ಅಪರಿಚಿತ ವ್ಯಕ್ತಿಯೊಬ್ಬ ಎಪಿಎಂಸಿ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಬೀರೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಿ.ವಿ. ತಿಪ್ಪೇಶ್ ಅವರು ಇಲಾಖೆಯ ಸಿಬ್ಬಂದಿ, ಪುರಸಭೆಯ ಇಬ್ಬರು ನೌಕರರು ಹಾಗೂ ಪಶು ವೈದ್ಯಾಧಿಕಾರಿಗಳ ತಂಡ ರಚಿಸಿ, ದಾಳಿ ನಡೆಸಿದಾಗ ತರೀಕೆರೆ ತಾಲ್ಲೂಕು ಮುಂಡ್ರೆ ತಾಂಡ್ಯ ವಾಸಿ ರಘು.ಎಂ ಎಂಬಾತ ಗಾಂಜಾ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೆಎಸ್ಆರ್ಟಿಸಿ ಬಸ್ನಲ್ಲಿ ಬಂದ ವ್ಯಕ್ತಿಯಿಂದ ಈ ಸರಕು ಪಡೆದಿದ್ದು, ಹೆಚ್ಚಿನ ಆದಾಯ ಗಳಿಸಲು ಈ ಕಸುಬಿಗೆ ಬಂದಿದ್ದೇನೆ. ನನಗೆ ಗಾಂಜಾ ನೀಡಿದ ವ್ಯಕ್ತಿಯ ಪರಿಚಯ ಇಲ್ಲ ಎಂದು ಆರೋಪಿ ಹೇಳಿದ್ದ. ಆರೋಪಿಯಿಂದ 240 ಗ್ರಾ. ಗಾಂಜಾ, ಸ್ಕೂಟರ್ ಹಾಗೂ ₹500 ಹಣವನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಕಾನ್ಸ್ಟೆಬಲ್ಗಳಾದ ಶಿವಾನಂದ್, ಓಂಕಾರಸ್ವಾಮಿ, ಯತೀಶ್, ಜೀಪ್ ಚಾಲಕ ಚಂದ್ರನಾಯ್ಕ ಮತ್ತು ಪುರಸಭೆ ನೌಕರರಾದ ಕರಿಯಪ್ಪ, ಲೋಕೇಶಪ್ಪ ಹಾಗೂ ಪಶು ವೈದ್ಯಾಧಿಕಾರಿ ಮೋಹನ್ ಕುಮಾರ್ ಭಾಗವಹಿಸಿದ್ದರು.
Ganja seized in Birur – accused arrested
Leave a comment