Home namma chikmagalur chikamagalur ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ
chikamagalurHomeLatest Newsnamma chikmagalur

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

Share
Share

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಸರ್ಕಾರದ ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಏಳನೇ ಕರಡು ಅಧಿಸೂಚನೆ ಹೊರಡಿಸಿರುವುದು ಮಲೆನಾಡಿನ ಜನರಿಗೆ ಮಾರಕವಾಗಿ ಪರಿಣಮಿಸಿದೆ. ಒಂದು ವೇಳೆ ಈ ಪ್ರದೇಶವನ್ನು ಪರಿಸರ ಸೂಕ್ಮಪ್ರದೇಶ ಎಂದು ಘೋಷಿಸಿದ್ದೇ ಆದಲ್ಲಿ ಮಲೆನಾಡಿನ ಜನ ಬೀದಿಗೆ ಬರಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹೊಲದಗದ್ದೆ ಗಿರೀಶ್ ಪ್ರಕಟಣೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಕರಡು ಅಧಿಸೂಚನೆಯಂತೆ ಚಿಕ್ಕಮಗಳೂರು ಜಿಲ್ಲೆಯ ೧೩೭ ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರಲಿವೆ. ಒಂದು ವೇಳೆ ಇದು ಜಾರಿಯಾಗಿದ್ದೇ ಆದಲ್ಲಿ ರೈತರು ತಮ್ಮ ಸ್ವಂತ ಜಮೀನಲ್ಲಿ ಕೃಷಿ ಮಾಡುವುದು, ಅಗತ್ಯ ವಸತಿ ನಿರ್ಮಾಣ ಮಾಡಿಕೊಳ್ಳಲು ಅಥವಾ ಕೃಷಿಯೇತರ ಉದ್ದೇಶಗಳಿಗೆ ಭೂಮಿ ಬಳಸಲು ಕಠಿಣ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪರಿಸರ ಸೂಕ್ಷ್ಮ ಪ್ರದೇಶ ಘೋ?ಣೆಯಾದಲ್ಲಿ ಈಗಾಗಲೇ ಇರುವ ಜೀವನಾಧಾರಿತ ಒತ್ತುವರಿ, ಮನೆಗಳಿಗೆ ಯಾವುದೇ ಕಾರಣಕ್ಕೂ ಹಕ್ಕುಪತ್ರ ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಭೂಮಿಯನ್ನು ಸರ್ಕಾರಕ್ಕೆ ಕೊಡುವ ಪರಿಸ್ಥಿತಿ ಬಂದರೆ ಆ ಜಾಗದ ಮಾಲೀಕರಿಗೆ ಪರಿಹಾರವೂ ಸಿಗದ ಸ್ಥಿತಿ ನಿರ್ಮಾಣವಾಗಲಿದೆ. ಮಲೆನಾಡು ಭಾಗದಲ್ಲಿ ಬೆಳೆಯುವ ರಬ್ಬರ್, ಕಾಫಿ, ಕಾಳು ಮೆಣಸು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ರಾಸಾಯನಿಕ ಅಥವಾ ರಾಸಾಯನಿಕ ಗೊಬ್ಬರ ಬಳಕೆ ಮಾಡಲು ನಿಬಂಧ ಹೇರಲಾಗುತ್ತದೆ. ಇದರಿಂದ ರೈತರು ಬೆಳೆ ಕಳೆದುಕೊಂಡು ಆರ್ಥಿಕವಾಗಿ ಸಂಕ?ಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಪ್ರಮುಖವಾಗಿ ಮಲೆನಾಡಿನ ಗ್ರಾಮಗಳಲ್ಲಿರುವ ಹಳ್ಳಿಗಳಿಗೆ ರಸ್ತೆ ಸಂಪರ್ಕ ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಕಠಿಣ ಅನುಮತಿ ಪಡೆಯಬೇಕಾಗುತ್ತದೆ. ಅಲ್ಲದೆ ಪರಿಸರ ಸೂಕ್ಷ್ಮ ಪ್ರದೇಶ ಘೋ?ಣೆಯಿಂದ ಮಲೆನಾಡು ಭಾಗದ ಭೂಮಿಯ ಮಾರಾಟ, ಖರೀದಿ ಕಡಿಮೆಯಾಗಲಿದೆ. ಇದರಿಂದ ಭೂಮಿಯ ಮೌಲ್ಯ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಭೂಮಿಯ ಮೌಲ್ಯ ಕುಸಿಯುವುದರಿಂದ ಬ್ಯಾಂಕುಗಳು ಕೃಷಿಕರಿಗೆ ಸಾಲ ನೀಡಲು ಹಿಂದೇಟು ಹಾಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಸರ ಸೂಕ್ಷ್ಮ ವಲಯ ಪ್ರದೇಶ ಘೋ?ಣೆಯಿಂದ ವನ್ಯಜೀವಿ ಮತ್ತು ಮಾನವ ಸಂಘ? ಇನ್ನ? ಹೆಚ್ಚಾಗುವುದು ಜೊತೆಗೆ ಜನರು ಬದುಕುವುದೇ ಕ?ವಾಗಲಿದೆ. ವನ್ಯಜೀವಿಗಳ ದಾಳಿಯಿಂದ ಏನಾದರೂ ಅನಾಹುತ ಸಂಭವಿಸಿದಲ್ಲಿ ಪರಿಹಾರ ಸಿಗುವುದು ಕ?ವಾಗಲಿದೆ. ಜೊತೆಗೆ ಕಾಡಿನಲ್ಲಿ ಬದುಕುತ್ತಿರುವ ಆದಿವಾಸಿಗಳು ಸ್ಥಳಾಂತಗೊಳ್ಳಬೇಕಾದ ಅಪಾಯವೂ ಇದೆ. ಮಲೆನಾಡಿನ ಕೃಷಿಕರಿಂದಲೇ ಪರಿಸರ ಉಳಿದಿದೆ. ಇಲ್ಲಿ ಕೃಷಿಕರೇ ಇಲ್ಲ ಎಂದಾದಲ್ಲಿ ಪರಿಸರದ ಮೇಲೆ ದು?ರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಮಲೆನಾಡು ಜನರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯ ಘೋ?ಣೆ ಅಧಿಸೂಚನೆ ಕೈ ಬಿಡಬೇಕು. ಇರುವ ಅರಣ್ಯ ಕಾಯ್ದೆಗಳನ್ನೇ ಬಳಸಿಕೊಂಡು ಅರಣ್ಯ ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು. ಮಲೆನಾಡು ಭಾಗದ ಜನರು ಕೂಡಲೇ ಈ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿ ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸಬೇಕು. ಜೊತೆಗೆ ರಾಜ್ಯ ಸರ್ಕಾರವೂ ವಿಧಾನ ಮಂಡಲದಲ್ಲಿ ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಬೇಕಿದೆ. ಜೊತೆಗೆ ಈ ಭಾಗದ ಸಂಸದರು ಅಧಿಸೂಚನೆ ವಿರೋಧಿಸಿ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ.

Environmentally sensitive area draft notification a thorn in the side of Malnadi

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ಇಲಿಗೆ ‘ಹಣದ ಮೋಹ’

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ...

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು...

Related Articles

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ...