Home ಅಪ್ಪಟ ಗ್ರಾಮೀಣ ಪ್ರತಿಭೆ ಹೆಚ್.ಎಂ.ರವಿಗೆ ಜಾನಪದ ಅಕಾಡೆಮಿ ಪ್ರಶಸ್ತಿ.
HomeKadurLatest Newsnamma chikmagalur

ಅಪ್ಪಟ ಗ್ರಾಮೀಣ ಪ್ರತಿಭೆ ಹೆಚ್.ಎಂ.ರವಿಗೆ ಜಾನಪದ ಅಕಾಡೆಮಿ ಪ್ರಶಸ್ತಿ.

Share
Share

ಕಡೂರು: ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿರುವ ಹೆಚ್.ಎಂ.ರವಿಗೆ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಡೂರು ತಾಲ್ಲೂಕಿನ ಅಂತರಘಟ್ಟೆ ಸಮೀಪವಿರುವ ಕುಗ್ರಾಮ ಹುಲಿಹಳ್ಳಿಯ ರವಿಗೆ ಓದು ತಲೆಗತ್ತಲಿಲ್ಲಾ,ಒಂಬತ್ತನೇ ತರಗತಿಗೆ ಗುಡ್ ಬೈ ಹೇಳಿ ಊರಿನಲ್ಲಿ ಕುಣಿಯುತ್ತಿದ್ದ ವೀರಗಾಸೆ ನೋಡಿ ಆಕರ್ಷಿಕನಾದವ ಅಂದಿನಿಂದ ಇಂದಿನವರೆಗೂ “ವೀರಗಾಸೆ” ಯಲ್ಲಿ ಬೆರೆತು ಹೋಗಿದ್ದಾರೆ.

ಒಂದು ಕಡೆ ಬಡತನ ಜೊತೆಗೆ ಕುಗ್ರಾಮ ಮತ್ತೊಂದು ಕಡೆ ತಲೆಗೆ ಹತ್ತದ ವಿದ್ಯೆ ಇವುಗಳನ್ನು ಮೆಟ್ಟಿ ನಿಂತು ಏನಾದರೂ ಸಾಧನೆ ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ.ಈತನ ಸಾಧನೆ ಜಾನಪದ ಅಕಾಡೆಮಿ ಮಟ್ಟಕ್ಕೆ ತಲುಪಿರುವುದೇ ರೋಚಕ.

ಸಣ್ಣಪುಟ್ಟ ಕಾರ್ಯಕ್ರಮ ಗಳಲ್ಲಿ ವೀರಗಾಸೆ ಪ್ರದರ್ಶನ ಮಾಡಿ ಅದೇ ಕಲೆಯನ್ನು ಕಸುಬು ಮಾಡಿಕೊಂಡಿರುವ ರವಿ 2004 ರಲ್ಲಿ ಯುವಜನ ಮೇಳದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವುದರಿಂದ ಪ್ರಾರಂಭವಾದ ಪ್ರಶಸ್ತಿ ಸರಮಾಲೆಗೆ ಲೆಕ್ಕವಿಲ್ಲಾ.

ಜಾತ್ರೆ, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೀರಗಾಸೆ ಪ್ರದರ್ಶನ ಮಾಡಿರುವ ಪಟ್ಟಿ ನೋಡಿದರೆ ಆಶ್ಚರ್ಯವಾಗುತ್ತದೆ.

ಹಳ್ಳಿ, ಹಳ್ಳಿ ಗ್ರಾಮ,ಗ್ರಾಮದಲ್ಲಿ ಹೋಬಳಿ ಮಟ್ಟದಿಂದ ಹಿಡಿದು ತಾಲ್ಲೂಕು ಜಿಲ್ಲೆ, ರಾಜ್ಯ, ಹೊರ ರಾಜ್ಯ, ದೇಶ,ವಿದೇಶಗಳಲ್ಲಿ ವೀರಗಾಸೆ ಪ್ರದರ್ಶನ ಮಾಡಿ ಕೀರ್ತಿ ತಂದಿದ್ದಾರೆ.ಈತನ ಬಳಿಯಿರುವ ಪ್ರದರ್ಶನಗಳ ಪಟ್ಟಿ ನೋಡಿದರೆ ಆಶ್ಚರ್ಯದ ಜೊತೆಗೆ ಕೋಟಿ ವಿದ್ಯೆಗಿಂತ ಕಲಾವಿದ್ಯೆಯೇ ಈತನನ್ನು ಬೆಳೆಸಿದೆ ಬೆಳಗಿಸಿದೆ.

ಹಲವರಿಗೆ ವೀರಗಾಸೆ ಕಲಿಸುತ್ತಿರುವ ರವಿ ವೀರಗಾಸೆಗೆ ಬೇಕಾದ ಸಲಕರಣೆಗಳನ್ನು ತಯಾರು ಮಾಡುವ ಕಲೆಗಾರಿಕೆಯನ್ನು ಕಲಿತಿರುವುದು ಮೆಚ್ಚಲೇ ಬೇಕು.

ವೀರಗಾಸೆ “ರವಿ” ಎಂದು ಕರೆಯಿಸಿ ಕೊಳ್ಳುವ ರವಿಗೆ ನನ್ನಂತೆ ಹಲವು ಯುವಕರು ಕಲೆಯನ್ನು ಕಲಿತು ಹೆಸರುಗಳಿಸಲಿ ಎಂಬ ಹಂಬಲವಿದೆ.ಅವನ ಕನಸಿ ನೆನಸಾಗಲಿ ಅವನ ಕಲೆಯ ಭವಿಷ್ಯ ಉಜ್ವಲವಾಗಲಿ ಮತ್ತಷ್ಟು ಪ್ರಶಸ್ತಿ ಮತ್ತು ಗೌರವ ಮನ್ನಣೆ ಗಳಿಸಲಿ.

H.M. Ravi Janapada Academy Award for Pure Rural Talent.

Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...