ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಇದೀಗ ಭಾರೀ ಮಳೆಗೆ ಕಾಫಿನಾಡ ಬಯಲು ಸೀಮೆ ಎಂದೇ ಹೆಸರುವಾಸಿಯಾಗಿರುವ ಕಡೂರು ತಾಲೂಕಿನ ಗಣಪತಿಹಳ್ಳಿಯಲ್ಲಿ ಪುರಾತನ ಬಾವಿಯೊಂದು ಕುಸಿದಿದೆ.
ಕಾಫಿನಾಡ ಬಯಲುಸೀಮೆ ಗಣಪತಿಹಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗಿದ್ದು, ವಾರ್ಷಿಕ ಸರಾಸರಿ ಮಳೆ ಸುರಿಯದ ಊರಲ್ಲಿ ಇದೀಗ ಮಳೆಯಿಂದ ಇದ್ದಕ್ಕಿದ್ದಂತೆ ಕುಸಿದ ಬಾವಿ ಕುಸಿದಿದೆ.
ನಿರಂತರ ಮಳೆಯಿಂದ ಕಳೆದ ಮೂರು ದಿನಗಳಿಂದ ಬಾವಿಯಲ್ಲಿ ನೀರು ಸಂಪೂರ್ಣ ಭರ್ತಿಯಾಗಿತ್ತು.
ಇದೀಗ ಭೂಮಿಯ ತೇವಾಂಶದಿಂದಾಗಿ ಇದ್ದ ಜಾಗದಲ್ಲೇ ಸಂಪೂರ್ಣ ಕುಸಿದಿದ್ದು, ನೀರಿನೊಳಗೆ ಪುರಾತನ ಬಾವಿ ಮುಚ್ಚಿ ಹೋಗಿದೆ. ಸದ್ಯ ಈ ಘಟನೆಯಿಂದಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ.
Ancient well collapses in Ganapathihalli
Leave a comment