Home namma chikmagalur chikamagalur ಮಲೆನಾಡಿನಲ್ಲಿ ಮಳೆ – ಬಯಲ ಸೀಮೆಯಲ್ಲಿ ಬರ-ಬರ
chikamagalurHomeLatest Newsnamma chikmagalur

ಮಲೆನಾಡಿನಲ್ಲಿ ಮಳೆ – ಬಯಲ ಸೀಮೆಯಲ್ಲಿ ಬರ-ಬರ

Share
Share

ಚಿಕ್ಕಮಗಳೂರು:  ಮಲೆನಾಡು ಪ್ರದೇಶಗಳಲ್ಲಿ ಮಳೆ ಬರುತ್ತಿದೆ ಆದರೆ ಬಯಲು ಪ್ರದೇಶದಲ್ಲಿ ಮಳೆ ಬಾರದೆ ರೈತರು ಮತ್ತು ಜನತೆ ತಲೆ ಮೇಲೆ ಕೈ ಹೊತ್ತುಕೊಂಡು ಪರಿತಾಪಿಸುತ್ತಿದ್ದಾರೆ.

ಮಲೆನಾಡು ಪ್ರದೇಶದ ಬಾಳೆಹೊನ್ನೂರು,ಕೊಪ್ಪ,ಕಳಸ ಮೂಡಿಗೆರೆ ಮತ್ತು ಶೃಂಗೇರಿಯಲ್ಲಿ ಎಡ ಬಿಡದೆ ಮಳೆ ಬರುತ್ತಿದೆ.ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಗಾರರಿಗೆ ಮತ್ತು ರೈತರಿಗೆ ಸಮಾಧಾನ ತರುವಂತ ಮಳೆ ಬರುತ್ತಿದೆ. ಆದರೆ ಕೆರೆ ಕಟ್ಟೆಗಳಿಗೆ ನೀರು ತುಂಬಿಲ್ಲಾ ಆದರೂ ಮುಂದಿನ ದಿನಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ.

ಬಯಲು ಸೀಮೆಯ ಕಡೂರು, ಬೀರೂರು ಮತ್ತು ತರೀಕೆರೆಯಲ್ಲಿ ಒಂದೆರಡು ದಿನ ಮಳೆ ಬಂದರು ಭೂಮಿ ತಂಪಾಗಿಲ್ಲ,ಇನ್ನುಳಿದಂತೆ ಕಡೂರು ತಾಲ್ಲೂಕಿನ ಯಗಟಿ,ಸಿಂಗಟಗೆರೆ ಪಂಚನಳ್ಳಿ ಮತ್ತು ಚೌಳಹಿರಿಯೂರು,ಹಿರೇನಲ್ಲೂರು ಮತಿಘಟ್ಟ ಪ್ರದೇಶಕ್ಕೆ ಮಳೆ ಬಂದಿಲ್ಲ

ಇದೇ ರೀತಿಯಲ್ಲಿ ಅಜ್ಜಂಪುರ ತಾಲ್ಲೂಕಿನ ಅಜ್ಜಂಪುರ ಮತ್ತು ಶಿವನಿ ಭಾಗದಲ್ಲಿ ಹನಿ ಮಳೆ ಬಾರದಿರುವುದು ರೈತರು ಸಂಕಷ್ಟದಿಂದ ನರಳುತ್ತಿದ್ದಾರೆ.ತೋಟಗಳು ಒಣಗುತ್ತಿವೆ ಭೂಮಿ ಬಿರುಕು ಬಿಟ್ಟಿದೆ ದನಕರುಗಳಿಗೆ ನೀರಿಲ್ಲ ಜೊತೆಗೆ ಜನರಿಗೂ ನೀರಿನ ಕಷ್ಟ ಹೇಳತೀರದಾಗಿದೆ.ಮುಂದುವರಿದು ಆಮೃತಾಪುರ ಸುತ್ತಮುತ್ತಲಿನಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಹನಿಗಳು ಬಂದು ಹೋದರು ಜನರಿಗೆ ಉಪಯೋಗವಾಗುತ್ತಿಲ್ಲ.

