Home namma chikmagalur chikamagalur ಪ್ರಾಣೇಶ್ ರಾಜಕೀಯ ಪೌರಷ ಕಟ್-ಉಪ ಸಭಾಪತಿ ಸ್ಥಾನ ಔಟ್?
chikamagalurHomeLatest Newsnamma chikmagalur

ಪ್ರಾಣೇಶ್ ರಾಜಕೀಯ ಪೌರಷ ಕಟ್-ಉಪ ಸಭಾಪತಿ ಸ್ಥಾನ ಔಟ್?

Share
Share

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನದಿಂದ ಪ್ರಾಣೇಶ್ ಅನಿವಾರ್ಯವಾಗಿ ಇಳಿಯಬೇಕಾಗಿದೆ. ಪ್ರಾಣೇಶ್ ಗೆ ಉಪ ಸಭಾಪತಿ ಸ್ಥಾನ ಬಯಸದೇ ಬಂದ ಭಾಗ್ಯ. ಧರ್ಮೇಗೌಡರ ಆಕಸ್ಮಿಕ ಸಾವಿನಿಂದಾಗಿ ಪ್ರಾಣೇಶ್ ಗೆ ಅವಕಾಶ ದೊರೆಯಿತು. ಈಗ ಕಾಲ ಚಕ್ರ ಉರುಳಿದೆ ಆಕಸ್ಮಿಕವಾಗಿ ಉಪ ಸಭಾಪತಿ ಸ್ಥಾನ ಕಟ್ ಆಗುತ್ತದೆ.

ವಿಧಾನ ಪರಿಷತ್ ನಲ್ಲಿ ಬಿಜೆಪಿ ಮತ್ತು ದಳದ ಹೊಂದಾಣಿಕೆಯಿಂದಾಗಿ ಬಹುಮತ ಪಡೆದಿತ್ತು ಹೀಗಾಗಿ ಬಿಜೆಪಿಯ ಹೊರಟ್ಟಿ ಸಭಾಪತಿಯಾದರೆ ದಳದ ಧರ್ಮೇಗೌಡರು ಉಪ ಸಭಾಪತಿಯಾದರು ಆಕಸ್ಮಿಕವಾಗಿ ಅಸುನೀಗಿದ್ದು ಪ್ರಾಣೇಶ್ ಉಪ ಸಭಾಪತಿ ಸ್ಥಾನ ದೊರೆಯಿತು.

ಬಿಜೆಪಿ ಮತ್ತು ದಳದ ವಿಧಾನ ಪರಿಷತ್ ಸದಸ್ಯರ ಸಂಖ್ಯೆ 27 ಆದರೆ ಕಾಂಗ್ರೆಸ್ ನಾಮನಿರ್ದೇಶನ ಗೊಂಡರೆ 43 ಸ್ಥಾನಕ್ಕೆ ಏರಿಕೆ ಆಗಲಿದೆ ಮುಂದಿನ ಅಧಿವೇಶನದಲ್ಲಿ ಹೊರಟ್ಟಿ ಮತ್ತು ಪ್ರಾಣೇಶ್ ಸ್ಥಾನಕ್ಕೆ ಕಾಂಗ್ರೆಸ್ ನವರು ಆಯ್ಕೆಯಾಗಲಿದ್ದಾರೆ.

ಪ್ರಾಣೇಶ್ ವಿಧಾನ ಪರಿಷತ್ ಸ್ಥಾನ ಈಗ ಹೋಗುತ್ತದೆ ಎಂದು ಕತ್ತು ಎತ್ತಿ ನೋಡುತ್ತಿದ್ದವರು ಸದ್ಯ ಉಪ ಸಭಾಪತಿ ಸ್ಥಾನ ಹೋಯಿತು ಎಂದು ಹಾಲು ಕುಡಿಯಬಹುದು.ವಿಧಾನ ಪರಿಷತ್ ಗೆ ಆಯ್ಕೆ ಆಗಿರುವ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದ ಸೆಣಸಾಡಿ ತೀರ್ಪು ಕೂಡ ಬರಬೇಕಿತ್ತು ಆದರೆ ತೀರ್ಪು ಬರಲಿಲ್ಲ ಎಂದು ವಿಲ, ವಿಲ ಎನ್ನುತ್ತಿರುವ ಗಾಯಿತ್ರಿ ಶಾಂತೇಗೌಡ ಯಾವಾಗ ಬರುತ್ತದೆ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ.ಪ್ರಾಣೇಶ್ ನಾಮನಿರ್ದೇಶನ ಸದಸ್ಯರ ಮತ ಪಡೆದಿರುವುದು ಅಕ್ರಮ ಚುನಾವಣೆಯಾಗಿದೆ ಎಂದು ತಕರಾರು ಸಲ್ಲಿಸಿದ್ದರು. ಹೀಗಾಗಿ ಪ್ರಾಣೇಶ್ ಗ್ರೇಸ್ ಮಾರ್ಕ್ಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.

ಪ್ರಾಣೇಶ್ ಕಳೆದ ಹತ್ತು ವರ್ಷಗಳಿಂದ ವಿಧಾನ ಪರಿಷತ್ ಸದಸ್ಯ ನಯಾ ಪೈಸೆಯಷ್ಟು ಕೆಲಸ ಮಾಡಲಿಲ್ಲ ಎಂದು ಬಿಜೆಪಿಯವರು ಪಿಟಿ,ಪಿಟಿ ಎನ್ನುತ್ತಿದ್ದಾರೆ.ಪ್ರಾಣೇಶ್ ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸಿದರೆ ರಾಜಕೀಯವಾಗಿ ಔಟ್ ಆಗುವುದು ಖಚಿತ.

ಪ್ರಾಣೇಶ್ ಉಪ ಸಭಾಪತಿ ಸ್ಥಾನ ಕಳೆದು ಕೊಂಡರೆ ಗಾಯಿತ್ರಿ ಶಾತೇಗೌಡ ಖುಷಿ ಪಡ ಬೇಕು ಆದರೆ ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿಗೆ ಖುಷಿಯೋ,ಖುಷಿ.ಏಕೆ ಎಂಬುದನ್ನು ಅವರನ್ನೇ ಕೇಳ ಬೇಕು.ಒಟ್ಟಾರೆ ಪ್ರಾಣೇಶ್ ರಾಜಕೀಯವಾಗಿ ರಿಸ್ಕ್ ತೆಗೆದುಕೊಳ್ಳುವವರಲ್ಲ ಹೀಗಾಗಿ ರಾಜಕೀಯವಾಗಿ ಔಟ್ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ.

Pranesh Politician Cut-Out Vice Chairman?

Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...