Home Latest News ಗುರು ಬೋಧದಿಂದ ಮನಅರಳಿ ಭಾವಕುಸುಮ ವಿಕಾಸಗೊಳ್ಳುತ್ತದೆ
Latest NewschikamagalurHomenamma chikmagalur

ಗುರು ಬೋಧದಿಂದ ಮನಅರಳಿ ಭಾವಕುಸುಮ ವಿಕಾಸಗೊಳ್ಳುತ್ತದೆ

Share
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Share

ಅಜ್ಜಂಪುರ: ಗುರುವಿಲ್ಲದೇ ಗುರಿಯಿಲ್ಲದೇ ಜೀವನ ಬೆಳೆಯದು. ಗುರು ಬೋಧದಿಂದ ಮನ ಅರಳುತ್ತದೆ. ಭಾವ ಕುಸುಮ ವಿಕಾಸಗೊಳ್ಳುತ್ತದೆ. ಪರಮ ತಪಸ್ವಿ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಶುಭಾಗಮನ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಭಾಗ್ಯ ದೊರೆತಿರುವುದು ನನ್ನ ಸೌಭಾಗ್ಯ ಎಂದು ರಾಜ್ಯದ ಅರಣ್ಯ-ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಎಂದರು

ಅವರು ಭಾನುವಾರ ಬುಕ್ಕಾಂಬುಧಿ ಬೆಟ್ಟಕ್ಕಾಗಮಿಸಿ ತಪಗೈದ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಶುಭಾಗಮನ ಶತಮಾನೋತ್ಸವ ಹಾಗೂ ಮಹಾದ್ವಾರ-ಗುರು ನಿವಾಸ ಉದ್ಘಾಟನಾ ಧರ್ಮ ಸಮಾರಂಭವನ್ನು ರಾಜ್ಯದ ಅರಣ್ಯ-ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿ ಮಾತನಾಡಿದದರು

ಶಿಕ್ಷಣ ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡಬಾರದು. ಬಡವರ ಕೃಷಿಕರ ಮತ್ತು ಶ್ರಮಜೀವಿಗಳ ಬಾಳು ಉಜ್ವಲಗೊಳ್ಳಬೇಕೆಂಬ ಲಿಂ.ಉಜ್ಜಯಿನಿ ಜಗದ್ಗುರುಗಳ ಹೃದಯ ಹಂಬಲ ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ ಎಂದರು. ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ ಭಾರತೀಯ ಸಂಸ್ಕೃತಿ ಉತ್ಕೃಷ್ಟವಾದುದು. ಹಿಂದೂ ಸಂಸ್ಕೃತಿ ಸಕಲರ ಹಿತವನ್ನು ಸದಾ ಮಾಡುತ್ತಾ ಬಂದಿದೆ. ಶ್ರೀ ಲಿಂ. ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ತಪಸ್ ಶಕ್ತಿ ಅಮೋಘವಾದುದು. ಬುಕ್ಕಾಂಬುಧಿ ಬೆಟ್ಟಕ್ಕೆ ಅವರ ಆಗಮನದ ಶತಮಾನೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಮಾತನಾಡಿ ಸುಖ ಶಾಂತಿ ಎಲ್ಲರ ಬಾಳಿಗೆ ಅಗತ್ಯ. ಸಂಸ್ಕಾರ ಮನುಷ್ಯನ ಬದುಕನ್ನು ಸುಸಂಸ್ಕೃತಗೊಳಿಸುತ್ತದೆ. ಮನುಷ್ಯ ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳನ್ನು ನಾಶ ಮಾಡಬಾರದು. ಬಾಳಿನ ವಿಕಾಸಕ್ಕೆ ಧರ್ಮ ಮತ್ತು ಆಧ್ಯಾತ್ಮಿಕತೆ ಆಶಾಕಿರಣವಾಗಿವೆ ಎಂದು ಹೇಳಿದರು

ವ್ಯಕ್ತಿ ಹಿತಕ್ಕಿಂತ ಸಮಾಜದ ಹಿತ ಬಹಳ ಮುಖ್ಯ. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆದರೆ ಜೀವನ ಉಜ್ವಲಗೊಳ್ಳುತ್ತದೆ. ರವಿ ಕಿರಣದಿಂದ ಹೂ ಅರಳಿದರೆ ಗುರು ಕರುಣದಿಂದ ಆತ್ಮ ಅರಳುತ್ತದೆ. ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಲೋಕ ಕಲ್ಯಾಣ ಮತ್ತು ಜನ ಹಿತಕ್ಕಾಗಿ ಶ್ರಮಿಸಿದರು ಎಂದರು

