Home namma chikmagalur chikamagalur ಕಾಂಪೆಸ್ಟ್-ಸಗಣಿ ಗೊಬ್ಬರ ಬಳಸಲು ಸಚಿವ ಜಾರ್ಜ್ ಸಲಹೆ
chikamagalurHomeLatest Newsnamma chikmagalur

ಕಾಂಪೆಸ್ಟ್-ಸಗಣಿ ಗೊಬ್ಬರ ಬಳಸಲು ಸಚಿವ ಜಾರ್ಜ್ ಸಲಹೆ

Share
Share

ಚಿಕ್ಕಮಗಳೂರು: ರಾಸಾಯನಿಕ ಗೊಬ್ಬರಗಳ ಅತೀ ಹೆಚ್ಚಿನ ಬಳಕೆಯಿಂದ ಮಣ್ಣಿನ ಸತ್ವ ಕಳೆದುಹೋಗಿದ್ದು, ಕಾಂಪೆಸ್ಟ್ ಮತ್ತು ಸಗಣಿ ಗೊಬ್ಬರ ಮತ್ತಿತರ ಗೊಬ್ಬರಗಳನ್ನು ಹೆಚ್ಚು ಬಳಸಿ ಮಣ್ಣಿನ ಸಾರಸರ್ವಸ್ವವನ್ನು ಹೆಚ್ಚಿಸುವ ಕಾರ್ಯ ಕೈಗೊಳ್ಳಬೇಕಿದೆ ಎಂದು ಮಾನ್ಯ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಫಿ ಮಂಡಳಿ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವತಿಯಿಂದ ಇಂದು ನಡೆದ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ(ಸಿ.ಸಿ.ಆರ್.ಐ.)ಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹೀಗೆ ಮಣ್ಣಿನ ಸತ್ವ ಹೆಚ್ಚಿಸುವ ಮೂಲಕ ಕಾಫಿ ಮತ್ತಿತರ ಕೃಷಿ ಸಂಬಂಧಿತ ಬೆಳೆಗಳ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಇವತ್ತು ಬೆಳೆಗಾರರು ಸ್ವಲ್ಪ ಸಂಕಷ್ಟದಲ್ಲಿದ್ದಾರೆ. ಕಾಫಿಗೆ ಉತ್ತಮ ಬೆಲೆ ಬಂದಿದ್ದರೂ ಹಲವಾರು ವರ್ಷಗಳ ಕಾಲ ಬಹಳಷ್ಟು ಶ್ರಮ ವಹಿಸಿ ಕಾಫಿ ಕೃಷಿಯನ್ನು ನಿರ್ವಹಿಸಿ ಕೆಲವೇ ಸಮಯದಲ್ಲಿ ಬಿಳಿ ಕಾಂಡ ಕೊರಕದಂತಹ ರೋಗದಿಂದಾಗಿ ಅವುಗಳನ್ನು ಕಿತ್ತು ಸುಡುವಂತಹ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ. ಜೊತೆಗೆ ಹವಾಮಾನ ವೈಪರೀತ್ಯ, ಬೇರೆ ಬೇರೆ ರೋಗಗಳ ಕಾರಣದಿಂದ ಬೆಳೆಗಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬಹುಶಃ ಕಾಫಿ ಮಂಡಳಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರೊಂದಿಗೆ ಈ ಬಗ್ಗೆ ಮಾತನಾಡಿದಾಗ, ಕಾಂಡಕೊರಕ ನಿರೋಧಕ ಕಾಫಿ ತಳಿಯನ್ನು ಅಭಿವೃದ್ಧಿಪಡಿಸುವ ಮಾತು ಹೇಳಿದ್ದಾರೆ. ಇದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.

