Home Latest News ಐದು ದಿನಗಳ ಕಾಲ ರಂಗೋತ್ಸವ : ಅಜ್ಜಂಪುರದಲ್ಲಿ ಕಲಾ ವೈಭವ
Latest News

ಐದು ದಿನಗಳ ಕಾಲ ರಂಗೋತ್ಸವ : ಅಜ್ಜಂಪುರದಲ್ಲಿ ಕಲಾ ವೈಭವ

Share
Share

ಚಿಕ್ಕಮಗಳೂರು : ಸ್ವಾತಂತ್ರ್ಯ ಹೋರಾಟಗಾರ ಬಿ.ಎಂ.ಏಕೋರಾಮಸ್ವಾಮಿ ನೆನಪಿಗಾಗಿ ಅಜ್ಜಂಪುರದಲ್ಲಿ ಇದೇ ಜನವರಿ ಐದರಿಂದ ಹತ್ತನೇ ತಾರೀಖಿನವರೆಗೆ ರಂಗೋತ್ಸವ ಕಾರ್ಯಗಳು ನಡೆಯಲಿವೆ. ರಂಗ ಚಟುವಟಿಕೆಗಳ ತಾಣ,ಜಾನಪದ ಕಲೆಗಳ ನಾಡು ಕಲಾವಿದರ ಸಂಗಮವನ್ನೇ ಹೊಂದಿರುವ ಅಜ್ಜಂಪುರದಲ್ಲಿ ಪ್ರತಿ ವರ್ಷದಂತೆ ಈ ಕಾರ್ಯಕ್ರಮಗಳನ್ನು ಆಯೋಜಿಸುವ ಗೆಳೆಯರ ಬಳಗದ ಅಧ್ಯಕ್ಷ ಎ.ಸಿ.ಚಂದ್ರಪ್ಪ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದಾರೆ.

ಕೈಲಾಸಂ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ದ್ವಾರಕ್ಕೆ ಹೆಸರಾಂತ ವೈದ್ಯರಾದ ನಾಗರಾಜ್ ಹೆಸರಿಡಲಾಗಿದ್ದು ಊರಿನ ಹಿರಿಯರಾದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜನಾರ್ದನ ರಾವ್ ಮತ್ತು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ತಿಪ್ಪೇರುದ್ರಪ್ಪರವರನ್ನು ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಚಟ್ನಳ್ಳಿ ಮಹೇಶ್ ಮತ್ತು ಇಮ್ರಾನ್ ಅಹಮದ್ ಬೇಗ್ ಮತ್ತಿತರರು ಭಾಗವಹಿಸಲಿದ್ದಾರೆ.

ಜನವರಿ ಐದರಂದು ಬಂಗಾರದ ಮನುಷ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಜನವರಿ ಆರರಂದು ತುಲಾಭಾರ ನಾಟಕ ಜನವರಿ ಏಳರಂದು ಕೋಳೂರು ಕೊಡೆಗಾಸು ನಾಟಕ, ಜನವರಿ ಎಂಟರಂದು ಸರ ಸತಿಯಾಗಲೊಲ್ಲೆ, ಜನವರಿ ಒಂಬತ್ತುರಂದು ಮೋಳಿಗೆ ಮಾರಯ್ಯ ಹಾಗು ಜನವರಿ ಹತ್ತರಂದು ನಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜನವರಿ ಏಳರಂದು ಜಿಲ್ಲಾ ಮಟ್ಟದ ಭಾವಗೀತೆ ಮತ್ತು ಜಾನಪದಗೀತೆಗಳ ಸ್ಪರ್ಧೆ ನಡೆಯಲಿದ್ದು ಗೆಳೆಯರ ಬಳಗ ಮತ್ತು ಕಸಾಪದ ಹೆಚ್.ಆರ್.ಚಂದ್ರಪ್ಪ ಮತ್ತು ಕೃಷ್ಣಮೂರ್ತಿ, ಮೋಹನ್ ರಾವ್,ನವೀನ್ ಕುಮಾರ್ ಮತ್ತು ಪ್ರಶಾಂತ ಇಟಗಿ ಕಾರ್ಯಕ್ರಮದಲ್ಲಿ ಇದ್ದರು.

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...