Home namma chikmagalur chikamagalur ಸಮಾಜದ ಚುನಾವಣೆಯಲ್ಲಿ “ವಿಜ್ಞಾನ ” ಅರಾಧ್ಯರ “ಟೀಮ್ ಗೆ ಗುತ್ತಿಗೆ”
chikamagalurHomeLatest Newsnamma chikmagalur

ಸಮಾಜದ ಚುನಾವಣೆಯಲ್ಲಿ “ವಿಜ್ಞಾನ ” ಅರಾಧ್ಯರ “ಟೀಮ್ ಗೆ ಗುತ್ತಿಗೆ”

Share
Share

ಶ್ರೀ ವೀರಶೈವ ಲಿಂಗಾಯತ ಸಮಾಜ (ರಿ) ಚುನಾವಣೆ ಎಂಬ ಹೈಡ್ರಾಮಾ ನೋಡಿದವರು ಎಲ್ಲಾ ಕಡೆ ನಗೆಯಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಗುತ್ತಿಗೆ ಹಿಡಿದಿರುವ ಮತ್ತೆ ಐದು ವರ್ಷಕ್ಕೆ ಗುತ್ತಿಗೆ ಹಿಡಿಯಲು “ಅವಿರೋಧ” ಎಂದು ಆಯ್ಕೆ ಆಗಲು ಪಟ್ಟ ಕಷ್ಟ ಒಂದು ಕಾದಂಬರಿ ಬರೆಯಬಹುದು ಎಂದು ಶಾಸ್ತ್ರೀ ಹೇಳುತ್ತಿರುವುದು ನಿಜ ಎನ್ನಿಸುತ್ತದೆ.

ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾಗಿದ್ದ ಶಿವಶಂಕರ್ ಹಾಲಿ ಅಧ್ಯಕ್ಷರು ಮತ್ತೆ ರಿನಿವಲ್ ಮಾಡಿಕೊಂಡಿದ್ದಾರೆ. ಪ್ರದಾನ ಕಾರ್ಯದರ್ಶಿ ಎಂಬ ಪಟ್ಟಕ್ಕೆ” ಗ್ಯಾರಂಟಿ “ಎಂಬಂತೆ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಹದಿನೈದು ವರ್ಷಗಳಿಂದ ಪ್ರದಾನ ಕಾರ್ಯದರ್ಶಿಯಾಗಿರುವ ಶಿವಾನಂದ ಸ್ವಾಮಿ ಖಾಯಂ ಪಟ್ಟಕ್ಕೆ ಅಂಟಿಕೊಂಡು ಚಪ್ಪರಗಾಲು ಹಾಕಿ ಕುಳಿತಿದ್ದಾರೆ.ಅಬ್ಬಬ್ಬಾ ಅಸಾಧ್ಯ ಅರಾಧ್ಯರು ಪಕ್ಕ ಕಮ್ಯೂನಿಸ್ಟ್‌ ಆದರೆ ಅಲ್ ಪಾರ್ಟಿ ಅರಾಧ್ಯ ಎಂಬ ಬಿರುದಾಂಕಿತರು ಇವರೆಲ್ಲರೂ ಸೇರಿ ಸಮಾಜ ಕಟ್ಟುತ್ತಿರುವುದು ಒಳ್ಳೆಯದು.ಆದರೆ ಕಳೆದ ಹತ್ತು ವರ್ಷಗಳಿಂದ ಇನ್ನೂರು ಜನರ ಸದಸ್ಯರನ್ನು ಮಾಡಲು ತಿಣುಕಾಡುತ್ತಿದ್ದಾರೆ.ಆದರೆ ಹತ್ತು ಕೋಟಿಯ ಕಟ್ಟಡ ಕಟ್ಟುತ್ತಿರುವುದು ಮಾತ್ರ ಪ್ರಶಂಸೆ ಪಡಲೇ ಬೇಕು.

ಇದಕ್ಕೆ ಒಂದು ನಿದರ್ಶನ ಕೊಡಬಹುದು .ಒಬ್ಬ ಬೆಟ್ಟ ಹತ್ತಲು ಬಂದ ಕತ್ತಲೆ ಅವರಿಸಿತು ಸಮೀಪದಲ್ಲಿ ಒಂದು ಸಣ್ಣ ಮನೆ ಕಾಣಿಸಿತು ಅಲ್ಲಿ ಉಳಿದು ಕೊಂಡು ಹೋಗುವ ಎಂದು ಮನೆ ಬಳಿ ಹೋದ ಅಲ್ಲಿ ಮಹಿಳೆ ಇದ್ದಳು ತಾನು ಬಂದ ಉದ್ದೇಶ ಹೇಳಿದ ಆಯಿತು ಇಲ್ಲಿ ಉಳಿದುಕೊಂಡು ಹೋಗಿ ಒಂದೇ ಹಾಸಿಗೆ ಇರುವುದು ಇಬ್ಬರ ಮಧ್ಯೆ ದಿಂಬು ಇಟ್ಟುಕೊಂಡು ಮಲಗುವ ಎಂಬ ಕಂಡಿಷನ್ ಗೆ ಒಪ್ಪಿ ಮಲಗಿದರು.ಬೆಳಗ್ಗೆ ಎದ್ದು ಬೆಟ್ಟ ಹತ್ತುಲು ಹೊರಟು ನಿಂತವನಿಗೆ ನೀನು ರಾತ್ರಿ ದಿಂಬು ಹತ್ತಲಾಗಲಿಲ್ಲ ಇನ್ನೂ ಬೆಟ್ಟ ಹತ್ತುವೇ ಎಂದು ಮೂದಲಿಸಿ ಕಳಿಸಿದಾಗ ಅರಾಧ್ಯರ ತಂಡ ದಿಂಬು ಹತ್ತುತ್ತೇವೆ ,ಬೆಟ್ಟವನ್ನು ಹತ್ತುತ್ತೇವೆ ಅದರೆ ಸಾಯುವ ತನಕ ಪೊಜೀಷನ್ ಬೇಕು ಎಂದ ರಂತೆ ಪಾಪ ಕಾಡಿ,ಬೇಡಿ ದಿಂಬು ಹತ್ತಿ ಬೆಟ್ಟ ಹತ್ತುವವರಿಗೆ ಬೇಡ ಎನ್ನಲು ಸಾಧ್ಯವೇ?

