ಚಿಕ್ಕಮಗಳೂರು : ನಿರೀಕ್ಷೆಯಂತೆ ಫೆಂಗಲ್ ಚಂಡಮಾರುತದ ಎಫೆಕ್ಟ್ ಜಿಲ್ಲೆಯಲ್ಲಿ ಮಳೆ ಆರ್ಭಟ ತಂದಿದೆ.
ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರವಾಗಿ ಮಳೆ ಸುರಿದಿದೆ, ಅದರಲ್ಲೂ ಕೊಟ್ಟಿಗೆಹಾರ ಚಾರ್ಮಾಡಿ ಘಾಟ್, ಬಣಕಲ್, ಬಾಳೂರು ಭಾಗದಲ್ಲಿ ಭಾರೀ ಮಳೆ ಬೀಳುತ್ತಿದೆ.
ಚಿಕ್ಕಮಗಳೂರು ನಗರದಲ್ಲೂ ಕೂಡ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನದ ಅಸ್ತವ್ಯಸ್ತಗೊಂಡಿದೆ, ಬೆಳಗ್ಗೆ ಯಿಂದಲೂ ಮಲೆನಾಡಲ್ಲಿ ಮೋಡ ಕವಿದ ವಾತಾವರಣ ಇದ್ದು ಸಂಜೆ ಬಳಿಕ ಮಲೆನಾಡಿನ ಹಲವು ಭಾಗದಲ್ಲಿ ದಿಢೀರ್ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು, ಮಳೆಯ ಕಾರಣ ಕೊಯ್ಲಿಗೆ ಬಂದಿರೋ ಕಾಫಿ ಹಾನಿಯಾಗುತ್ತಿರುವುದನ್ನು ಕಂಡು ಬೆಳೆಗಾರರು ಕಂಗಾಲಾಗಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಬಿದ್ದಿರುವ ಈ ಮಳೆ ಕಾಫಿ ಮೇಲಂತು ತೀರ ವ್ಯತಿರಿಕ್ತ ಪರಿಣಾಮ ಬೀರಿದೆ. ಚಿಕ್ಕಮಗಳೂರು ಮೂಡಿಗೆರೆ ತಾಲೂಕುಗಳಲ್ಲಿ ಅಲ್ಲದೇ ಬೇರೆ ತಾಲ್ಲೂಕಿನ ಕೆಲವೆಡೆ ಸಹಾ ವರುಣ ಅಬ್ಬರಿಸಿದ್ದಾನೆ, ಮುನ್ಸೂಚನೆಯಂತೆ ನಾಳೆ ಶಾಲೆಗಳಗೆ ರಜೆ ಘೋಷಿಸಿದ್ದ ಜಿಲ್ಲಾಡಳಿತ ಬೇರೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ .
Leave a comment