Home Crime News ಹೊಸ ವರ್ಷದಂದೆ ಹೊಡೆದಾಡಿಕೊಂಡ ಪುಂಡರು : ಬಿಡಿಸಲು ಹೋದ ಆಂಬುಲೆನ್ಸ್ ಡ್ರೈವರ್ ಗೂ ಹಲ್ಲೆ
Crime News

ಹೊಸ ವರ್ಷದಂದೆ ಹೊಡೆದಾಡಿಕೊಂಡ ಪುಂಡರು : ಬಿಡಿಸಲು ಹೋದ ಆಂಬುಲೆನ್ಸ್ ಡ್ರೈವರ್ ಗೂ ಹಲ್ಲೆ

Share
Share

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ನ್ಯೂ ಇಯರ್ ಪಾರ್ಟಿ ಮುಗಿಸಿ ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ನಗರದ ಕೆಂಪನಹಳ್ಳಿ ಹಾಗೂ ಅರವಿಂದ ನಗರದ ಯುವಕರು ಕ್ಷುಲ್ಲಕ ಕಾರಣಕ್ಕೆ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಗಾಯಗೊಂಡವರನ್ನು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ಮತ್ತೆ ಆಸ್ಪತ್ರೆ ಆವರಣದಲ್ಲಿಯೇ ಯುವಕರು ಬಡಿದಾಡಿಕೊಂಡು ಎದ್ದು, ಬಿದ್ದು ಬೈಕ್ ಗಳನ್ನು ಬೀಳಿಸಿಕೊಂಡು ಮೈ ಮೇಲೆ ಪ್ರಜ್ಞೆ ಇಲ್ಲದಂತೆ ಹೊಡೆದಾಡಿದ್ದಾರೆ.

ಈ ವೇಳೆ ಅಲ್ಲಿಯೇ ಸ್ಥಳದಲ್ಲಿ ವಾಹನ ನಿಲ್ಲಿಸಿಕೊಂಡು ಜಗಳ ಬಿಡಿಸಲು ಹೋದ ಆಂಬುಲೆನ್ಸ್ ಚಾಲಕ ಮೇಲೂ ಪುಂಡ ಯುವಕರು ಹಲ್ಲೆ ನಡೆಸಿರುವ ಆರೋಪ ಕೂಡಾ ಕೇಳಿ ಬಂದಿದೆ. ಸದ್ಯ ಪರಸ್ಪರ ಬಡಿದಾಡಿಕೊಂಡಿದ್ದ ನಾಲ್ವರು ಪುಂಡ ಯುವಕರು ಜಿಲ್ಲಾಸ್ಪತ್ರೆಯಲ್ಲಿ ಕಳೆದ ರಾತ್ರಿಯೇ ಚಿಕಿತ್ಸೆ ಪಡೆದು ಇಂದು ಬೆಳಿಗ್ಗೆ ಡಿಸ್ಚಾರ್ಜ್ ಆಗಿದ್ದು, ಪ್ರಕರಣ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು ಅದರೆ ಹೊಡೆದಾಟ ಘಟನೆಯ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳಿದು ಎರಡು ಏರಿಯಾ ಹುಡುಗರು ಕಿತ್ತಾಡಿಕೊಂಡಿದ್ದಾರೆ, ಆದರೆ ಬಿಡಿಸಲು ಹೋದ ಆಂಬುಲೆನ್ಸ್ ಡ್ರೈವರ್ ಮೇಲೆ ನಡೆಸಿದ ಹಲ್ಲೆ ಬಗ್ಗೆ ಮಾತ್ರ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ

ಕೊಪ್ಪ: ತಾಲೂಕಿನ ಕುಂಚೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೇವಿಗೆ ಅಲಂಕರಿಸಿದ್ದ ಚಿನ್ನಾಭರಣ, ಬೆಳ್ಳಿಯ ವಿಗ್ರಹಗಳು ಹಾಗೂ ಕಾಣಿಕೆ ಹುಂಡಿಯ ಹಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ...

ನೂತನ ಚಿಕ್ಕಮಗಳೂರು ಜಿಪಂ ಸಿಇಒ ಮೀನಾಕ್ಷಿ ಆರ್ಯ ನೇಮಕ

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎಚ್.ಎಸ್. ಕೀರ್ತನಾ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ ಅವರನ್ನು ನೇಮಿಸಿ ರಾಜ್ಯ ಸರ್ಕಾರ...

Related Articles

ಶಿಕಾರಿ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಯುವಕ ಸಾವು

ಚಿಕ್ಕಮಗಳೂರು: ಶಿಕಾರಿಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಾಳೆಹೊನ್ನೂರು...

ನಕಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಹೆಸರಿನಲ್ಲಿ ಚಿನ್ನದ ಸರ ಪಡೆದು ವಂಚನೆ

ಚಿಕ್ಕಮಗಳೂರು: ತಾನು ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡು ಆಭರಣ ಮಳಿಗೆಯಿಂದ ₹1.82 ಲಕ್ಷ ಮೌಲ್ಯದ ಚಿನ್ನದ...

ಮನೆ ಬೀಗ ಮುರಿದು ₹7.06 ಲಕ್ಷ ಮೌಲ್ಯದ ನಗ-ನಗದು ಕಳವು

ಕಡೂರು: ಮನೆಯವರು ಕಣ್ಣಿನ ಚಿಕಿತ್ಸೆಗಾಗಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು...

ಫೇಸ್‌ಬುಕ್‌ನ ‘ಕೇರಳ ಲಾಟರಿ’ ಜಾಹೀರಾತು ನಂಬಿ ₹4.30 ಲಕ್ಷ ಕಳೆದುಕೊಂಡ ವ್ಯಕ್ತಿ

ಚಿಕ್ಕಮಗಳೂರು: ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ‘ಕೇರಳ ಲಾಟರಿ’ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿ, ಲಾಟರಿ ಗೆದ್ದಿರುವುದಾಗಿ ನಂಬಿ...