ಲಕ್ಕವಳ್ಳಿ,ಲಿಂಗದಳ್ಳಿ ಪ್ರದೇಶದಲ್ಲಿ ಮತ್ತು ತರೀಕೆರೆ ಸುತ್ತ ಮುತ್ತ ಕೂಡ ಯಾವಾಗ ಹದ ಮಳೆ ಬರಬಹುದು ಎಂದು ಆಕಾಶದತ್ತ ಜನರ ಕಣ್ಣುಗಳು ನೋಡತೊಡಗಿವೆ. ಜೂನ್ ತಿಂಗಳಲ್ಲಿ ಮುಂಗಾರು ಮಳೆ ಬರುತ್ತದೆ ಎಂದು ನಿರೀಕ್ಷೆ ಮಾಡುವುದು ಸಹಜ ಆದರೆ ಜೂನ್ ಅರ್ಧ ತಿಂಗಳು ಮುಗಿಯುತ್ತಾ ಬಂದರು ಬಯಲು ಪ್ರದೇಶದಲ್ಲಿ ಮಳೆಯ ಸುಳಿವಿಲ್ಲ.ಭೂಮಿ ಹದ ಮಾಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಶೇಖರಣೆ ಮಾಡಿಕೊಂಡು ಕೈ,ಕೈ ಹಿಸಕಿ ಕೊಂಡು ಕತ್ತು ಮುಗಿಲು ನೋಡುತ್ತಿವೆ.

ರೈತರ ಮತ್ತು ಜನರ ಕಷ್ಟ ಕೇಳ ಬೇಕಾದ ಜನಪ್ರತಿನಿಧಿಗಳು ಮಂತ್ರಿ ಸ್ಥಾನ,ಬೋರ್ಡ್ ನೇತಾಕಿಕೊಂಡು ಬರುತ್ತೇವೆ ಎಂದು ಬೆಂಗಳೂರಿನಲ್ಲಿ ಲಾಭಿ ಮಾಡಿಕೊಂಡು ಮುಖಂಡರ ಹಿಂದೆ ಮುಂದೆ ಸುತ್ತುತ್ತಿದ್ದಾರೆ.
ಇನ್ನೂ ಒಂದು ವಾರದಲ್ಲಿ ಮಳೆ ಬರದಿದ್ದರೆ ಇಲ್ಲಿನ ರೈತರು ಮತ್ತು ಜನ ಗುಳೆ ಹೋಗುವ ದುಸ್ಥಿತಿ ಒದಗಿಬರುವುದು ಖಚಿತ. ದೇವರು ಪೂಜೆ ಪುನಸ್ಕಾರಲ್ಲಿ ಜನ ದಿನಗಳನ್ನು ದೂಡುತ್ತಿದ್ದಾರೆ.ಪ್ರಕೃತಿ ಮುಂದೆ ಯಾರು ಏನು ಮಾಡುವುದು ಎಂದು ಗೊಣಗುತ್ತಿದ್ದಾರೆ.

ದೃಶ್ಯ ಮಾಧ್ಯಮ ಮತ್ತು ಪತ್ರಿಕೆಗಳು ನೈಜ ಸ್ಥಿತಿ ಹೇಳದೆ ಚಿಕ್ಕಮಗಳೂರಿನಲ್ಲಿ ಮಳೆ ಬಂದರೆ ಸಿಂಗಟಗೆರೆ,ಶಿವನಿಯಲ್ಲಿ ಛತ್ರಿ ಹಿಡಿದುಕೊಂಡು ವರದಿ ಮಾಡುತ್ತಿದ್ದಾರೆ.ಜನಪ್ರತಿನಿಧಿಗಳು ಮಂತ್ರಿ ಸ್ಥಾನ ಬೋರ್ಡ್ ನೆತಾಕಿಕೊಂಡು ಬರಲು ಸಾಧ್ಯವಿಲ್ಲ ಎಂದು ಜನರ ಸಂಕಷ್ಟ ನಿವಾರಣೆಗೆ ಮುಂದಾಗದಿದ್ದರೆ ಜನ ಚುನಾವಣೆ ಎಂಬ ಮಾರಿ ಹಬ್ಬಕ್ಕೆ ಕಾಯುತ್ತಿದ್ದಾರೆ.

Rain in the hills – drought in the plains

Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...