ಕೇಂದ್ರದ ನವೀಕರಿಸಿದ ಇಂಧನ ಸಚಿವರಾಗಿರುವ ಪ್ರಹ್ಲಾದ ಜೋಷಿಯವರು ಕುಸುಂ ಬಿ. ಮತ್ತು ಸಿ. ಯೋಜನೆಗಳಿಗೆ ಸಂಬಂಧಿಸಿದಂತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕುಸುಂ ಸಿ. ಹಲವಾರು ವರ್ಷಗಳಿಂದ ಇದ್ದರೂ ಸಹ ಅದು ಲ್ಯಾಪ್ಸ್ ಆಗಿತ್ತು. ಕುಸುಂ ಬಿ. ಯೋಜನೆಯಡಿ ೪೦ ಸಾವಿರ ಪಂಪ್‌ಸೆಟ್‌ಗಳು ಬೇಕೆಂಬ ಬೇಡಿಕೆ ಮುಂದಿಟ್ಟಾಗ ಅದು ಲ್ಯಾಪ್ಸ್ ಆಗಿದ್ದರೂ ಯಾವುದೇ ಆಕ್ಷೇಪಣೆ ಇಲ್ಲದೆ ತಕ್ಷಣವೇ ವಿಸ್ತರಿಸಿಕೊಟ್ಟಿದ್ದಾರೆ. ಕುಸುಂ ಸಿ. ಯೋಜನೆಯ ಬಗ್ಗೆ ಹೇಳುವುದಾದರೆ, ನಮ್ಮ ನೀರಾವರಿ ಪಂಪ್‌ಸೆಟ್‌ಗಳು ಇರುವಲ್ಲಿ ಅಲ್ಲೇ ಸೋಲಾರ್ ಮೂಲಕ ವಿದ್ಯುತ್ ಒದಗಿಸಿ ಜನರಿಗೆ ನೀಡಲಾಗುತ್ತಿದೆ. ೨೦೦೪ ರಿಂದ ಅಕ್ರಮ-ಸಕ್ರಮ ಯೋಜನೆ ವರ್ಷದ ಅವಧಿಯ ಮಿತಿ ಇತ್ತು. ಅದನ್ನು ಸಚಿವ ಸಂಪುಟದ ಮುಂದಿಟ್ಟು ತಕ್ಷಣವೇ ಸಂಪರ್ಕ ಒದಗಿಸಲು ತೀರ್ಮಾನಿಸಲಾಗಿದ್ದು, ಸುಮಾರು ೪,೫೦,೦೦೦ ಅರ್ಜಿಗಳು ಇದ್ದು, ಈಗಾಗಲೇ ಅವುಗಳಲ್ಲಿ ಸುಮಾರು ೩,೫೦,೦೦೦ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.

ಏಳು ಕಾಫಿ ಬೀಜಗಳನ್ನು ತಂದು ಬಾಬಾಬುಡನ್‌ಗಿರಿ ಪಕ್ಕದಲ್ಲಿ ಬಿತ್ತನೆ ಮಾಡಿ ಬೆಳೆಸಿರುವುದು ಬಾಬಾಬುಡನ್ ಅವರು. ಇಡೀ ಜಗತ್ತಿನಲ್ಲಿ ಭಾರತದ ಕಾಫಿ ಪ್ರಸಿದ್ಧಿಯಾಗಲು ಅವರೇ ಮೂಲ ಕಾರಣ. ಅಂದು ಕಾಫಿ ಬೆಳೆಗಾರರು ಸಾಕಷ್ಟು ಪ್ರಮಾಣದಲ್ಲಿ ಇರಲಿಲ್ಲ. ಐವರು ಯೂರೋಪಿಯನ್ ಬೆಳೆಗಾರರು ಕಾರ್ಯ ನಿರ್ವಹಿಸಿ ಕಾಫಿ ಕಂಪನಿಯನ್ನು ಕಟ್ಟಿ ಬೆಳೆಸಿದರು. ಕಾಫಿ ಮಂಡಳಿ ಸ್ಥಾಪನೆಯಲ್ಲೂ ಅವರು ಶ್ರಮ ವಹಿಸಿದ್ದಾರೆ. ಇಡೀ ಟಾಟಾ ಕಾಫಿ ಜಗತ್ಪ್ರಸಿದ್ಧಿಯಾಗಲು ಆ ಐವರು ಯೂರೋಪಿಯನ್ ಬೆಳೆಗಾರರು ಕಾರಣ ಎಂಬುದನ್ನು ಮರೆಯುವಂತಿಲ್ಲ ಎಂದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಇಡೀ ದೇಶದಲ್ಲಿ ಈ ಜಿಲ್ಲೆ ಬೆಳೆಯುತ್ತಿರುವ ೩,೬೦,೦೦೦ ಟನ್ ಕಾಫಿ ಆಷ್ಟು ಶೀಘ್ರ ಉತ್ತಮ ಬ್ರ್ಯಾಂಡಿಂಗ್‌ನೊಂದಿಗೆ ೭ ಲಕ್ಷ ಟನ್ ಕ್ರಮಿಸಲಿ ಎಂದು ಆಶಯ ವ್ಯಕ್ತಪಡಿಸಿದರು. ಕಾಫಿ ಬೆಳೆಗಾರರು ಹಾಗೂ ಉದ್ದಿಮೆದಾರರ ಆಕಾಂಕ್ಷೆಗಳಿಗೆ ಜನಪ್ರತಿನಿಧಿಗಳಾದ ತಾವೆಲ್ಲರೂ ಪಕ್ಷಾತೀತವಾಗಿ ಸ್ಪಂದಿಸಿದಾಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಬೆಳಗಾವಿ ಅಧಿವೇಶನದಲ್ಲಿ ೨೫ ಎಕರೆ ಮೇಲ್ಪಟ್ಟ ಒತ್ತುವರಿ ಪ್ರಕರಣಗಳಲ್ಲಿ ಗುತ್ತಿಗೆಗೆ ನೀಡಬೇಕೆಂಬ ವಿಚಾರದ ಬಗ್ಗೆ ಸ್ಪಂದಿಸಲಾಗಿದ್ದು, ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ.

ಯಾವುದೇ ಕಾಫಿ ಉದ್ಯಮ ಮಾತ್ರವಲ್ಲ, ಅಭಿವೃದ್ಧಿಯಾಗಲು ಮೂಲ ಸೌಕರ್ಯ ಅಭಿವೃದ್ಧಿಯಾಗುವ ಅವಶ್ಯಕತೆ ಇರುತ್ತದೆ. ಕಾರ್ಮಿಕರ ಸಮಸ್ಯೆ, ಬೆಲೆ ಮಾತ್ರವಲ್ಲ, ಉದ್ಯಮಿಗಳು ಕಾಫಿಯನ್ನು ಹೊರಕ್ಕೆ ಸಾಗಿಸುವ ಸಂದರ್ಭದಲ್ಲಿ ಅವರಿಗೆ ಉತ್ತಮವಾದ ರಸ್ತೆ ಹಾಗೂ ರೈಲ್ವೆ ಸಂಪರ್ಕದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಂಸದರು, ಕೇಂದ್ರ ಹಾಗೂ ರಾಜ್ಯಕ್ಕೆ ಕೊಂಡಿಯಾಗಿರುವ ಪ್ರಹ್ಲಾದ ಜೋಷಿಯವರು ಸ್ಪಂದಿಸಬೇಕೆಂದು ಕೋರಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಾನವ ಮತ್ತು ಪ್ರಾಣಿ ಸಂಘರ್ಷದಿಂದಾಗಿ ಚಿಕ್ಕಮಗಳೂರಿಗೆ ಬಹಳ ಸಮಸ್ಯೆ ಇದೆ. ಈ ಬಗ್ಗೆ ಕೇಂದ್ರದ ಮುಂದೆ ಎರಡು-ಮೂರು ಬಾರಿ ಪ್ರಸ್ತಾಪಿಸಿದ್ದು, ಈ ಬಗ್ಗೆ ರಾಜ್ಯದಿಂದ ಪ್ರಸ್ತಾವನೆಗಳು ಬರಲಿ ಎಂದು ಕೇಂದ್ರ ಮಂತ್ರಿಗಳು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಕುಳಿತು ಚರ್ಚಿಸುವುದಲ್ಲದೆ, ಕೇಂದ್ರ ಹಾಗೂ ರಾಜ್ಯದ ಒಟ್ಟು ಸಹಕಾರವಿದ್ದರೆ ಜಿಲ್ಲೆಯಲ್ಲಿರುವ ಆನೆದಾಳಿ ಮತ್ತು ವನ್ಯಪ್ರಾಣಿಗಳ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಕಾರ್ಯ ನಡೆಯಬೇಕಿದೆ ಎಂದು ಆಶಿಸಿದರು.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಟಿ.ಡಿ.ರಾಜೇಗೌಡ ಮಾತನಾಡಿ, ಪರಿಸರ ಮತ್ತು ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಬೆಳೆ. ಕಾಫಿ ಒಂದು ಲಾಭದಾಯಕ ಬೆಳೆ ಎಂದು ದೇಶದಲ್ಲೇ ಹೆಸರುವಾಸಿಯಾಗಿದ್ದರೂ ಕೂಡ ಬೆಳೆಗಾರರ ಹಿರಿಮೆ ಬಿಟ್ಟರೆ, ನಿರೀಕ್ಷಿತ ಮಟ್ಟದಲ್ಲಿ ಬದುಕುವ ಸ್ಥಿತಿಯಲ್ಲಿ ಬೆಳೆಗಾರರು ಇಲ್ಲ. ಇದು ಬಹಳ ದೊಡ್ಡ ಲಾಭದಾಯಕ ಬೆಳೆಯಲ್ಲ. ಈ ಸಂಸ್ಥೆ ಏಳು ಬೀಜದಿಂದ ಏಳು ಲಕ್ಷ ಟನ್‌ವರೆಗೆ ಬೆಳೆ ಬೆಳೆಯುವ ಸಂಕಲ್ಪ ಇರಿಸಿಕೊಂಡು ಮಂಡಳಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸದ ಸಂಗತಿ. ಬೆಲೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದ್ದರೂ ಮಳೆಯಿಂದಾಗಿ ೨೦ ಸಾವಿರ ಮೆಟ್ರಿಕ್ ಟನ್‌ನಷ್ಟು ಬೆಳೆಹಾನಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಲೆಯೂ ಕಡಿಮೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಸಚಿವರು ಸ್ಪಂದಿಸಿ ಸಹಕರಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಅಡಿಕೆ, ಉಳಿದ ತೋಟಗಾರಿಕೆ ಬೆಳೆಗಳು ಹಾಗೂ ಮಿಕ್ಕ ಕೃಷಿಗೆ ಇರುವ ರೀತಿಯಲ್ಲಿ ಕಾಫಿ ತೋಟದಲ್ಲಿರುವ ಉಪಯೋಗಿಸುವ ೧೦ ಹೆಚ್.ಪಿ. ಮೋಟಾರುಗಳಿಗೆ ಉಚಿತ ವಿದ್ಯುತ್ ಅನ್ನು ನೀಡುವಂತಹ ಆದೇಶ ಹೊರಡಿಸುವಂತೆ ಅವರು ಸರ್ಕಾರವನ್ನು ಕೋರಿದರು. ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಿ ಅಭಿವೃದ್ಧಿಪಡಿಸಲು ವಿಶೇಷ ಪ್ಯಾಕೇಜ್ ಅನ್ನು ಸರ್ಕಾರ ಈ ಭಾಗಕ್ಕೆ ನೀಡಿದರೆ ಅನುಕೂಲವಾಗುತ್ತದೆ ಎಂದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಪ್ರಾಸ್ತಾವಿಕ ಮಾತನಾಡಿ, ನಾವು ಯುವ ಬೆಳೆಗಾರರಲ್ಲಿ ಆತ್ಮವಿಶ್ವಾಸ ತುಂಬಿ ಮರಳಿ ಈ ಕೃಷಿಯತ್ತ ಬರುವಂತೆ ಅವರ ಮನವೊಲಿಸಬೇಕು. ಈ ದಿಕ್ಕಿನಲ್ಲಿ ಸಿಸಿಆರ್‌ಐ ಕಾರ್ಯ ನಿರ್ವಹಿಸುತ್ತಿದೆ. ವಿಶ್ವದ ಅತ್ಯುತ್ತಮ ಕಾಫಿಯ ಜೀನ್ ಬ್ಯಾಂಕ್ ಇಲ್ಲಿದೆ. ಈ ಬ್ಯಾಂಕ್‌ನಿಂದ ೧೩ ಅರೇಬಿಕಾ ಕಾಫಿ ತಳಿಗಳನ್ನು ಹಾಗೂ ಮೂರು ರೋಬಸ್ಟಾ ತಳಿಗಳನ್ನು ನಾವು ಬಿಡುಗಡೆ ಮಾಡಿದ್ದು, ಇಂದು ಸಹ ಎರಡು ತಳಿಗಳು ಬಿಡುಗಡೆಯಾಗಲಿವೆ. ಭವಿಷ್ಯದಲ್ಲಿ ಭಾರತದ ಕಾಫಿ ಹೇಗಿರಬೇಕೆಂಬ ಗುರಿ ಇರಿಸಿಕೊಂಡು ಆ ದಿಕ್ಕಿನಲ್ಲಿ ಸಾಗುತ್ತಿರುವುದಾಗಿ ತಿಳಿಸಿದ ಅವರು, ಇನ್ನು ಕೆಲವೇ ವರ್ಷದಲ್ಲಿ ವಿಶ್ವದ ನಾಲ್ಕು ಅಥವಾ ಐದನೇ ಹೆಚ್ಚು ಕಾಫಿ ಉತ್ಪಾದಕನಾಗಿ ಗುರುತಿಸಿಕೊಳ್ಳಲಿರುವ ಭಾರತವು ವಿಶ್ವದ ಬಹುದೊಡ್ಡ ನಾಲ್ಕನೇ ಅತೀ ದೊಡ್ಡ ರಫ್ತುದಾರ ಎನಿಸಿಕೊಳ್ಳಲಿದೆ ಎಂದು ಹೇಳಿದರು.

Minister George suggests using compost and manure

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷ

ಕೊಟ್ಟಿಗೆಹಾರ : ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಮಳೆಗಾಲದ ಹಿನ್ನೆಲೆ ಮತ್ತು ಕಡಿಮೆಯಾದ ದೃಶ್ಯತೆಯಿಂದ ಪ್ರವಾಸಿಗರಿಗೆ ಹೆಚ್ಚಿನ ಅಪಾಯ ಸಾಧ್ಯತೆ ಇರುವ ಕುರಿತು ಆತಂಕ...

ತೀವ್ರಗೊಂಡ ಉದ್ಯಮಿ ಪತ್ನಿಯ ಆತ್ಮಹತ್ಯೆ ಪ್ರಕರಣ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದ್ದು ನಗರದ ಉದ್ಯಮಿ ರಾಜೇಶ್ ಅವರ ಪತ್ನಿ ಸುಮ (55) ಆಲೇನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಅವರು...

Related Articles

ಅತ್ಯಾಚಾರ ಆರೋಪಿಗೆ 20 ವರ್ಷ ಕಠಿಣ ಸಜೆ-ದಂಡ

ಚಿಕ್ಕಮಗಳೂರು: ಅಪ್ರಾಪ್ತೆಯೊಬ್ಬಳು ಗರ್ಭಿಣಿಯಾಗಲು ಕಾರಣನಾದ ಆರೋಪಿಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ಎಫ್.ಟಿ.ಎಸ್.ಈ-೧ರ...

ನರೇಂದ್ರ ಮೋದಿ ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ

ಚಿಕ್ಕಮಗಳೂರು : ಸಾರ್ವತ್ರಿಕ ಚುನಾವಣೆಗಳ ಮೂಲಕ ಭಾರತದ ಅತಿ ಹೆಚ್ಚುಕಾಲ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ...

ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು

  ಚಿಕ್ಕಮಗಳೂರು : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ.ಹರಿಪ್ರಸಾದ್ ಅವರ ಅಧಿಕಾರ ಸ್ವೀಕಾರ ಸಮಾರಂಭ...

ವಿದ್ಯುತ್ ಕ್ಷೇತ್ರ ಖಾಸಗಿಕರಣಕ್ಕೆ ರೈತ ಸಂಘ ವಿರೋಧ

ಚಿಕ್ಕಮಗಳೂರು : ವಿದ್ಯುತ್ ಕ್ಷೇತ್ರವನ್ನು ಟಾಟಾ ಪವರ್ ಕಂಪನಿಗೆ ನೀಡುವ ಮೂಲಕ ಖಾಸಗಿಕರಣಗೊಳಿಸುವ ನಿರ್ಧಾರವನ್ನು ಖಂಡಿಸುವುದಾಗಿ...