ಕಠಿಣ ತಪಸ್ಸು ಮತ್ತು ಸಾಧನೆಯಿಂದ ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿದ ಶಕ್ತಿ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳಿಗೆ ಸಲ್ಲುತ್ತದೆ. ಪರಮಪೂಜ್ಯರ ಜನೇವರಿ ಪುಣ್ಯಾರಾಧನೆ ನಿಮಿತ್ತ ಶ್ರೀ ಉಜ್ಜಯಿನಿ ಪೀಠದಿಂದ ಪಾದಯಾತ್ರೆ ಕೈಗೊಂಡು ಧರ್ಮ ಜಾಗೃತಿ ಸಮಾರಂಭ ಮಾಡುತ್ತಾ ಬೆಟ್ಟಕ್ಕೆ ಆಗಮಿಸುತ್ತೇವೆ ಎಂದು ಘೋಷಣೆ ಮಾಡಿದರು.

ಶಾಸಕ ಬಿ.ಹೆಚ್.ಶ್ರೀನಿವಾಸ ಮಾತನಾಡಿ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಸ್ವಾರ್ಥರಹಿತ ಬದುಕಿಗೆ ಬೆಲೆ ಮತ್ತು ಬಲವಿದೆ. ಬುಕಾಂಬುಧಿ ಕ್ಷೇತ್ರದ ಅಭಿವೃದ್ಧಿಗಾಗಿ ನಾವೆಲ್ಲರೂ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡೋಣವೆಂದರು. ಪ್ರಶಾಂತ ರಿಪ್ಪನ್‌ಪೇಟೆ ನುಡಿ ನಮನ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಹರಪನಹಳ್ಳಿಯ ಎಂ.ವಿ.ಎಂ. ಶಾಂತವೀರಯ್ಯನವರಿಂದ ರಚಿತವಾದ ಪರಮ ತಪಸ್ವಿ ಯುಗಪುರುಷ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಜೀವನ ದರ್ಶನ ಕೃತಿಯನ್ನು ಹುಲಿಕೆರೆ ವಿರೂಪಾಕ್ಷ ಶಿವಾಚಾರ್ಯರು ಬಿಡುಗಡೆಗೊಳಿಸಿ ಮಾತನಾಡಿದರು. ಎಡೆಯೂರು ರೇಣುಕ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಬೀರೂರು ರುದ್ರಮುನಿ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು.

ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಬಿಳಿಕಿ ರಾಚೋಟೇಶ್ವರ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು ಮತ್ತು ನಂದಿಪುರ ನಂದೀಶ್ವರ ಶಿವಾಚಾರ್ಯರಿಗೆ ಸಾಧನೆಯ ಸಾಧಕರ ಗುರುರಕ್ಷೆ ನೀಡಿ ಆಶೀರ್ವದಿಸಲಾಯಿತು.

ಮಳಲಿಮಠದ ಡಾ||ನಾಗಭೂಷಣ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು, ಚಿಕ್ಕಮಗಳೂರು ಚಂದ್ರಶೇಖರ ಶಿವಾಚಾರ್ಯರು, ತೊಗರ್ಸಿ ಮಹಾಂತ ಶಿವಾಚಾರ್ಯರು, ತೊಗರ್ಸಿ ಚನ್ನವೀರ ಶಿವಾಚಾರ್ಯರು, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ರಟ್ಟೀಹಳ್ಳಿ ಶಿವಲಿಂಗ ಶಿವಾಚಾರ್ಯರು, ಬೇರುಗಂಡಿ ರೇಣುಕ ಮಹಂತ ಶಿವಾಚಾರ್ಯರು ಉಪಸ್ಥಿತರಿದ್ದರು.

ಟ್ರಸ್ಟಿನ ಉಪಾಧ್ಯಕ್ಷ ಎಸ್.ಎಂ.ವೀರಭದ್ರಪ್ಪ, ಕಾರ್ಯದರ್ಶಿ ಹೆಚ್.ಪಿ.ಸುರೇಶ್, ಕೆ.ಆರ್.ಆನಂದ, ಬಿ.ಜಿ.ವಿಕಾಸ, ಚೆನ್ನಾಪುರ ಸಿದ್ಧೇಗೌಡ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಪಡೆದರು. ಮಲ್ಲಿಕಾರ್ಜುನ ಹೆಚ್.ಪಿ. ಸ್ವಾಗತಿಸಿದರು. ಶಾಂಭವಿ ಮಹಿಳಾ ಮಂಡಳದವರಿಂದ ಪ್ರಾರ್ಥನೆ ನಡೆಯಿತು. ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು ನಿರೂಪಿಸಿದರು.

The mind and emotions develop through the teachings of the Guru.

 

 

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...