Home Crime News ಸೋದರ ಮಾವನ ಮೇಲೆ ಮನಸೊ ಇಚ್ಚೆ ಲಾಂಗ್ ಬೀಸಿದ ಭೂಪ
Crime News

ಸೋದರ ಮಾವನ ಮೇಲೆ ಮನಸೊ ಇಚ್ಚೆ ಲಾಂಗ್ ಬೀಸಿದ ಭೂಪ

Share
Share

ಚಿಕ್ಕಮಗಳೂರು : ತಾಯಿ ಮನೆಗೆ ಬರಲಿಲ್ಲ ಎಂದು ಅಳಿಯ ಮಾವನ ಮೇಲೆ ಮಚ್ಚು ಬೀಸಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದ ವಿಜಯಲಕ್ಷ್ಮಿ ಟಾಕೀಸ್ ಬಳಿ ನಡೆದಿದೆ. ಕಡೂರು ಪಟ್ಟಣದಲ್ಲಿ ಆಟೋ ಓಡಿಸುತ್ತಿರುವ ಭರತ್ ಮಾವನ ಮೇಲೆ ಮಚ್ಚು ಬೀಸಿದ ಯುವಕ. ಭರತ್ ತಾಯಿ ಗಂಡನ ಜೊತೆ ಜಗಳವಾಡಿ ತವರು ಸೇರಿದ್ದರು. ಗಂಡನ ಮನೆಗೆ ಬಂದಿರಲಿಲ್ಲ. ಮಗ ಭರತ್ ಅಮ್ಮನಿಗೆ ಮನೆಗೆ ಬರುವಂತೆ ಹೇಳಿದ್ದನು. ಜೊತೆಗೆ, ಅಮ್ಮನನ್ನು ಮನೆಗೆ ಕಳುಹಿಸುವಂತೆ ಮಾವ ಮಹಾಲಿಂಗನಿಗೂ ಹೇಳಿದ್ದನು. ಆದರೂ, ತಾಯಿ ಗಂಡನ ಮನೆಗೆ ಹೋಗಿರಲಿಲ್ಲ. ಈ ಬಗ್ಗೆ ಭರತ್ ಮಾವ ಮಹಾಲಿಂಗ ಭರತ್ ಹಾಗೂ ಆತನ ತಂದೆ ರಾಮಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ನೀವು ನನ್ನ ತಂಗಿಗೆ ಸಾಕಷ್ಟು ಹಿಂಸೆ ನೀಡಿದ್ದೀರಾ. ಹಾಗಾಗಿ ಅವಳನ್ನ ಕಳಿಸುವುದಿಲ್ಲ. ಅಪ್ಪ-ಮಗ ಇಬ್ಬರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದನು.

ಆದರೂ, ಭರತ್ ಮೇಲಿಂದ ಮೇಲೆ ಫೋನ್ ಮಾಡಿ ಅಮ್ಮನನ್ನು ಕಳುಹಿಸುವಂತೆ ಬಲವಂತ ಮಾಡಿದ ಪರಿಣಾಮ ಮಾವ ಮಹಾಲಿಂಗ ಡಿಸೆಂಬರ್ 31ರಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡಿದರು ಎಂಬ ಸಿಟ್ಟಿನಿಂದ ಭರತ್ ಹಾಡಹಗಲೇ ನಡು ರಸ್ತೆಯಲ್ಲಿ ಮಾವನ ಮೇಲೆ ಮನಸ್ಸೊ ಇಚ್ಚೆ ಮಚ್ಚು ಬೀಸಿದ್ದಾನೆ. ಕಡೂರು ಪಟ್ಟಣದಲ್ಲಿ ಆಟೋ ಡ್ರೈವರ್ ವೃತ್ತಿ ಮಾಡುತ್ತಿರುವ ಭರತ್ ಆಟೋ ಹಿಂದೆ ಲಾಂಗ್ ಇಟ್ಟು ಮಾವನನ್ನ ಹುಡುಕಾಡಿದ್ದಾನೆ. ಕಡೂರು ಪಟ್ಟಣದ ವಿಜಯಲಕ್ಷ್ಮಿ ಟಾಕೀಸ್ ಬಳಿ ಕ್ಯಾಂಟೀನ್ ಹತ್ತಿರ ಟೀ ಕುಡಿಯುತ್ತಿದ್ದ ಮಾವನ ಮೇಲೆ ಮನಸ್ಸೊ ಇಚ್ಛೆ ಲಾಂಗ್ ಬೀಸಿದ್ದಾನೆ. ಲಾಂಗ್ ಬೀಸಿದ ಬಳಿಕ ರಾಜರೋಷವಾಗಿ ಬಂದು ಆಟೋದಲ್ಲಿ ಲಾಂಗ್ ಇಟ್ಟುಕೊಂಡು ವಾಪಸ್ ಹೋಗಿದ್ದಾನೆ.

ಹಲ್ಲೆಗೊಳಗಾದ ಭರತ್ ಮಾವ ಮಹಾಲಿಂಗ ಅವರ ಸ್ಥಿತಿ ಗಂಭೀರವಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಡೂರು ಪೊಲೀಸರು ಅಪ್ಪ ರಾಮಸ್ವಾಮಿ ಹಾಗೂ ಮಗ ಭರತ್ ನನ್ನ ವಶಕ್ಕೆ ಪಡೆದು ಕೋರ್ಟಿಗೆ ಹಾಜರುಪಡಿಸಿದ್ದಾರೆ.‌ ನ್ಯಾಯಾಲಯ ಇಬ್ಬರಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಬರೋಬ್ಬರಿ 50 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿ...

Related Articles

ಕೋಟ್ಯಂತರ ರೂಪಾಯಿ ವಂಚಿಸಿದ ನಕಲಿ ಲೇಡಿ ಪಿಎಸ್‌ಐ ಬಂಧನ

ಚಿಕ್ಕಮಗಳೂರು: ತಾನು ಬೆಂಗಳೂರಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ, ಚಿನ್ನ, ಹಣ, ಮೊಬೈಲ್ ಹಾಗೂ ಕಾರು...

ದೊಣ್ಣೆಯಿಂದ ಹಲ್ಲೆಯಾದ ಭಿಕ್ಷುಕನ ಸಾವು

ತರೀಕೆರೆ: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಸುಮಾರು 65 ವರ್ಷದ ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು, ಕಾಲಿನಿಂದ...

ಅಜ್ಜಂಪುರದಲ್ಲಿ ಅಪರಿಚಿತ ವಾಹನ ಡಿಕ್ಕಿಗೆ ವ್ಯಕ್ತಿ ಸಾವು

ಅಜ್ಜಂಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಾಲಕ ವಾಹನ...

ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಸಲು ಸೆ.29ರಂದು ಧರಣಿ

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ...