Home namma chikmagalur ಉದ್ಯಾನವನ ಜಾಗ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ
namma chikmagalurchikamagalurHomeLatest News

ಉದ್ಯಾನವನ ಜಾಗ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

Share
Share

ಚಿಕ್ಕಮಗಳೂರು: ನಗರದ ರಾಮನಹಳ್ಳಿ ಬಡಾವಣೆಯ ಸರ್ವೆ ನಂ. ೧೧೫/೧ ರಲ್ಲಿ ಇರುವ ಪಾರ್ಕ್ ಜಾಗವನ್ನು ಅತಿಕ್ರಮಿಸಿರುವುದನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ನಗರಸಭೆ ಮತ್ತು ಸಿಡಿಎ ಎದುರು ಸಧ್ಯದಲ್ಲೇ ಉಗ್ರ ಪ್ರತಿಭಟನೆ ನಡೆಸುವುದಾಗಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಮ್ಮ ಕರವೇ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್ ಅವರು ರಾಮನಹಳ್ಳಿ ಬಡಾವಣೆಯ ಸರ್ವೆ ನಂ.೧೫೫/೧ ರಲ್ಲಿ ೨ ಎಕರೆ ೧೩ ಗುಂಟೆ ಜಾಗವನ್ನು ೧೯೮೬-೨೭ ರಲ್ಲಿ ಮಹದೇವಪ್ಪ ಎಂಬುವವರು ಮೀಸಲಿಟ್ಟಿದ್ದು, ೮೦x೨೦೦ ಅಡಿ ಜಾಗವನ್ನು ಪಾರ್ಕಿಗೆ ಕಾಯ್ದಿರಿಸಿ ಬಡಾವಣೆ ನಕ್ಷೆ ಅನುಮೋದನೆಯಾಗಿದೆ ಎಂದು ಹೇಳಿದರು.

ಲೇಔಟ್‌ನಲ್ಲಿ ಬಿಡಲಾಗಿದ್ದ ಉದ್ಯಾನವನದ ಈ ಜಾಗವನ್ನು ಕೆಲವು ಬಲಾಢ್ಯರು ನಗರಸಭೆ ಮತ್ತು ಸಿಡಿಎ ಅಧಿಕಾರಿಗಳೊಂದಿಗೆ ಶಾಮೀಲಾಗಿ ಮಾರ್ಪಾಡು ನಕ್ಷೆ ತಯಾರಿಸಿದ್ದಾರೆಂದು ಆರೋಪಿಸಿದರು.

ಈ ಸಂಬಂಧ ಸ್ಥಳೀಯ ನಗರಸಭೆ ಸದಸ್ಯರು, ನಗರಸಭಾಧ್ಯಕ್ಷರು ಮತ್ತು ಪೌರಾಯುಕ್ತರು, ಸಿಡಿಎ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ರಾಮನಹಳ್ಳಿ ಹನುಮಂತನಗರದ ಉದ್ಯಾನವನ ಜಾಗ ಅತಿಕ್ರಮಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಜಾಗವನ್ನು ಉಳಿಸುವಂತೆ ಆಗ್ರಹಿಸಿದರು.

ಇನ್ನೊಂದು ವಾರದಲ್ಲಿ ತೆರವು ಕಾರ್ಯಾಚರಣೆ ಆಗದಿದ್ದರೆ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಮುಖಂಡರಾದ ಪ್ರದೀಪ್, ಜೀವನ್, ಪ್ರಜ್ವಲ್, ಸುಭಾನ್, ಅಕ್ಷಯ್ ಉಪಸ್ಥಿತರಿದ್ದರು.

Protest demanding the clearing of park land

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...