Home Crime News ಕಾರುಗಳ ನಡುವೆ ಡಿಕ್ಕಿ: ಇಬ್ಬರು ಸಾವು
Crime NewsHomeKadurLatest Newsnamma chikmagalur

ಕಾರುಗಳ ನಡುವೆ ಡಿಕ್ಕಿ: ಇಬ್ಬರು ಸಾವು

Share
Share
ಕಡೂರು: ಸಖರಾಯಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರಿಗೆ ಗಾಯಗಳಾಗಿವೆ.
ಚನ್ನಗಿರಿ ತಾಲ್ಲೂಕು ಮಾಚನಾಯಕನಹಳ್ಳಿಯ ಕುಮಾರಪ್ಪ ಅವರು ಅಸ್ವಸ್ಥರಾಗಿದ್ದರಿಂದ, ಚಿಕಿತ್ಸೆಗಾಗಿ ಪತ್ನಿ ಹಾಗೂ ಪುತ್ರ ಅವರನ್ನು ಕಾರಿನಲ್ಲಿ ಚಿಕ್ಕಮಗಳೂರಿನತ್ತ ಕರೆದೊಯ್ಯುತ್ತಿದ್ದರು.
ಸಖರಾಯಪಟ್ಟಣ ಸಮೀಪ ಹಿರೇಗೌಜದ ಬಳಿ ಚಿಕ್ಕಮಗಳೂರು ಕಡೆಯಿಂದ ಜಗದೀಶ್‌ ಅರಸ್‌ ಎಂಬುವರು ಚಲಾಯಿಸುತ್ತಿದ್ದ ಕಾರು ಮತ್ತು ಇವರ ಕಾರು ಮುಖಾಮುಖಿ ಡಿಕ್ಕಿಯಾಗಿದ್ದವು.
ಘಟನೆಯಲ್ಲಿ ಕಾರು ಚಾಲಕ ಚನ್ನಗಿರಿಯ ಸತೀಶ್‌ (25) ಸ್ಥಳದಲ್ಲಿಯೇ ಮೃತಪಟ್ಟರೆ, ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಕುಮಾರಪ್ಪ (60) ಮೃತಪಟ್ಟರು.
ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Two dead in collision between cars
Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...