ತರೀಕೆರೆ: ಟಾಟಾಏಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾದ ಘಟನೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಭಾನುವಾರ ನಡೆದಿದೆ.
ತಾಲ್ಲೂಕಿನ ರಂಗೇನಹಳ್ಳಿ ವಾಸಿ ಮಂಜುನಾಥ್ (23) ಮೃತ ಪಟ್ಟವರು. ಬೈಕ್ ಹಿಂಬದಿ ಸವಾರ ಶ್ರೀನಿವಾಸ್ (24) ಅವರಿಗೂ ಗಂಭಿರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ರಂಗೇನಹಳ್ಳಿಯಿಂದ ತರೀಕೆರೆ ಬೈಪಾಸ್ ರಸ್ತೆ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಮತ್ತು ಎದುರುಗಡೆಯಿಂದ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ.
ತರೀಕೆರೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tata Ace-bike accident: Biker dies on the spot
Leave a comment