Home Latest News ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಬೇಕೆಂದು ದೊಡ್ಡ ಷಡ್ಯಂತ್ರ
Latest NewschikamagalurHomenamma chikmagalur

ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಬೇಕೆಂದು ದೊಡ್ಡ ಷಡ್ಯಂತ್ರ

Share
Share

ಚಿಕ್ಕಮಗಳೂರು:  ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಬೇಕೆಂದು ದೊಡ್ಡ ಷಡ್ಯಂತ್ರ ನಡೆದಿದೆ ಎಂದು ವಿದಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ನಾವೆಲ್ಲ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರನ್ನು ದೇವತಾ ಮನುಷ್ಯ ಎಂದೇ ಭಾವಿಸುತ್ತೇವೆ. ಅವರ ಬದುಕಿಗೆ ಅಷ್ಟು ಸ್ಪಷ್ಟತೆ, ಪರೋಪಕಾರದ ಜೀವನ ಇದೆ. ನಮ್ಮ ಸಮಾಜ ವ್ಯವಸ್ಥೆಯಲ್ಲಿ ಚಿಪ್ಪಿನಲ್ಲಿ ಕಾಫಿ ಕೊಡುವ ಸಂದರ್ಭದಲ್ಲಿ ಅವರು ಸಹಪಂಕ್ತಿ ಬೋಜನ ಏರ್ಪಾಡು ಮಾಡಿ ಸಮಾನತೆ ಎತ್ತಿ ಹಿಡಿದರು. ಎಷ್ಟೋ ಕುಟುಂಬಗಳು ಧರ್ಮಸ್ಥಳ ವ್ಯಸನ ಮುಕ್ತಿ ಕೇಂದ್ರದಿಂದ ಕುಡಿತ ಬಿಟ್ಟು ಬದುಕು ಕಟ್ಟಿಕೊಂಡಿವೆ.

ಲಕ್ಷಾಂತರ ಕುಟುಂಬಗಳು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೆರವಿನಲ್ಲಿ ಬದುಕು ಕಟ್ಟಿಕೊಂಡಿವೆ. ಸಾವಿರಾರು ದೇವಾಲಯ ಪುರುತ್ಥಾನಗೊಂಡಿವೆ ಎಂದರು.

ಇನ್ನು ಆತ್ಮಹತ್ಯೆ, ಅಪರಿಚಿತ ಶವ ಇನ್ನಿತರೆ ಬಗ್ಗೆ ಯಾವುದೇ ತನಿಖೆ ನಡೆಯಲಿ. ಕೆಲವರು ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳನ್ನೇ ಅಪರಾಧಿಯನ್ನಾಗಿಸಲು ಷಡ್ಯಂತ್ರ ನಡೆಸಿದ್ದಾರೆ. ಕಮ್ಯುನಲ್ ಮತ್ತು ಕ್ರಿಮಿನಲ್ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಎಸ್‌ಡಿಪಿಐ ಸಹ ಇದರಲ್ಲಿ ಸೇರಿಕೊಂಡಿದೆ ಎಂದರು.

ಇದರಲ್ಲಿ ಹಲವು ಮಾಫಿಯಾಗಳು ಕೆಲಸ ಮಾಡುತ್ತಿವೆ. ಧಾರ್ಮಿಕ ಶ್ರದ್ಧೆ ಕಾರಣಕ್ಕೆ ಮತಾಂತರದ ಮಾಫಿಯಾಕ್ಕೆ ಫಲ ಸಿಗುವುದಿಲ್ಲ ಅದಕ್ಕಾಗಿ ಅವರು ಹಿಂದೆ ಶಬರಿಮಲೈ ಅನ್ನು ಗುರಿ ಮಾಡಿಕೊಂಡಿದ್ದರು. ಇನ್ನೂ ಕೆಲವು ಸದಾ ಸುದ್ದಿಯಲ್ಲಿರಬೇಕು ಎನ್ನುವವರು, ಮತ್ತು ಅರಾಜಕತೆ ಹುಟ್ಟುಹಾಕಬೇಕು ಎನ್ನುವವರು ಹಾಗೂ ನಗರ ನಕ್ಸಲರ ಷಡ್ಯಂತ್ರ ಇದರಲ್ಲಿದೆ. ಈಗಾಗಲೇ ಆರೋಗ್ಯ ಸಚಿವರು ಎಡಪಂಥೀಯರ ಒತ್ತಡದಿಂದ ಎಸ್‌ಐಟಿ ನೇಮಿಸಿದ್ದೇವೆ ಎಂದಿದ್ದಾರೆ. ಸತ್ಯಾಸತ್ಯತೆ ಇದೆ ಎಂದು ಅವರಿಗೆ ಅನ್ನಿಸಲಿಲ್ಲ ಎಂದು ದೂರಿದರು.

A big conspiracy to bring a bad name to Dharmasthala

Share

Leave a comment

Leave a Reply

Your email address will not be published. Required fields are marked *

Don't Miss

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦ ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಸೋಮವಾರ ಕೆರೆಯ...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ನೊಂದ ಕುಟುಂಬಕ್ಕೆ ಸರ್ಕಾರಿ ಹುದ್ದೆ ಕಲ್ಪಿಸಿಕೊಡಬೇ ಕು ಎಂದು ಆಗ್ರಹಿಸಿ ದಸಂಸ ಮುಖಂಡರುಗಳು...

Related Articles

ನಗರದಲ್ಲಿ ಅವಿಧಿ ಮುಗಿದ ಚಾಕೊಲೇಟ್ ಸಾಸ್ ಬಳಸಿ ಕೇಕ್ ….?

ಚಿಕ್ಕಮಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್‌ ಹಾಗೂ ಬೇಕರಿಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ...

ಬಿಜೆಪಿ-ಸಂಘಪರಿವಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ಉತ್ತರಾಖಾಂಡ ರಾಜ್ಯದ ಹಾಲದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಮೈದಾನವನ್ನು...

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ...

ರಾಷ್ಟ್ರಧ್ವಜ ಅವಮಾನ ಆರೋಪ: ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ ರಾಷ್ಟ್ರಧ್ವಜಾರೋಹಣ ಮಾಡಿ, ಮಧ್ಯಾಹ್ನದ ವೇಳೆಗೆ ಧ್ವಜವನ್ನು ಅವರೋಹಣ ಮಾಡಿರುವ ಘಟನೆಗೆ...