Home namma chikmagalur chikamagalur ನೂತನ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅಧಿಕಾರ ಸ್ವೀಕಾರ
chikamagalurHomeLatest Newsnamma chikmagalur

ನೂತನ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅಧಿಕಾರ ಸ್ವೀಕಾರ

Share
Share

ಚಿಕ್ಕಮಗಳೂರು: ಕಾಫಿನಾಡಿನ ನೂತನ ಜಿಲ್ಲಾಧಿಕಾರಿಯಾಗಿ ಭನ್ವರ್ ಸಿಂಗ್ ಮೀನಾ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲಾಧಿಕಾರಿ ಎಂ.ಎನ್. ನಾಗರಾಜ್ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ತಮ ಆಡಳಿತ ನೀಡುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಅಭಿವೃದ್ಧಿಗಾಗಿ ಸಿಇಒ, ಡಿಎಫ್‌ಒ ಮತ್ತು ಎಸ್ಪಿ ಅವರನ್ನೊಳಗೊಂಡ ಉತ್ತಮ ತಂಡದೊಂದಿಗೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಭನ್ವ‌ರ್ ಸಿಂಗ್ ಮೀನಾ ಅವರು 2017ರ ಬ್ಯಾಚ್‌ ನ ಐಎಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಬೆಳಗಾವಿಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಆನಂತರ ಬಸವಕಲ್ಯಾಣದಲ್ಲಿ ಎಸಿಯಾಗಿ, ಕೊಡಗು ಜಿಲ್ಲಾ ಪಂಚಾಯತ್‌ನಲ್ಲಿ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಹಾಗೂ ಬಾಗಲಕೋಟೆಯಲ್ಲೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಇತ್ತೀಚೆಗೆ ಕಲಬುರಗಿ ಜಿಲ್ಲೆಯಲ್ಲಿ ಕೆಲಸ ಮಾಡಿದ ನಂತರ ಇದೀಗ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜಿಲ್ಲೆಯ ಎಡಿಸಿ, ಎಸಿ ಸೇರಿದಂತೆ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯ ಸಮಸ್ಯೆಗಳು ಮತ್ತು ಆದ್ಯತೆಗಳ ಕುರಿತು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

New District Collector Bhanwar Singh Meena assumes office

Share

Leave a comment

Leave a Reply

Your email address will not be published. Required fields are marked *

Don't Miss

ನಕಲಿ ಐಎಎಸ್ ಅಧಿಕಾರಿ ಮಿಥುನ್ ನಿಂದ ವಕೀಲರಿಗೆ ವಂಚನೆ

ಚಿಕ್ಕಮಗಳೂರು: ಕಾಫಿನಾಡಿನ ಮೆಡಿಕಲ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ನಕಲಿ ಐಎಎಸ್ ಅಧಿಕಾರಿ ಮಿಥುನ್ ವಂಚನೆಯ ಒಂದೊಂದೇ ಕರಾಳ ಮುಖಗಳು ಈಗ ಬಯಲಾಗುತ್ತಿವೆ. ಕೇವಲ ಉದ್ಯಮಿಗಳನ್ನಷ್ಟೇ ಅಲ್ಲದೆ, ಕಾನೂನು ಅರಿವಿರುವ ವಕೀಲರನ್ನೂ...

ಲೋಕಾಯುಕ್ತಾ ಬಲೆಗೆ ಲಿಂಗದಳ್ಳಿ ಆರ್.ಐ.

ತರೀಕೆರೆ: ರಮೇಶ ಲಿಂಗದಳ್ಳಿ ಜೊತೆಗೆ ಅಮೃತಾಪುರ ಇನ್ ಛಾರ್ಜ್ ಕರ್ತವ್ಯ ನಿರ್ವಾಣೆ ಮಾಡುವಾಗ ರೈತ ಕುಮಾರ್ ಎಂಬುವರಿಂದ ಲಂಚ ಪಡೆಯುತ್ತಿದಾಗ ‌ಆರ್.ಐ.ರಮೇಶ್ ಮತ್ತು ಸಹಾಯಕ ಸಂತೋಷ ನಾಯ್ಕ ಲೋಕಾಯುಕ್ತಾ ಬಲೆಗೆ ಬಿದ್ದಿದ್ದಾರೆ....

Related Articles

ಗ್ರಾಮೀಣ ಪ್ರದೇಶದಲ್ಲಿ ಅರಳಿದ “ತನ್ವಿತಾ” ಎಂಬ ಐ.ಐ.ಟಿ.ಪ್ರತಿಭೆ

ಅಜ್ಜಂಪುರ: ಅಜ್ಜಂಪುರ ಎಂದರೆ ಜಾನಪದ ಕಲೆಗಳ ತವರೂರು, ನಾಟಕ ಪ್ರತಿಭೆ, ಸಾಹಿತ್ಯ, ಸಂಸ್ಕೃತಿಗಳ ನೆಲೆವೀಡು ಅಂದು...

ನಾಮಫಲಕದಲ್ಲಿ ಕನ್ನಡ ಖಡ್ಡಾಯಕ್ಕೆ ಆಗ್ರಹಿಸಿ ಕನ್ನಡ ಸೇನೆ ಮನವಿ

ಚಿಕ್ಕಮಗಳೂರು: ಕನ್ನಡ ನಾಮಫಲಕದಲ್ಲಿ ಶೇ. ೬೦ ಮತ್ತು ಆಂಗ್ಲಭಾಷೆಗೆ ಶೇ. ೪೦ ರಷ್ಟು ಇರಬೇಕೆಂದು ರಾಜ್ಯ...

ಜಿಂಕೆ ಬೇಟೆ ಮೂವರ ನ್ಯಾಯಾಂಗ ಬಂಧನ

ಚಿಕ್ಕಮಗಳೂರು: ಜಿಂಕೆ ಜಾತಿಯ ವನ್ಯಪ್ರಾಣಿಯೊಂದನ್ನು ಬೇಟೆಯಾಡಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ...

ಮೂರು ವರ್ಷಗಳ ಅವಧಿಯಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ

ಚಿಕ್ಕಮಗಳೂರು: ಮೂರು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ರಸ್ತೆ ಅಭಿವೃದ್ಧಿ, ಸೇತುವೆ, ಬಸ್ ನಿಲ್ದಾಣ ನಿರ್ಮಾಣ ಸೇರಿ...