ಚಿಕ್ಕಮಗಳೂರು: ಗಣೇಶನ ಕೊಲೆ ನಡೆದು ಐದು ಜನರ ಬಂಧನವಾಗಿದೆ.ಸತ್ಯಕ್ಕಿಂತ ಸುಳ್ಳುಗಳು ಹರಿದಾಡುತ್ತಿವೆ. ಒಂದೇ ಬಳ್ಳಿಯ “ಹೂವುಗಳಂತೆ” ಇದ್ದವರು ಕೊಲೆಯಾದ ಗಣೇಶ ಮತ್ತು ಕೊಲೆ ಅರೋಪಿಗಳಾದ ಸಂಜಯ್,ನಿತಿನ್, ಜಪಾನ್,ಮಿಥನ್,ಇವರೆಲ್ಲರೂ ಜಾತ್ಯತೀತ ಜನತಾದಳದಲ್ಲಿದ್ದವರು ಏನೇ ವ್ಯವಹಾರ ಮಾಡಿದರು ಒಟ್ಟಿಗೆ ಬಗೆಹರಿಸಿ ಕೊಳ್ಳುವ ಚತುರ್ಥ ಇದ್ದವರು ” ವ್ಯವಹಾರ ” ಒಂದರಲ್ಲಿ ಗಣೇಶನ ಅತಿ ಆಸೆಯಿಂದ ಎರಡು ಗುಂಪಾದರು ಎಂದು ಸ್ಥಳೀಯರ ಅಭಿಪ್ರಾಯ.
ಪ್ರತಿಷ್ಠಿತ ರಾಜಕೀಯ ಕುಟುಂಬಕ್ಕೆ ಎಂದು ಮರೆಯದ ಅಪಮಾನ ಮಾಡಿದ ಗಣೇಶ ಜಾ,ದಳ ತೊರೆದು ” ಬಂಗಾರದ ಮನುಷ್ಯ “ನಾಗಿ ಕಾಂಗ್ರೆಸ್ ಗೆ ಎಂಟ್ರಿ ಕೊಟ್ಟರೆ ಇನ್ನುಳಿದವರು ಬಿಜೆಪಿ ಕಡೆ ಮುಖ ಮಾಡಿದರು ಎನ್ನುತ್ತಾರೆ. ಜಿಲ್ಲಾ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಗಣೇಶ ಗೆದ್ದ ನಂತರ ಮತ್ತಷ್ಟು ದ್ವೇಷ ಬೆಳೆಯುತ್ತಾ ಹೋಯಿತು. ಈ ಹಿಂದೆ ಕೂಡ ಎರಡು ಬಾರಿ ಜಾಟಪಟಿ ನಡೆದಿದೆ .
ಗಣೇಶ ಕಾಂಗ್ರೆಸ್ ನಾಯಕರು ಎಂದು ಬಹು ದೊಡ್ಡ ಬಿಲ್ಡ್ ಅಫ್ ಕೊಟ್ಟು ರಾಜಕೀಯ ಲಾಭ ಪಡೆಯಲು ಹೊರಟಿರುವವರ ಮಾತು ಕೇಳಿದರೆ ಮೈ ಉರಿಸಿ ಕೊಂಡವರು ಹೆಚ್ಚು. ಗಣೇಶ ಬಿ.ಎಲ್.ಶಂಕರ್ ಗೆ ಕಾಂಗ್ರೆಸ್ ನೇತಾರ, ಶಾಸಕ ತಮ್ಮಯ್ಯಗೆ ಸಹೋದರ,ಗಾಯತ್ರಮ್ಮನ ಕಣ್ಣೀರು, ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿದೆ.ಆದರೆ ಸತ್ಯ ಕ್ಕಿಂತ ಸುಳ್ಳು ಹೆಚ್ಚು ಸುತ್ತುತ್ತಿದೆ ಇದು ಪೊಲೀಸ್ ರಿಗೆ ತಿಳಿದಿದೆ.ಕಾಂಗ್ರೆಸ್ ಮತ್ತು ಬಿಜೆಪಿ ಯನ್ನು” ಬುಗುರಿ” ಯಂತೆ ಚಾಟಿ ಆಡಿಸುವ ಕಲೆಗಾರರು, ನಿಪುಣರ ಮುಂದೆ ಕಾಂಗ್ರೆಸ್ ನವರು ಮಂಡಿ ಉರುವುದು ಖಚಿತ.