ಹಲವರಿಂದ ಸದಸ್ಯತ್ವಕ್ಕೆ ಹಣ ಪಡೆಯಲಾಗಿದೆ ಹೌಸಿಂಗ್ ಬೋರ್ಡ್ ವಕೀಲರಾದ ಸುನಿಲ್ ಗೆ ದುಡ್ಡು ಇಲ್ಲ, ಸದಸ್ಯತ್ವವು ಇಲ್ಲ ಇಂತಹ ಪ್ರಕರಣಗಳಿವೆ ಎಂಬ ವ್ಯಾಪಕ ದೂರುಗಳು ಇವೆ.ಸಮಾಜ ಸೇವಕರು, ಸಾಹಿತಿಗಳು,ಸಂಘಟಕರಾದ ಬೀಕನಹಳ್ಳಿ ಭಾರತಿ ಶಿವರುದ್ರಪ್ಪಗೆ ಕೊಕ್ ನೀಡಿ ಶಾಸಕ ತಮ್ಮಯ್ಯರ ಒಲಿಸಿಕೊಳ್ಳಲು ಅವರ ಪತ್ನಿ ಮಂಗಳಗೆ ಮಣಿ ಹಾಕಲಾಗಿದೆ.ಒಟ್ಟಾರೆ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವವರಿಗೆ ಬೇವಿನ ಸೊಪ್ಪನ್ನು ಕೊಟ್ಟಿದ್ದಾರೆ ಎಂದು ಗುಸುಗುಡುಗುತ್ತಿದ್ದಾರೆ. ವ್ಯಕ್ತಿಗಳ ವಿರುದ್ಧ ಹೋರಾಟವಲ್ಲ ಸಂಚು ಒಳ ಸಂಚು ವ್ಯವಸ್ಥೆ ವಿರುದ್ದ ಅಷ್ಟೇ .

ದೊಡ್ಡವರು (ಹಣ) ಏನು ಮಾಡಿದರು ಫ್ಯಾಷನ್, ಬಡವರು ಏನು ಮಾಡಿದರು ಗತಿ ಇಲ್ಲದವರು ಎಂದು ಮಾತನಾಡುವ ಜನರಿರುವಾಗ ಅರಾಧ್ಯರ ಟೀಮ್ ಮಾಡುತ್ತಿರುವುದರ ಬಗ್ಗೆ ಮತ್ತೊಮ್ಮೆ ಹೇಳುವ ಅವಶ್ಯಕತೆ ಇಲ್ಲ. “ಚುನಾವಣೆ ಎಂಬ ಹೈಡ್ರಾಮಾ” ದ ಅವಶ್ಯಕತೆ ಇರಲಿಲ್ಲ .ಐದು ಸಾವಿರ ಸದಸ್ಯತ್ವದ ಶುಲ್ಕ ಹೆಚ್ಚಿಸಿದಂತೆ ಇನ್ನೂ ಹತ್ತು ವರ್ಷದ ಗುತ್ತಿಗೆ ಪಡೆಯಲು ಆಡ್ಡಿ ಇರಲಿಲ್ಲ.

ಎಲ್ಲಾ ಅವಿರೋಧ ಆಯ್ಕೆ ಆಗಿವೆ ಚಿಕ್ಕಮಗಳೂರು ಮತ್ತು ಅಂಬಳೆ ಕ್ಷೇತ್ರಗಳು ಮಾತ್ರ ಚುನಾವಣೆ ನಡೆಯುತ್ತಿರುವುದು ಸೋಜಿಗ.ದೊಡ್ಡವರ ಸಣ್ಣತನಕ್ಕೆ ಬಡವರು ಬಲಿಯಾಗುತ್ತಿರುವುದು ತಲತಲಾಂತರದಿಂದ ಬಂದ ಬಳುವಳಿ.ಬಡವರು ಇಲ್ಲಿ ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಲೆಯಮೇಲೆ ಕೈ ಹೊತ್ತು ಕುಳಿತಿದ್ದಾರೆ.ದೊಡ್ಡವರೆನ್ನುವ ಇವರು ಇವರಿಗಿಂತ ದೊಡ್ಡವರ ಮನೆ ಬಾಗಿಲು ಬಡಿಯುತ್ತಿದ್ದಾರೆ ಇದೇ ಸಮಾಜ.ಇವರುಗಳು ಮಾತ್ರ ವಿಜ್ಞಾನ.

“Science” is a “contract” to the “team” of the atheists in the society’s elections

Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...