ಚಿಕ್ಕಮಗಳೂರು: ಅನ್ನ ಕೊಡುವ ರೈತರು ಹಾಗೂ ಗಡಿ ಪ್ರದೇಶ ಕಾಯುವ ಭಾರ ತೀಯ ಸೈನಿಕರು ದೇಶದ ಜೋಡೆತ್ತುಗಳಂತೆ. ಈ ವರ್ಗವನ್ನು ಸಮಸ್ತ ಭಾರತೀಯರು ಗೌರವಿಸುವ ಗುಣಗ ಳನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರುಸೇನೆ ರಾಜ್ಯಾಧ್ಯಕ್ಷ್ಷ ಬಿ.ಟಿ.ಚಂದ್ರಶೇ ಖರ್ ಹೇಳಿದರು
ನಗರದ ಚಂದ್ರಶೇಖರ್ ಆಜಾದ್‌ಪಾರ್ಕ್ ವೃತ್ತದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ಆಯೋಜಿಸಿದ್ಧ ವಿಶ್ವ ರೈತ ದಿನಾಚರಣೆ ಹಾಗೂ ನಿವೃತ್ತ ಸೈನಿಕರಿಗೆ ಗೌರವ ಸನ್ಮಾ ನ ಕಾರ್ಯಕ್ರಮದ ಉದ್ಘಾಟಿಸಿ ವಹಿಸಿ ಅವರು ಮಾತನಾಡಿ ದೇಶವು ಸರ್ವತೋಮುಖ ಅಭಿವೃದ್ದಿ ಹೊಂದಲು ರೈತರು ಮತ್ತು ಯೋಧರೆ ಪ್ರಮುಖ ಕಾರಣ. ಮ ಳೆ-ಬಿಸಿಲ್ಲದೇ ರೈತರು, ಚಳಿ-ಗಾಳಿಯನ್ನು ಲೆಕ್ಕಿಸದ ಸೈನಿಕರು ನಿಸ್ವಾರ್ಥದಿಂದ ಕಾರ್ಯನಿರ್ವಹಿಸುತ್ತಿರುವ ಕಾರಣ ಇಂದು ರಾಷ್ಟ್ರ ಸಧೃಢವಾಗಿ ನೆಲೆಯೂರು ಸಾಧ್ಯವಾಗಿದೆ ಎಂದರು.
ಹಸಿದವರಿಗೆ ಅನ್ನ ಪೂರೈಸುವ ರೈತರ ಕಾರ್ಯ ಶ್ಲಾಘನೀಯ. ರೈತರು ಮೂರೇ ತಿಂಗಳು ತಮ್ಮೆಲ್ಲಾ ವ್ಯವಸಾಯ ವೃತ್ತಿ ತ್ಯಜಿಸಿ ಕೈಕಟ್ಟಿಕೊಂಡರೆ ದೇಶವೇ ಹಸಿವು ಹಾಗೂ ಆರ್ಥಿಕ ಸಂಕಷ್ಟದಿಂದ ನಲುಗಬೇಕಾ ಗುತ್ತದೆ. ಆ ನಿಟ್ಟಿನಲ್ಲಿ ರೈತರನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸುವುದು ಸರ್ಕಾರದ ಕೆಲಸ ಎಂದರು.
ವಿಶ್ವ ರೈತ ದಿನಾಚರಣೆಯನ್ನು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಆಚರಿಸುತ್ತಿರುವುದು ಅತ್ಯಂತ ಹೆ ಮ್ಮೆಯ ಸಂಗತಿ. ರೈತ ಸಮೂಹ ಕೇವಲ ಮಾನವ ಜನಾಂಗಕ್ಕೆ ಹಸಿವು ನೀಗಿಸದೇ, ಜಾನುವಾರುಗಳ ನೋ ವಿಗೂ ಸ್ಪಂದಿಸುವ ಗುಣವಿದೆ. ಹೀಗಾಗಿ ರೈತ ದೇಶದ ಬೆನ್ನೆಲುಬು ಎಂದು ಇಡೀ ರಾಷ್ಟ್ರವೇ ಕೊಂಡಾಡುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರ ಮಕ್ಕಳಿಗೆ ಅನುಕೂಲವಾಗಲು ೧೦೦೮ ರೈತ ಜೋಡಿಗಳಿಗೆ ಕಲ್ಯಾಣೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಿದೆ. ಈ ಕಲ್ಯಾಣೋತ್ಸವಕ್ಕೆ ಶೃಂಗೇರಿ ಶಾರ ದಾಪೀಠ ಹಾಗೂ ಧರ್ಮಸ್ಥಳದ ಹೆಗ್ಡೆಯವರ ಸಹಕಾರವು ಬಹಳಷ್ಟಿದೆ ಎಂದು ತಿಳಿಸಿದರು.
ರಾಷ್ಟ್ರದ ಸರ್ವತೋಮುಖ ಅಭಿವೃದ್ದಿಗಾಗಿ ಅಂಬೇಡ್ಕರ್ ಸಂವಿಧಾನ ರಚಿಸಿ ಸರ್ವರಿಗೂ ಸಮಾನ ಹಕ್ಕನ್ನು ಕಲ್ಪಿಸಿಕೊಟ್ಟವರು. ದೇಶದ ಅಹಿಂದಾ ನಾಯಕರೆಂದರೆ ಅಂಭೇಡ್ಕರ್ ಮಾತ್ರ. ಈ ಸ್ಥಾನವನ್ನು ಯಾ ರಿಂದಲೂ ತುಂಬಲು ಸಾಧ್ಯವಿಲ್ಲ. ಆ ಸಂವಿಧಾನದಡಿ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷ ಗಳು ಶೋ ಷಿತರಿಗೆ ನೆರವಾಗಬೇಕು ಎಂದು ಹೇಳಿದರು.
ಮಾಜಿ ಸೈನಿಕ ನಾಗರಾಜ್ ಮಾತನಾಡಿ ರೈತರು ಬೆಳೆದ ಒಂದಾಂಗಳು ಅನ್ನವು ಮಾನವರಿಗೆ ಪವಿತ್ರ ವಾದದು. ಆ ಅನ್ನದಾತನಿಗೆ ನೋವುಣಿಸುವ ಕೆಲಸ ಯಾರೂ ಮಾಡಬಾರದು. ದಿನನಿತ್ಯ ವ್ಯವಸಾಯ ವೃತ್ತಿ ಯಲ್ಲಿ ತೊಡಗಿಸಿಕೊಂಡು ವರ್ಷಪೂರ್ತಿ ಕಾಯಕಯೋಗಿಯಂತೆ ದುಡಿಯುವ ರೈತರಿಗೆ ಗೌರವ ನೀಡುವು ದನ್ನು ಕಲಿಯಬೇಕು ಎಂದರು.
ರೈತೋದಯ ಹಸಿರು ಸೇನೆ ಜಿಲ್ಲಾಧ್ಯಕ್ಷ ಹರೀಶ್ ಗೌಡನಹಳ್ಳಿ ಮಾತನಾಡಿ ರೈತರ ಬೆಳೆಗಳಿಗೆ ಸಮರ್ಪ ಕ ಬೆಲೆ ದೊರಕಬೇಕು. ಎಂದಿಗೂ ರೈತಜೀವ ಸಂಕಷ್ಟದಿಂದ ಕೂಡಿರದೇ, ನೆಮ್ಮದಿಯಿಂದ ಬಾಳಲು ಸರ್ಕಾ ರ ನಿಗಾವಹಿಸಬೇಕು. ಬೆಳೆಗಳಿಗೆ ಅನುಕೂಲವಾಗಲು ರಸಗೊಬ್ಬರಗಳನ್ನು ರಿಯಾಯಿತಿ ದರದಲ್ಲಿ ವಿತರಿಸಿದ ರೆ ರೈತರು ಬಾಳು ಹಸನಲಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ತಾಲ್ಲೂಕು ಕಚೇರಿಯಿಂದ ತಾಲ್ಲೂಕು ಕಚೇರಿಯಿಂದ ಚಂದ್ರಶೇಖರ್ ಆಜಾದ್‌ಪಾರ್ಕ್ ವೃತ್ತದವರೆಗೆ ಎತ್ತಿನ ಗಾಡಿ ಮೂಲಕ ಪುರುಷ ಹಾಗೂ ರೈತ ಮಹಿಳೆಯರು ಸಾಗುವ ಮೂಲಕ ರೈತ ದಿನಾ ಚರಣೆ ಮಹತ್ವವನ್ನು ಸಾರಿಸಿದರು. ಬಳಿಕ ನಿವೃತ್ತ ಯೋಧರು, ಆರಕ್ಷಕ ಸಿಬ್ಬಂದಿಗಳನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ರೈತೋದ ಹಸಿರುಸೇನೆ ರಾಜ್ಯ ಮಹಿಳಾ ರಾಜ್ಯಾಧ್ಯಕ್ಷೆ ದೇವಮ್ಮ, ಪ್ರಧಾನ ಕಾರ್ಯ ದರ್ಶಿ ಕೆ.ಆರ್.ಪೇಟೆ ಗೋವಿಂದರಾಜು, ಮಾಜಿ ಸೈನಿಕರಾದ ನಾಗರಾಜು, ಆರ್.ಪ್ರಕಾಶ್, ರೇವಣ್ಣ, ರಾಜೇ ಗೌಡ, ಪ್ರಕಾಶ್‌ಶೆಟ್ಟಿ, ವಿವಿಧ ಜಿಲ್ಲೆಗಳ ಅಧ್ಯಕ್ಷರಾದ ಸುಧೀರ್, ರಘು, ಅಶೋಕ್, ರಮೇಶ್, ಅಂಬಿ, ಕೃಷ್ಣ, ಶೋಭ, ತೇಜಸ್, ಜ್ಯೋತಿ ಉಪಸ್ಥಿತರಿದ್ದರು.
Farmers and Indian soldiers are like the country’s bond.
Leave a comment