ಗಣೇಶ ಏನೇ ಇರಲಿ ಕೊಲೆ ಮಾಡಿ ಸಾಯಿಸುವ ಮಟ್ಟಕ್ಕೆ ಹೋಗಬಾರದಿತ್ತು.ಸಾವಿನಲ್ಲಿ ರಾಜಕೀಯ ಇನ್ನೂ ಅಸಹ್ಯ .ಸಖರಾಯಪಟ್ಟಣದಲ್ಲಿ ಇದರ ಕಾವು ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ ಎಂಬ ಅಭಿಪ್ರಾಯ ಇದೆ.ಪೊಲೀಸರು ದಕ್ಷತೆಗಿಂತ ಒತ್ತಡಕ್ಕೆ ಮಣಿದರೆ ಸಾಮಾನ್ಯ ಜನತೆಗೆ ನ್ಯಾಯ ಸಿಗುವುದಿಲ್ಲ.
ಕೊಲೆಯಾದ ಗಣೇಶನ ಮೇಲೆ ಕೊಲೆ ಯತ್ನ ಮತ್ತು ಹಲ್ಲೆ ನಡೆಸಿದ ದೂರು ದಾಖಲಾಗಿದೆ. ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಕಂಡುಬರುತ್ತದೆ .ಇದರಲ್ಲಿ ಕತ್ತೆ ಸಂದೀಪ್ ಪಾತ್ರ ಕೂಡ ನಿಗೂಢವಾಗಿದೆ.ಮಹಿಳೆಯೊಬ್ಬರಿಗೆ ಹತ್ತು ಲಕ್ಷ ರೂ ಪೋನ್ ಫೇ ಮೂಲಕ ರವಾನೆಯಾಗಿರುವುದು ಕೊಲೆ ನಡೆಯುವ ಸ್ಥಳಕ್ಕೆ ದರ್ಶನ್(ಜಪಾನ್) ಮತ್ತು ಅರಸೀಕೆರೆ ಮತ್ತು ತುಮಕೂರಿನ ಯುವಕ ಕೆ.ಎ.36N8298 ಕಾರು ಕಡೂರಿನಿಂದ ಕೇವಲ ಎಂಟು ನಿಮಿಷಕ್ಕೆ ಬಂದಿರುವುದು ನೋಡಿದರೆ ಅದರಲ್ಲಿ ಮಹಿಳೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಜನ ಮಾತನಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಇದರಲ್ಲಿ ಸೈನ್ಸ್ ಶೀನಾನ ಮಗ ನಿತೀನ್ ಎಡ ಗೈನಿಂದ ಮಚ್ಚು ಬಿಸಿರುವುದು ಮತ್ತೆ ಕತ್ತೆ ಸಂದೀಪ್ ಸ್ಥಳದಲ್ಲಿ ಇದ್ದರು ಏನು ಆಗದಿರುವುದು ನೋಡಿದರೆ ಹಲವು ಸಂಶಯಕ್ಕೆ ಕಾರಣ ಉಂಟು ಮಾಡುತ್ತದೆ.ಆಗಾದರೆ ” ಡೀಲ್” ಕೊಟ್ಟವರು ಯಾರು ಎಂಬ ಅನುಮಾನ ಇದ್ದೇ ಇದೆ. ಭಜರಂಗದಳ ಕಾಂಗ್ರೆಸ್ ಎನ್ನುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಇದರ ಅಳ ಆಗಲ ಗಣೇಶನ ಇತಿಹಾಸ ಪ್ರತಿಬಿಂಬಿಸುವುದರ ಜೊತೆಗೆ ಮತ್ತಷ್ಟು ರಗಳೆಯಾಗುವುದನ್ನು ತಡೆಯುವ ಜವಾಬ್ದಾರಿ, ಕರ್ತವ್ಯ ಪೊಲೀಸರ ಮೇಲಿದೆ.
The “murder” of Ganesha
Leave a comment