದಲ್ಲಿ ಅವರ ಆರೋಗ್ಯ ವಿಚಾರಿಸಲು ಅವರ ನಿವಾಸಕ್ಕೆ ಬಂದಾಗ ಈ ರೈಲ್ವೆ ಕೆಳಸೇತುವೆ ಬಗ್ಗೆ ಪ್ರಸ್ತಾವನೆ ಇಟ್ಟರು, ಆಗ ನನಗೆ ಇಂತಹ ಕೆಲಸ ಮಾಡಲು ಸಿಕ್ಕ ಸುದಿನ ಎಂದು ತಿಳಿದು ಅಂದೇ ಕಾಮಗಾರಿಗೆ ಅಂಕಿತ ಹಾಕಿದೆ ಎಂದರು.

ವಕೀಲ ಪದವೀಧರಾದ ಕೆ.ಬಿ. ಮಲ್ಲಿಕಾರ್ಜುನ್ ಕೆಲ ಕಾಲ ವಕೀಲಿ ವೃತ್ತಿ ಕೈಗೊಂಡು ನಂತರ ಬೀರೂರಿನ ಕನ್ನಡ ಸಂಘ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ರಾಜಕೀಯ ರಂಗಕ್ಕೆ ಧುಮುಕಿದವರು. ಜಾತಿ-ಧರ್ಮಗಳ ಬೇಧ ಭಾವವಿಲ್ಲದೇಎಲ್ಲರನ್ನೂ ಸಮಾನವಾಗಿ ಕಾಣುತ್ತಾ ಎಲ್ಲರ ಪ್ರೀತಿಗೆ ಪಾತ್ರರಾಗಿ ಬೀರೂರಿನ “ಅಜಾತಶತ್ರು”ವಾಗಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚಿನ ಕೆಬಿಎಂ ಅಭಿಮಾನಿಗಳು ಆಗಮಿಸಿದ್ದು, ಎಲ್ಲರು ಸಿಹಿ ಭೋಜನ ಸವಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಡಿ. ತಮ್ಮಯ್ಯ, ಟಿ.ಡಿ.ರಾಜೇಗೌಡ, ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಎಲ್.ಶಂಕರ್, ಗ್ಯಾಸ್ ಚಂದ್ರಪ್ಪ, ಎಲ್ಲಾ ರಾಜಕೀಯ ಮುಖಂಡರು ವಿವಿಧಸಮಾಜದಅಧ್ಯಕ್ಷರುಕೆಬಿಎಂಅಭಿಮಾನಿಗಳು ಇದ್ದರು.

Warmest regards to KBM

Share

Leave a comment

Leave a Reply

Your email address will not be published. Required fields are marked *

Don't Miss

ರೈತರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾರಾಮಾರಿ

ಚಿಕ್ಕಮಗಳೂರು: ಶಾಂತಿಯುತವಾಗಿ ನಡೆಯಬೇಕಿದ್ದ ರೈತರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯೊಂದು ನೋಡನೋಡುತ್ತಿದ್ದಂತೆ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಹಂಗರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಸಭೆಯಲ್ಲಿ...

ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಪ್ರತಿಷ್ಠಾಪನೆ ಉತ್ಸವಗಳು ನಡೆದವು. ಬೋಳರಾಮೇಶ್ವರ ದೇವಸ್ಥಾನದದ ಆವರಣದಲ್ಲಿ ಸಾರ್ವಜನಿಕ ಗಣಪತಿ ಸೇವಾ ಸಮಿತಿಯಿಂದ(ಅಜಾದ್ ಮೈದಾನ), ಹಿಂದೂ ಮಹಾಗಣಪತಿ ಸೇವಾ ಸಂಘದ...

Related Articles

ಜಿಲ್ಲೆಯ ಐದು ಜನ ಶಾಸಕರಿಗೆ ಬೊಗಣಿ ಗೂಟ ಖಚಿತ !?

ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವ ಜೊತೆಗೆ ಕಾಂಗ್ರೆಸ್ ಮುಖಂಡರು ಮತ್ತು...

ಕಲಿಕೆ ವಯಸ್ಸಿನಲ್ಲಿ ವ್ಯಾಮೋಹಕ್ಕೆ ಒಳಗಾಗದಿರಿ

ಚಿಕ್ಕಮಗಳೂರು: ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವ ಇಂದಿನ ಯುವಪೀಳಿಗೆ ಬಹಳ ಷ್ಟು ಎಚ್ಚರಿಕೆ ವಹಿಸಬೇಕು. ಕಲಿಕೆಯಲ್ಲಿ ಹೊರತಾಗಿ...

ಭೋವಿ ಜಾತಿ ಪ್ರಮಾಣಪತ್ರ ನೀಡಲು ವಿಳಂಬ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಡ್ಡರ ಸಮುದಾಯದವರಿಗೆ ಭೋವಿ ಜಾತಿ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಅಧಿಕಾರಿಗಳು ಅನಗತ್ಯ ತೊಂದರೆ...

ಲಕ್ಯಾ-ಸಖರಾಯಪಟ್ಟಣ ಹೋಬಳಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಇಂಧನ ಸಚಿವ ಮನವಿ

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳಲ್ಲಿ ರೈತರು ಎದುರಿಸುತ್ತಿರುವ ತೀವ್ರ...