ಚಿಕ್ಕಮಗಳೂರು: ಸಹಕಾರಿ ಚಳುವಳಿಯ ಮೂಲತತ್ವವೇ ಸ್ವಾವಲಂಬನೆ, ಪರಸ್ಪರ ಸಹ ಕಾರ, ಸಮಾನ ಅವಕಾಶ ಹಾಗೂ ಸಾಮಾಜಿಕ ಜವಾಬ್ದಾರಿಯಡಿ ರೂಪುಗೊಂಡಿದೆ. ಈ ತತ್ವದಡಿ ಸಂಘವು ದುಡಿದಿರುವ ಪರಿಣಾಮ ಮುಂಚೂಣಿ ಸ್ಥಾನದಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಹೇ ಳಿದರು.
ನಗರದ ರಂಗಣ್ಣ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘ ದ ೨೫ನೇ ವರ್ಷದ ಸಾರ್ಥಕ ಸೇವೆಯನ್ನು ಪೂರೈಸಿದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರದಲ್ಲಿ ನಾನು ಎನ್ನುವುದರಿಂದ ಏನನ್ನು ಸಾಧನೆ ಮಾಡಲಾಗದು. ನಾವುಗಳು ಅನ್ನುವ ಭಾವನೆ ಜೊತೆಗೆ ಎಲ್ಲರ ಶಕ್ತಿ ಒಗ್ಗೂಡಿದರೆ ಆ ಮೂಲಕ ಹೆಚ್ಚು ಸಾಧನೆ ಮಾಡಿ ಸಮಾಜವನ್ನು ಮುನ್ನೆಡೆ ಸಲು ಸಾಧ್ಯ. ಈ ಹಿನ್ನೆಲೆ ಸಹಕಾರಿ ಚಳುವಳಿ ಪರಸ್ಪರ ಅವಲಂಬಿತರಾಗಿ ಸ್ವಾವಲಂಬಿ ಸಮಾಜ ನಿರ್ಮಿಸಲು ಪ್ರಾರಂಭಗೊಂಡಿದೆ ಎಂದರು.
ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಸಹಕಾರಿ ಸಂಸ್ಥೆ ನಿರ್ಮಿಸುವುದು ಸುಲಭವಲ್ಲ. ಸುದೀಘ ವಾ ಗಿ ೨೫ ವರ್ಷ ಪೂರೈಸುವುದು ಶ್ರಮದ ಕೆಲಸವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೆಲವೇ ಸಂಸ್ಥೇಗಳು ಲಾಭ ದಾಯಕವಾಗಿದ್ದು ಸದಸ್ಯರಿಗೆ ಶೇ.೧೦ ರಷ್ಟು ಡಿವಿಡೆಂಟ್ ನೀಡುತ್ತಿವೆ. ಆ ಸಾಲಿನಲ್ಲಿ ಪದವಿಧರರ ಸಹಕಾರ ಸಂಘವು ಒಂದು ಎಂದು ಹೇಳಿದರು.
ಪದವೀಧರರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವುದನ್ನು ಮನಗಂಡ ಲೋಕಪ್ಪಗೌಡರು ಸಹಕಾರಿ ಬ್ಯಾಂಕ್ ತೆರೆದು ಜೀವನ ಹಾಗೂ ಉದ್ಯೋಗಕ್ಕೆ ನೆರವಾದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ಅಧ್ಯ ಕ್ಷ ಬಿ.ಸಿ.ಲೋಕಪ್ಪಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವರಸಿದ್ದಿ ವೇಣುಗೋಪಾಲ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ದಿವಾಕರ್, ಜಿಲ್ಲಾ ಪದವಿಧರರ ಸಂಘದ ಉಪಾಧ್ಯಕ್ಷ ಹೆಚ್.ಆರ್.ಮರುಳಪ್ಪ, ನಿರ್ದೇಶಕರಾದ ಡಾ|| ಡಿ.ಎಲ್.ವಿಜಯ್ಕುಮಾರ್, ಸಿ.ಆರ್.ಪ್ರೇಮ್ಕುಮಾರ್, ಯು.ಟಿ.ನಾಗರಾಜು, ವೆಂಕಟೇಶ್ ಪೈ, ಬಿ.ಹೆಚ್. ಶಂಕರ್, ಎಂ.ಸಿ.ಶಿವಾನಂದಸ್ವಾಮಿ, ಎಂ.ಪಿ.ಗಂಗೇಗೌಡ ಮುಂತಾದವರಿದ್ದರು.
The purpose of the cooperative movement is self-reliance and social opportunity.
Leave a comment