Home namma chikmagalur chikamagalur ದೇಗುಲ ಮನಸ್ಸು, ಮೈಯನ್ನು ಶುದ್ಧಗೊಳಿಸುವ ಕೇಂದ್ರ
chikamagalurHomeLatest Newsnamma chikmagalur

ದೇಗುಲ ಮನಸ್ಸು, ಮೈಯನ್ನು ಶುದ್ಧಗೊಳಿಸುವ ಕೇಂದ್ರ

Share
Share

ಚಿಕ್ಕಮಗಳೂರು:  ದೇಗುಲ ಮನಸ್ಸು ಮತ್ತು ಮೈಯನ್ನು ಶುದ್ಧಗೊಳಿಸುವ ಪವಿತ್ರ ಕೇಂ ದ್ರ. ಗರ್ಭಗುಡಿಯಲ್ಲಿ ಭಗವಂತನು ನೆಲೆಸಿರುವಂತೆ, ಪ್ರತಿಯೊಬ್ಬ ಮನುಷ್ಯನು ಹೃದಯವೆಂಬ ಗರ್ಭಗುಡಿ ಯಲ್ಲಿ ದೇವರನ್ನು ಪ್ರತಿಷ್ಟಾಪಿಸಿ ಆರಾಧಿಸಬೇಕು ಎಂದು ಬಸವತತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ನಗರದ ಹಿರೇಮಗಳೂರು ಗ್ರಾಮದಲ್ಲಿ ಸೋಮವಾರ ಗ್ರಾಮಸ್ಥರು, ದಾನಿಗಳ ಸಹಕಾರದೊಂದಿಗೆ ೧.೪೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಇತಿಹಾಸ ಪ್ರಸಿದ್ಧ ಶ್ರೀ ಪಾತಾಳೇಶ್ವರ ಸ್ವಾಮಿ ನೂತನ ದೇ ವಾಲಯದ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಆರ್ಶೀವಚನ ನೀಡಿದರು.

ಮಾನವ ದೇಹವನ್ನು ದೇಗುಲವಾಗಿಸಿಕೊಳ್ಳಬೇಕು. ಹೂವು, ಹಣ್ಣು-ಕಾಯಿ ಭಗವಂತನ ಸನ್ನಿಧಾನದ ಲ್ಲಿ ಪೂಜಿಸಿದ ನಂತರ ಪ್ರಸಾದವಾಗಲಿದೆ. ಆ ರೀತಿಯೇ ಮನುಷ್ಯ ದೇವರು ದರ್ಶನ, ತೀರ್ಥ ಪ್ರಸಾದ ಸ್ವೀ ಕರಿಸಿದ ನಂತರ ಸನ್ನಡತೆಯ ಮಾನವರಾಗಬೇಕು. ಇದು ಬದುಕಿನ ಮೌಲ್ಯವನ್ನು ಹೆಚ್ಚಿಸುವ ಕಾರ್ಯಮಾ ಡಲಿದೆ ಎಂದು ತಿಳಿಸಿದರು.

ಹಿರೇಮಗಳೂರು ದೇವಾನು-ದೇವತೆಗಳು ನೆಲೆಸಿರುವ ಅಪರೂಪದ ಗ್ರಾಮ. ಹೀಗಾಗಿಯೇ ಗ್ರಾಮಸ್ಥ ರು ಸಂಸ್ಕೃತಿ, ಸಂಪ್ರದಾಯ ಹಾಗೂ ಸದ್ವಿಚಾರದ ಸಂಕೇತವಾಗಿದ್ದಾರೆ. ಪ್ರಸ್ತುತ ದೇವಾಲಯ ೧.೪೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಉಳಿದಿರುವ ಮೊತ್ತವನ್ನು ದಾನಿಗಳು, ಗ್ರಾಮಸ್ಥರು ಹಾಗೂ ಶಾಸಕರು ಪೂ ರೈಸುತ್ತಿರುವುದು ಶ್ಲಾಘನೀಯ ಎಂದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಪಂಚಲಿಂಗೇಶ್ವರ ದೇವಾಲಯ ಹೊಂದಿರುವ ಗ್ರಾಮ ಹಿರೇ ಮಗಳೂರು. ಇಲ್ಲಿ ಮುತ್ತಿನಮ್ಮ, ಕೋದಂಡರಾಮಚಂದ್ರಸ್ವಾಮಿ ದೇವಾಲಯ ಅಭಿವೃದ್ದಿಗೊಂಡಿದ್ದು, ಇದೀ ಗ ಶ್ರೀ ಪಾತಾಳೇಶ್ಚರ ದೇವಾಲಯ ಜೀರ್ಣೋದ್ದಾರಕ್ಕೆ ಮುಂದಾಗಿದೆ. ಈ ಅಭಿವೃಧ್ದಿಗೆ ಹಿಂದಿನ ದೇವಾಲ ಯ ಅರ್ಚಕರ ಕುಟುಂಬವು ದೊಡ್ಡಮಟ್ಟಿನಲ್ಲಿ ಸಹಾಯಹಸ್ತ ಚಾಚಿಸಲಾಗಿದೆ ಎಂದು ಹೇಳಿದರು.

