Home namma chikmagalur ಡಿಜಿಪಿ ಸಲೀಂರಿಂದ ದತ್ತಜಯಂತಿ ಬಂದೋಬಸ್ತ್ ಪರಿಶೀಲನೆ
namma chikmagalurchikamagalurHomeLatest News

ಡಿಜಿಪಿ ಸಲೀಂರಿಂದ ದತ್ತಜಯಂತಿ ಬಂದೋಬಸ್ತ್ ಪರಿಶೀಲನೆ

Share
Share

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ನವೆಂಬರ್ ೨೬ ರಿಂದ ಡಿಸೆಂಬರ್ ೪ರವರೆಗೆ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಲೀಂ ಭಾನುವಾರ ನಗರಕ್ಕೆ ಭೇಟಿನೀಡಿದ್ದು, ಬಂದೋಬಸ್ತ್ ಕುರಿತು ಉನ್ನತ ಮಟ್ಟದ ಚರ್ಚೆ ನಡೆಸಿದ್ದಾರೆ.

ದತ್ತಜಯಂತಿ ಬಂದೋಬಸ್ತ್ ಪರಿಶೀಲನೆಗಾಗಿ ಡಿಜಿಪಿ ಮಟ್ಟದ ಅಧಿಕಾರಿಯೊಬ್ಬರು ೨೦೦೫ರ ನಂತರ ಕಾಫಿನಾಡಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಜಿಲ್ಲಾಪೊಲೀಸ್ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಬಂದೋಬಸ್ತ್ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ಡಿಜಿಪಿ ಸಲೀಂ ಅವರು ಎಸ್ಪಿ ಕಚೇರಿಯಲ್ಲಿ ಸುದೀರ್ಘ ಸಭೆ ನಡೆಸಿ, ಭದ್ರತಾ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು. ಈ ಬಾರಿ ಒಟ್ಟು ೯ ದಿನಗಳ ಕಾಲ ಚಿಕ್ಕಮಗಳೂರು ಸೂಕ್ಷ್ಮ ಜಿಲ್ಲೆಯಾಗಲಿದ್ದು, ವಿಶೇಷವಾಗಿ ಡಿಸೆಂಬರ್ ೨, ೩ ಮತ್ತು ೪ ರಂದು ಪರಿಸ್ಥಿತಿ ಅತಿ ಸೂಕ್ಷ್ಮವಾಗಿರಲಿದೆ. ಈ ಬಾರಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಜೊತೆಗೆ ಶ್ರೀರಾಮಸೇನೆಯೂ ಸೇರ್ಪಡೆಗೊಂಡಿರುವುದರಿಂದ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ.

ಡಿಸೆಂಬರ್ ೪ರಂದು ಒಂದೇ ದಿನ ಸುಮಾರು ೨೦ ಸಾವಿರಕ್ಕೂ ಹೆಚ್ಚು ಭಕ್ತರು ಚಿಕ್ಕಮಗಳೂರು ತಾಲ್ಲೂಕಿನ ದತ್ತಪೀಠಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಭದ್ರತೆ, ಪೊಲೀಸ್ ಸಿಬ್ಬಂದಿಯ ನಿಯೋಜನೆ ಮತ್ತು ಕಣ್ಣಾವಲು ವ್ಯವಸ್ಥೆ ಕುರಿತು ಡಿಜಿಪಿ ಸಲೀಂ ಅವರು ಚರ್ಚೆ ನಡೆಸಿ, ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಎಸ್ಪಿ ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಇದ್ದರು.

DGP Salim reviews Datta Jayanti arrangements

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...