ದೇವಾಲಯ ಅಭಿವೃದ್ದಿಗೆ ಗ್ರಾಮಸ್ಥರು ಈಗಾಗಲೇ ಟ್ರಸ್ಟ್ ರಚಿಸಿಕೊಂಡಿದ್ದು, ಒಂದೊಂದೇ ಹಂತದಲ್ಲಿ ಮುಂದುವರೆದಲ್ಲಿ ದಾನಿಗಳ ಸಹಕಾರವು ಲಭ್ಯವಾಗಲಿದೆ. ವಿಶೇಷವಾಗಿ ವೀರಶೈವ-ಲಿಂಗಾಯಿತ ಸಮಾಜ ಸೇರಿದಂತೆ ಇತರೆ ಮಠ-ಮಂದಿರಗಳು ನಡೆಯುತ್ತಿರುವುದು ಭಕ್ತಾಧಿಗಳ ಅನುದಾನ ಬಳಕೆಯಿಂದ. ಹೀ ಗಾಗಿ ದೊಡ್ಡಪಾಲು ಅರ್ಚಕರ ಕುಟುಂಬವು ನೀಡಿದ್ದು, ಉಳಿದ ಪಾಲು ದಾನಿಗಳು ನೀಡಲಿದ್ದಾರೆ ಎಂದರು.

ಗ್ರಾಮದಲ್ಲಿ ಪಾತಳೇಶ್ವರ, ಮಲ್ಲಿಕಾರ್ಜುನ, ಅಮೃತೇಶ್ವರ, ಗೌರೇಶ್ವರ ಹಾಗೂ ವೈದ್ಯನಾಥೇಶ್ವರ ಸೇರಿ ದಂತೆ ಐದು ಪಂಚಲಿಂಗೇಶ್ವರ ದೇವಾಯವಿದೆ. ಹಿಂದೆ ಪಂಚಲಿಂಗ ದರ್ಶನ ಮೈಸೂರು ಜಿಲ್ಲೆಗೆ ತೆರಳಬೇ ಕಿತ್ತು. ಇದೀಗ ಗ್ರಾಮದಲ್ಲೇ ನಿರ್ಮಿಸುವ ಉದ್ದೇಶದಿಂದ ದಿವ್ಯ ದರ್ಶನಕ್ಕೆ ತೀರ್ಮಾನಿಸಲಾಗಿದ್ದು ಮುಂದೆ ಸ್ಥಳೀಯರು ಸೇರಿದಂತೆ ಹೊರಜಿಲ್ಲೆಯವರಿಗೆ ಪಂಚಲಿಂಗ ದರ್ಶನ ಲಭ್ಯವಾಗಲಿದೆ ಎಂದರು.

ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಎಂ.ಯೋಗೀಶ್ ಮಾತನಾಡಿ ಪುರಾಣ ಇತಿಹಾಸವುಳ್ಳ ದೇವಾಲ ಯ ಅಭಿವೃದ್ದಿಗೆ ಅರ್ಚಕರ ಕುಟುಂಬದ ಸಿದ್ದಮ್ಮ ಎಂಬುವವರು ೬೫ ಲಕ್ಷ ರೂ.ಗಳ ದೇಣಿಗೆ ನೀಡಿದ್ದು ಉ ಳಿದಂತೆ ಗ್ರಾಮಸ್ಥರ, ದಾನಿಗಳ ಸಹಕಾರದಿಂದ ಪೂರ್ಣಗೊಳಿಸಲಾಗುವುದು. ಅಲ್ಲದೇ ನವಗ್ರಹ ಹಾಗೂ ಅಶ್ವಥ್‌ವೃಕ್ಷ ಪ್ರತಿಷ್ಟಾಪಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಫಿ ಬೆಳೆಗಾರ ಎಂ.ವಿ.ಷಡಕ್ಷರಿ, ವಾಣಿಜ್ಯೋದ್ಯಮಿ ಚಿದಾನಂದ್, ವಿಧಾನ ಪರಿ ಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಸಮಾಜಸೇವಕಿ ಪಲ್ಲವಿ ಸಿ.ಟಿ.ರವಿ, ಬಿಜೆಪಿ ಮುಖಂಡ ಹೆಚ್.ಸಿ ಕಲ್ಮರುಡಪ್ಪ, ದಾನಿಗಳಾದ ಅನಂತಯ್ಯ, ಸಿದ್ದಪ್ಪ, ಬಿ.ಎನ್.ವೆಂಕಟೇಶ್, ಗ್ರಾಮಸ್ಥರಾದ ಹೆಚ್.ಪಿ.ಸುರೇಶ್, ಕೇಶವ ಹಾಗೂ ಟ್ರಸ್ಟ್ ಸದಸ್ಯರುಗಳು ಉಪಸ್ಥಿತರಿದ್ದರು.

The temple is a center for purifying the mind and body.

Share

Leave a comment

Leave a Reply

Your email address will not be published. Required fields are marked *

Don't Miss

ಏ.9 ರಿಂದ ಆದಿಚುಂಚನಗಿರಿ ಮಹಾ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ

ಚಿಕ್ಕಮಗಳೂರು: ನಗರದ ಆದಿಚುಂಚನಗಿರಿ ಮಹಾ ವಿದ್ಯಾಲಯದಲ್ಲಿ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಆನ್ ಎಮರ್ಜಿಂಗ್ ರಿಸರ್ಚ್ ಇನ್ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್ ಅಂಡ್ ಮಷಿನ್ ಇನ್ಫಾರ್ಮ್ಯಾಟಿಕ್ಸ್ ಎಂಬ ಅಂತರಾಷ್ಟ್ರೀಯ ಸಮ್ಮೇಳನವನ್ನು ಏ.೯ ಮತ್ತು ೧೦...

ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಚಿಕ್ಕಮಗಳೂರು: ಕಮಲದ ಚಿಹ್ನೆಯಡಿ ಉದಯಿಸಿದ ಭಾಜಪ, ಜಗತ್ತಿನ ಎದುರು ದೇ ಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅನೇಕ ಸವಾಲು ಹಾಗೂ ಏಳುಬೀಳಿನ ನಡುವೆಯೂ ಎದೆ ಗುಂದದೇ ರಾಷ್ಟದ ಏಕೀಕರಣಕ್ಕೆ ದುಡಿಯುತ್ತಿದೆ ಎಂದು...

Related Articles

ಸಿಎಂ ಪತ್ನಿ ಜಿಲ್ಲೆಯ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರೆ,...

ಟಾಟಾಏಸ್-ಬೈಕ್ ನಡುವೆ ಅಪಘಾತ:ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ತರೀಕೆರೆ: ಟಾಟಾಏಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಿಂಬದಿ...

ಭದ್ರಾ ಹಿನ್ನೀರಿನ ಸಿದ್ದರಾಮಯ್ಯ ಸೇತುವೆ ಲೋಕಾರ್ಪಣೆ

ಚಿಕ್ಕಮಗಳೂರು:  ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದವರಿಗೆ ನಮ್ಮ ಸಾಧನೆಯೇ ಉತ್ತರವಾಗಿದ್ದು, ಕೇಂದ್ರ ಸರ್ಕಾರಕ್ಕಿಂತಲೂ...

ಕೇಂದ್ರಕ್ಕಿಂತ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ 

ಚಿಕ್ಕಮಗಳೂರು:  ಜನಕಲ್ಯಾಣಕ್ಕೆ ಒತ್ತಾಸೆಯಾಗಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳೂ ಒಂದು ವಿಧದ ಅಭಿವೃದ್ಧಿಯಾಗಿದ್ದು, ಗ್ಯಾರಂಟಿಗಳ ನಡುವೆಯೂ ರಾಜ್ಯದ...